Asianet Suvarna News Asianet Suvarna News

2027ರ ವೇಳೆಗೆ ಭಾರತದಲ್ಲೇ ಉತ್ಪಾದಿಸಿದ $ 10 ಬಿಲಿಯನ್ ಸರಕು ರಫ್ತು; ವಾಲ್‌ಮಾರ್ಟ್ ಸಂಕಲ್ಪ!

ಭಾರತ ಇದೀಗ ವಿಶ್ವದ ಹಲವು ಉತ್ಪನ್ನಗಳ ಹಬ್ ಆಗಿದೆ. ಭಾರತದಿಂದ ಹಲವು ರಾಷ್ಟ್ರಗಳಿಗೆ ಹಲವು ಉತ್ಪನ್ನಗಳು ರಫ್ತಾಗುತ್ತಿದೆ. ಇದೀಗ ವಾಲ್‌ಮಾರ್ಟ್ ರಫ್ತು ವಹಿವಾಟಿನಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಈ ಕುರಿತು ವಾಲ್‌ಮಾರ್ಟ್ ಮಹತ್ವದ ಘೋಷಣೆ ಮಾಡಿದೆ.
 

Walmart commits to exporting US 10 billion dollar of India made goods each year by 2027 ckm
Author
Bengaluru, First Published Dec 10, 2020, 8:50 PM IST

ಬೆಂಗಳೂರು (ಡಿ.10) ಹಲವು ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಭಾರತ ಗುರುವಾಗಿದೆ. ಪ್ರಮುಖವಾಗಿ ಭಾರತ ಜಾಗತಿಕ ಉತ್ಪಾದನ ಕೇಂದ್ರವಾಗಿ ಮಾರ್ಪಟ್ಟಿದೆ. ಇದೀಗ ಭಾರತದ ಉತ್ಪಾದನೆ ಮತ್ತು ರಫ್ತು ವಹಿವಾಟನ್ನು  ಮೂರು ಪಟ್ಟು ಹೆಚ್ಚಿಸುವತ್ತ ವಾಲ್‌ಮಾರ್ಟ್ ಹೆಜ್ಜೆ ಇಟ್ಟಿದೆ.  ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಹಬ್ ಆಗಿ ಮುಂದುವರಿಯುತ್ತಿರುವುದನ್ನು ಅಂಗೀಕರಿಸಿರುವ ವಾಲ್‍ಮಾರ್ಟ್, 2027 ರ ವೇಳೆಗೆ ಭಾರತ ನಿರ್ಮಿತ ಉತ್ಪನ್ನಗಳನ್ನು ಪ್ರತಿ ವರ್ಷ 10 ಬಿಲಿಯನ್ ಡಾಲರ್ ಮೊತ್ತದ ಸರಕುಗಳನ್ನು ರಫ್ತು ಮಾಡುವ ಸಂಕಲ್ಪ ಮಾಡಿದೆ. 

ತಾಜಾ ಉತ್ಪನ್ನ ಮಾರುಕಟ್ಟೆಗೆ ಹೊಸ ವೇಗ: ನಿಂಜಾಕಾರ್ಟ್‌ನಲ್ಲಿ ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಹೂಡಿಕೆ!...

ಔಷಧೀಯ ವಸ್ತುಗಳು,  ಆಹಾರ ಉಪಭೋಗ್ಯ ವಸ್ತುಗಳು,  ಸಾಮಾನ್ಯ ಸರಕುಗಳಂತಹ ವಿಭಾಗಗಳಲ್ಲಿ ನೂರಾರು ಹೊಸ ಪೂರೈಕೆದಾರರನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ಜೊತೆಗೆ ಉಡುಪು ಸೇರಿದಂತೆ ಪ್ರಮುಖ ವಸ್ತುಗಳು ರಫ್ತಾಗಲಿದೆ. ಈ ರಫ್ತುವಿನ ಪ್ರಮಾಣ ಮೂರರಷ್ಟು ಹೆಚ್ಚಾಗಲಿದೆ.

Walmart commits to exporting US 10 billion dollar of India made goods each year by 2027 ckm

ವಾಲ್ಮಾರ್ಟ್‌ನ ಹೊಸ ರಫ್ತು ನೀತಿಯಲ್ಲಿ  ಭಾರತದಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಮಹತ್ವದ ಉತ್ತೇಜನವನ್ನು ನೀಡಲು ವಾಲ್‌ಮಾರ್ಟ್ ಮುಂದಾಗಿದೆ.  ಜೊತೆಗೆ ಫ್ಲಿಪ್‌ಕಾರ್ಟ್ ಮತ್ತು ವಾಲ್‌ಮಾರ್ಟ್ ಪೂರೈಕೆದಾರರ ಅಭಿವೃದ್ಧಿ ಕಾರ್ಯಕ್ರಮಗಳಂತಹ ಪ್ರಯತ್ನಗಳು ನಡೆಯುತ್ತಿವೆ.

ವಿಸ್ತರಣೆ ರಫ್ತು ಉತ್ಪನ್ನಗಳು:

ಪ್ರಸ್ತುತ ವಾಲ್‍ಮಾರ್ಟ್‍ನ ಹೊಸ ರಫ್ತು ಬದ್ಧತೆಯಿಂದಾಗಿ ಭಾರತದಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್‍ಎಂಇಗಳು) ಗಣನೀಯ ಪ್ರಮಾಣದಲ್ಲಿ ಉನ್ನತಿ ಪಡೆಯಲಿವೆ ಎಂಬ ನಿರೀಕ್ಷೆಗಳು ಇವೆ. ಇದರ ಜೊತೆಗೆ ಫ್ಲಿಪ್‍ಕಾರ್ಟ್ ಸಮರ್ಥ್ ಮತ್ತು ವಾಲ್‍ಮಾರ್ಟ್ ವೃದ್ಧಿ ಪೂರೈಕೆದಾರರ ಬೆಳವಣಿಗೆ ಕಾರ್ಯಕ್ರಮಗಳ ಮೂಲಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಆಹಾರ, ಔಷಧಿ, ಗ್ರಾಹಕ ಬಳಕೆ ಉತ್ಪನ್ನಗಳು, ಆರೋಗ್ಯ ಮತ್ತು ಕ್ಷೇಮ ಹಾಗೂ ಸಾಮಾನ್ಯ ವ್ಯಾಪಾರಗಳು ಸೇರಿದಂತೆ ಇನ್ನಿತರೆ ವ್ಯವಹಾರಗಳ ನೂರಾರು ಹೊಸ ಪೂರೈಕೆದಾರರಿಗೆ ಬೆಳವಣಿಗೆ ಹೊಂದಲು ವಾಲ್‍ಮಾರ್ಟ್‍ನ ಈ ವಿಸ್ತರಣೆ ಕಾರ್ಯಕ್ರಮ ನೆರವಾಗಲಿದೆ. ಇದಿಷ್ಟೇ ಅಲ್ಲದೇ, ಜವಳಿ, ಹೋಂವೇರ್ ಮತ್ತು ಇತರೆ ಪ್ರಮುಖ ಭಾರತೀಯ ರಫ್ತು ವಿಭಾಗಗಳಿಗೂ ನೆರವು ಸಿಗಲಿದೆ.

ಸ್ಥಳೀಯ ಉತ್ಪನ್ನ ತಯಾರಕರೇ ಆಧಾರ ಸ್ಥಂಭ:

ಅಂತಾರಾಷ್ಟ್ರೀಯ ರೀಟೇಲರ್ ಆಗಿರುವ ನಮ್ಮ ಸಂಸ್ಥೆಯು ವಿಶ್ವದಾದ್ಯಂತ ಗ್ರಾಹಕರು ಮತ್ತು ಸಮುದಾಯಗಳಿಗೆ ಮೌಲ್ಯವನ್ನು ತಂದುಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ರೀಟೇಲ್ ಕ್ಷೇತ್ರದ ಯಶಸ್ಸಿಗೆ ಸ್ಥಳೀಯ ಉದ್ಯಮಿಗಳು ಮತ್ತು ತಯಾರಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ವಾಲ್‍ಮಾರ್ಟ್ ಅರ್ಥ ಮಾಡಿಕೊಂಡಿದೆ. ಮತ್ತು ವಾಲ್‍ಮಾರ್ಟ್ ಪೂರೈಸುತ್ತಿರುವ ಜಾಗತಿಕ ವಿತರಣಾ ಅವಕಾಶಗಳನ್ನು ಮತ್ತು ವಿನೂತನವಾದ ಮಾನದಂಡಗಳನ್ನು ಬಳಸಿಕೊಂಡು ಭಾರತೀಯ ಪೂರೈಕೆದಾರರು ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳಲು ದೊಡ್ಡ ಮಟ್ಟದ ಅವಕಾಶಗಳಿವೆ ಎಂದು ವಾಲ್‍ಮಾರ್ಟ್ ಇಂಕ್‍ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೌಗ್ ಮ್ಯಾಕ್‍ಮಿಲನ್ ಹೇಳಿದರು.

Walmart commits to exporting US 10 billion dollar of India made goods each year by 2027 ckm

ಮೇಕ್ ಇನ್ ಇಂಡಿಯಾ ಪರಿಕಲ್ಪನೆ:

``ಮುಂಬರುವ ವರ್ಷಗಳಲ್ಲಿ ನಮ್ಮ ವಾರ್ಷಿಕ ಭಾರತ ರಫ್ತುಗಳನ್ನು ಗಣನೀಯ ಪ್ರಮಾಣದಲ್ಲಿ ವೇಗಗೊಳಿಸಲಿದ್ದೇವೆ. ಈ ಮೂಲಕ ನಾವು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುತ್ತಿದ್ದೇವೆ ಮತ್ತು ಹೆಚ್ಚಿನ ಸ್ಥಳೀಯ ವ್ಯವಹಾರಗಳು ಅಂತಾರಾಷ್ಟ್ರೀಯ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತಿದ್ದೇವೆ. ಇದೇ ಸಮಯದಲ್ಲಿ ಭಾರತದಲ್ಲಿ ಉದ್ಯೋಗ ಸೃಷ್ಟಿ ಮತ್ತು ಮನೆಗಳಲ್ಲಿ ಸಮೃದ್ಧಿಯನ್ನು ಸೃಷ್ಟಿಸಲಿದ್ದೇವೆ. ವಾಲ್‍ಮಾರ್ಟ್‍ಗೆ ಜಗತ್ತಿನಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಹೆಚ್ಚು ಉತ್ತಮ ಗುಣಮಟ್ಟದ ಭಾರತ ನಿರ್ಮಿತ ಅಂದರೆ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಪೂರೈಸಲು ಇದೊಂದು ಉತ್ತಮ ಅವಕಾಶ ಒದಗಿಬಂದಿದೆ’’ ಎಂದರು. 

ಸಾವಿರಾರು ಭಾರತೀಯ ಬ್ರ್ಯಾಂಡ್‍ಗಳು, ಎಂಎಸ್‍ಎಂಇಗಳು ಮತ್ತು ಕುಶಲಕರ್ಮಿಗಳೊಂದಿಗೆ ಕೆಲಸ ಮಾಡಲು ಫ್ಲಿಪ್‍ಕಾರ್ಟ್‍ಗೆ ಸಂತಸವೆನಿಸುತ್ತಿದೆ. ಈ ಮೂಲಕ ಅವರ ವ್ಯವಹಾರಗಳನ್ನು ಯಶಸ್ವಿಗೊಳಿಸುವತ್ತ ಗಮನಹರಿಸಲಾಗುತ್ತದೆ. ಅವರಿಗೆ ಭಾರತದಾದ್ಯಂತದ ಮಾರುಕಟ್ಟೆಯನ್ನು ತಲುಪಲು ಮತ್ತು ತಮ್ಮ ಎಲ್ಲಾ ಪ್ರಮುಖ ಬ್ರ್ಯಾಂಡಿಂಗ್, ಮಾರುಕಟ್ಟೆ, ಲಾಜಿಸ್ಟಿಕ್ಸ್ ಮತ್ತು ಸಾಮಥ್ರ್ಯಗಳನ್ನು ಜಾಗತಿಕ ಮಾರುಕಟ್ಟೆವರೆಗೂ ಕೊಂಡೊಯ್ಯಲು ನಾವು ವೇದಿಕೆಯನ್ನು ಒದಗಿಸಿಕೊಡುತ್ತೇವೆ. ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಭಾರತೀಯ ಕಂಪನಿಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ಜಾಗತಿಕ ಮಟ್ಟಕ್ಕೆ ತಲುಪಿಸುವುದಕ್ಕಾಗಿ ಹೂಡಿಕೆ ಮಾಡುತ್ತಿರುವ ವಾಲ್‍ಮಾರ್ಟ್‍ನ ಕ್ರಮ ಸ್ವಾಗತಾರ್ಹವಾಗಿದೆ ಎಂದು ಫ್ಲಿಪ್‍ಕಾರ್ಟ್ ಗ್ರೂಪ್‍ನ ಮುಖ್ಯ ಕಾರ್ಯಕಾರಿ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದರು.

Walmart commits to exporting US 10 billion dollar of India made goods each year by 2027 ckm

ಭಾರತದ ತನ್ನ ರಫ್ತು ಉತ್ಪನ್ನಗಳ ಪ್ರಮಾಣವನ್ನು ಹೆಚ್ಚು ಮಾಡುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ರಫ್ತುದಾರರನ್ನು ಉತ್ತೇಜಿಸುವ ಮೂಲಕ ಹಾಗೂ ದೇಶದ ರಫ್ತು ಸಿದ್ಧವಾದ ವ್ಯವಹಾರಗಳನ್ನು ವಿಸ್ತರಿಸುವುದರೊಂದಿಗೆ ವಾಲ್‍ಮಾರ್ಟ್ ಭಾರತದಲ್ಲಿ ತನ್ನ ಪೂರೈಕೆ ಸರಪಳಿಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವತ್ತ ಗಮನಹರಿಸಿದೆ.

ರಫ್ತು ವ್ಯವಹಾರಗಳ ಸಂಸ್ಥೆಗಳ ಜೊತೆ ಸಹಭಾಗಿತ್ವ:

ವಾಲ್‍ಮಾರ್ಟ್ 20 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಭಾರತದಿಂದ ಉತ್ಪನ್ನಗಳನ್ನು ಖರೀದಿಸುತ್ತಿದೆ. ಈ ಮೂಲಕ ಸ್ಥಳೀಯ ಪೂರೈಕೆದಾರರು ತಮ್ಮ ಕಾರ್ಯಾಚರಣೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ಹಾಗೂ ಹೊಸ ಉತ್ಪನ್ನಗಳ ಅನ್ವೇಷಣೆ, ಪ್ಯಾಕೇಜಿಂಗ್, ಮಾರುಕಟ್ಟೆ, ಪೂರೈಕೆ ಜಾಲ ನಿರ್ವಹಣೆ ಹಾಗೂ ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವ ಸಾಮಥ್ರ್ಯಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ. ವಾಲ್‍ಮಾರ್ಟ್ ಜಾಗತಿಕ ಮಾರುಕಟ್ಟೆಯ ಬುದ್ಧಿವಂತಿಕೆ ಮತ್ತು ಬೇಡಿಕೆಯ ಮುನ್ಸೂಚನೆಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಅದು ಪೂರೈಕೆದಾರರಿಗೆ ಕಾರ್ಯತಂತ್ರದ ಯೋಜನೆಗೆ ಸಹಾಯ ಮಾಡುತ್ತದೆ. ಈ ಬೆಂಬಲವು ವೆಲ್ಸ್‍ಪನ್, ಎಲ್‍ಟಿ ಫುಡ್ಸ್ ಹಾಗೂ ಅನಿಕೇತ್ ಮೆಟಲ್ಸ್ ಸೇರಿದಂತೆ ನೂರಾರು ಕಂಪನಿಗಳ ಜಾಗತಿಕ ಯಶಸ್ಸಿಗೆ ಕಾರಣವಾಗಿದೆ. ಇದರ ಜೊತೆಗೆ ಗ್ಲೋಬಲ್ ಗ್ರೀನ್ ಕಂಪನಿಯಂತಹ ವೇಗವಾಗಿ ಬೆಳೆಯುತ್ತಿರುವ ರಫ್ತು ವ್ಯವಹಾರಗಳ ಸಂಸ್ಥೆಗಳೊಂದಿಗೂ ಸಹಭಾಗಿತ್ವವನ್ನು ಹೊಂದಿದೆ.

Walmart commits to exporting US 10 billion dollar of India made goods each year by 2027 ckm

ತಳಮಟ್ಟದಲ್ಲಿ, ವಾಲ್‍ಮಾರ್ಟ್, ಫ್ಲಿಪ್‍ಕಾರ್ಟ್ ಮತ್ತು ಭಾರತ ಹಾಗೂ ವಿಶ್ವದಾದ್ಯಂತದ ಇತರೆ ಕಂಪನಿಗಳಿಗೆ ಪೂರೈಕೆದಾರರಾಗಿ ಯಶಸ್ವಿಯಾಗಲು ಎಂಎಸ್‍ಎಂಇಗಳನ್ನು ಸಜ್ಜುಗೊಳಿಸಲು ಅಭಿವೃದ್ಧಿ ಕಾರ್ಯಕ್ರಮವಾದ ವೃದ್ಧಿಯಡಿ ರಫ್ತು ಕೌಶಲ್ಯ ಮತ್ತು ಜ್ಞಾನವನ್ನು ನೀಡಲಾಗುತ್ತಿದೆ. ಐದು ವರ್ಷಗಳಲ್ಲಿ ದೇಶೀಯ ಮತ್ತು ಜಾಗತಿಕ ಪೂರೈಕೆ ಜಾಲಗಳಿಗೆ 50,000 ಕ್ಕೂ ಅಧಿಕ ಎಂಎಸ್‍ಎಂಇಗಳನ್ನು ಭಾರತದಲ್ಲಿ ಸಿದ್ಧಪಡಿಸುವ ಗುರಿಯನ್ನು ಹೊಂದಲಾಗಿದೆ.

ವಿಶ್ವದ 14 ದೇಶಗಳ ಮಾರುಕಟ್ಟೆಗೆ ಭಾರತದಿಂದ ರಫ್ತು:

ಭಾರತ ಈಗಾಗಲೇ ವಾಲ್‍ಮಾರ್ಟ್‍ನ ಉನ್ನತ ಮಟ್ಟದ ಮೂಲ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ವಾರ್ಷಿಕ ರಫ್ತು ಪ್ರಮಾಣ 3 ಬಿಲಿಯನ್ ಡಾಲರ್‌ನಷ್ಟಿದೆ.. ಇಂಡಿಯಾ ಮೇಡ್ ಜವಳಿ ಉತ್ಪನ್ನಗಳು, ಹೋಂವೇರ್, ಆಭರಣಗಳು, ಹಾರ್ಡ್‍ಲೈನ್ಸ್ ಹಾಗೂ ಇನ್ನಿತರೆ ಜನಪ್ರಿಯ ಉತ್ಪನ್ನಗಳು 2002 ರಲ್ಲಿ ಆರಂಭವಾಗಿರುವ ವಾಲ್‍ಮಾರ್ಟ್‍ನ ಬೆಂಗಳೂರಿನ ಜಾಗತಿಕ ಸೋರ್ಸಿಂಗ್ ಕಚೇರಿ ಮೂಲಕ ಯು.ಎಸ್., ಕೆನಡಾ, ಮೆಕ್ಸಿಕೋ, ಸೆಂಟ್ರಲ್ ಅಮೆರಿಕಾ ಮತ್ತು ಯುನೈಟೆಡ್ ಕಿಂಗ್ಡಂ ಸೇರಿದಂತೆ ವಿಶ್ವದ 14 ದೇಶಗಳ ಮಾರುಕಟ್ಟೆಗಳನ್ನು ತಲುಪುತ್ತಿವೆ. ಮುಂದಿನ ಕೆಲವು ವರ್ಷಗಳಲ್ಲಿ ಈ ಸೋರ್ಸಿಂಗ್ ಕೇಂದ್ರಗಳು ವಿಸ್ತರಣೆ ಹೆಚ್ಚಾಗುತ್ತಿದ್ದಂತೆ, ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸ್ಥಳೀಯ ವ್ಯವಹಾರಗಳಿಗೆ ಇನ್ನೂ ಹೆಚ್ಚಿನ ಪರಿಣಾಮ ಬೀರಲು ಸ್ಥಳೀಯ ತಂಡಕ್ಕೆ ಅಧಿಕಾರ ನೀಡಲಾಗುತ್ತದೆ.

Follow Us:
Download App:
  • android
  • ios