ಆನ್ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಆಡೋದು ಈಗ ಕಾಮನ್. ನಾವು ಯಾವುದೇ ವಸ್ತು ಖರೀದಿ ಮಾಡಿಲ್ಲ ಅಂದ್ರೂ ನಮ್ಮ ಮನೆಗೆ ಪಾರ್ಸಲ್ ಬಂದಾಗ ಅಚ್ಚರಿಗೊಳ್ತೇವೆ. ಅದೂ ಒಂದಲ್ಲ ಎರಡಲ್ಲ ನೂರಾರು ಅಂದಾಗ ಆಶ್ಚರ್ಯ, ಖುಷಿ, ಟೆನ್ಷನ್ ಒಟ್ಟಿಗೆ ಆಗುತ್ತೆ.
ಇ – ಕಾಮರ್ಸ್ ಕಂಪನಿಗಳು ನಮ್ಮ ಕೆಲಸವನ್ನು ಸುಲಭಗೊಳಿಸಿವೆ. ಜನರಿಗೆ ಆನ್ಲೈನ್ ಮೂಲಕ ವಸ್ತುಗಳನ್ನು ಆರ್ಡರ್ ಮಾಡೋದು ಸುಲಭ. ಕೆಲವೊಂದು ಆಫರ್ ಜೊತೆಗೆ ಸಮಯ ಉಳಿಸಬಹುದು ಎನ್ನುವ ಕಾರಣಕ್ಕೆ ಜನರು ಆನ್ಲೈನ್ ಮೂಲಕ ನಿತ್ಯದ ಸಾಮಾನುಗಳಿಂದ ಹಿಡಿದು ಪ್ರಿಜ್, ಟಿವಿ, ಬಂಗಾರ ಸೇರಿದಂತೆ ದುಬಾರಿ ವಸ್ತುಗಳ ಖರೀದಿ ಮಾಡ್ತಿದ್ದಾರೆ. ಕೆಲ ಬಾರಿ ಇ – ಕಾಮರ್ಸ್ ಕಂಪನಿಗಳಲ್ಲಿ ತಪ್ಪಾಗುತ್ತವೆ. ಅಡ್ರೆಸ್ ಬದಲಿಸಿ ನಿಮ್ಮ ವಸ್ತುವನ್ನು ಬೇರೆ ವ್ಯಕ್ತಿಗೆ ಅಥವಾ ಬೇರೆ ವ್ಯಕ್ತಿ ವಸ್ತುವನ್ನು ನಿಮಗೆ ನೀಡುವುದಿದೆ. ಒಂದೋ ಎರಡೋ ಬಾರಿ ಅಥವಾ ಒಂದೋ ಎರಡೋ ವಸ್ತು ಹೀಗೆ ಆದ್ರೆ ಪರವಾಗಿಲ್ಲ. ಆದ್ರೆ 100 ವಸ್ತುಗಳು ನಿಮ್ಮ ಮನೆಗೆ ಪಾರ್ಸಲ್ ಬಂದ್ರೆ, ಅದೂ ನೀವು ಆರ್ಡರ್ ಮಾಡದೆ ಬಂದ್ರೆ ಏನಾಗ್ಬೇಡ? ನಮಗೆ ಗೊತ್ತು ನಿಮಗೆ ಖುಷಿ ಆಗುತ್ತೆ ಅಂತಾ. ನಿಮಗೆ ಅನುಕೂಲವಾಗುವ ವಸ್ತುವಿದ್ರೆ ಓಕೆ, ನಿಮ್ಮ ಬಳಕೆಗೆ ಅಗತ್ಯವಿಲ್ಲದ ವಸ್ತುವಾದ್ರೆ ಅದನ್ನು ಏನು ಮಾಡ್ಬುಕು ಎಂದು ನಿಮಗೆ ತಿಳಿಯೋದಿಲ್ಲ. ಸ್ಮಿತ್ ಸ್ಥಿತಿ ಕೂಡ ಈಗ ಹಾಗೇ ಆಗಿದೆ.
ಬಂದಿದೆ 100ಕ್ಕೂ ಹೆಚ್ಚು ಪಾರ್ಸಲ್ (Parcel) : ಘಟನೆ ಅಮೆರಿಕಾ (America) ದಲ್ಲಿ ನಡೆದಿದೆ. ವರ್ಜೀನಿಯಾದ ಸಿಂಡಿ ಸ್ಮಿತ್ ಮನೆಗೆ ಇ ಕಾಮರ್ಸ್ ಕಂಪನಿ ಅಮೆಜಾನ್ (Amazon ) ನಿಂದ 100ಕ್ಕೂ ಹೆಚ್ಚು ಪಾರ್ಸಲ್ ಬಂದಿದೆ. ಸ್ಮಿತ್, ಯಾವುದೇ ವಸ್ತುವನ್ನು ಆರ್ಡರ್ ಮಾಡಿರಲಿಲ್ಲ. ಆದ್ರೆ ಸ್ಮಿತ್ ನ ಪ್ರಿನ್ಸ್ ವಿಲಿಯಂ ಕೌಂಟಿಯ ಮನೆಗೆ ಪಾರ್ಸಲ್ ಬಂದಿದೆ. ಒಂದಾದ್ಮೇಲೆ ಒಂದರಂತೆ ಪಾರ್ಸಲ್ ಸ್ಮಿತ್ ಕೈ ಸೇರಿದೆ. ಆರಂಭದಲ್ಲಿ ಇದನ್ನು ಸ್ಕ್ಯಾಮ್ ಎಂದು ಪರಿಗಣಿಸಿದ್ದ ಸ್ಮಿತ್, ಮನೆ ತುಂಬಾ ಪಾರ್ಸಲ್ ತುಂಬುತ್ತಿದ್ದಂತೆ ಅಚ್ಚರಿಗೊಂಡಿದ್ದಾಳೆ. 100 ಪಾರ್ಸಲ್ ನಲ್ಲಿ ಸುಮಾರು 1,000 ಹೆಡ್‌ಲ್ಯಾಂಪ್‌ಗಳು, 800 ಅಂಟು ಗನ್‌ಗಳು ಮತ್ತು ಡಜನ್‌ಗಟ್ಟಲೆ ಬೈನಾಕ್ಯುಲರ್ ಇತ್ತು ಎಂದು ಸ್ಮಿತ್ ಹೇಳಿದ್ದಾಳೆ.
10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 7 ಲಕ್ಷ ರೂ. ಇರ್ತಿತ್ತು!
ಆಪ್ತರಿಗೆ ಸಾಮಾನು ನೀಡಿದ ಸ್ಮಿತ್: ಸ್ಮಿತ್ , ಹೆಡ್‌ಲ್ಯಾಂಪ್ ಮತ್ತು ಗ್ಲೂ ಗನ್ ಗಳನ್ನು ಕಾರಿನಲ್ಲಿ ತುಂಬಿಕೊಂಡು ಓಡಾಡಿದ್ದಾರೆ. ವಿಳಾಸ ಸ್ಮಿತ್ ಹೆಸರಿನಲ್ಲಿದ್ದರೂ ಹೆಸರು ಮಾತ್ರ ಬೇರೆ ಇದೆ. ಲಿಕ್ಸಿಯೋ ಜಾಂಗ್ ಎಂದು ಹೆಸರಿರುವ ಕಾರಣ ಅವರನ್ನು ಪತ್ತೆ ಮಾಡುವ ಪ್ರಯತ್ನವನ್ನೂ ಸ್ಮಿತ್ ಮಾಡಿದ್ದಾಳೆ. ನಂತ್ರ ಕೆಲ ಸಾಮಾನುಗಳನ್ನು ಅಕ್ಕಪಕ್ಕದ ಮನೆಯವರಿಗೆ ನೀಡಿದ್ದಾಳೆ. ನಂತ್ರ ಅಮೆಜಾನ್ ಸಂಪರ್ಕಿಸಿ ದೂರು ನೀಡಿದ್ದಾಳೆ.
ಮಹಿಳೆ ದೂರು ಸ್ವೀಕರಿಸಿ ಅಮೆಜಾನ್ ಅಧಿಕಾರಿಗಳು ಎಲ್ಲಾ ಘಟನೆಗಳನ್ನು ಪರಿಶೀಲಿಸಿದ್ದಾರೆ. ಸ್ಮಿತ್‌ಗೆ ಪ್ಯಾಕೇಜ್‌ಗಳು ಅಮೆಜಾನ್ ಗೋಡೌನ್‌ನಿಂದ ನೀಡಲಾಗಿದೆ. ಮಾರಾಟವಾಗದ ಸರಕುಗಳನ್ನು ತೆಗೆದುಹಾಕಲು ಮಾರಾಟಗಾರರು ಯಾದೃಚ್ಛಿಕ ವಿಳಾಸಗಳಿಗೆ ಪ್ಯಾಕೇಜ್‌ಗಳನ್ನು ಕಳುಹಿಸುತ್ತಾರೆ. ಮಾರಾಟವಾಗದ ಉತ್ಪನ್ನಗಳನ್ನು ಅಮೆಜಾನ್ ಗೋದಾಮುಗಳಿಂದ ತೆರವುಗೊಳಿಸಲು ಬಯಸಿದಾಗ, ಅವರು ಅದನ್ನು ಮನಸ್ಸಿಗೆ ಕಂಡ ವಿಳಾಸಕ್ಕೆ ಕಳುಹಿಸುತ್ತಾರೆ. ಅವರಿಗೆ ಇದು ಅಗ್ಗವಾಗುತ್ತದೆ. ಆದರೆ ಅಮೆಜಾನ್ ಹೀಗೆ ಮಾಡಿದ ಮಾರಾಟಗಾರರ ಖಾತೆ ಮುಚ್ಚೋದಾಗಿ ಹೇಳಿದೆ.
ಅಬ್ಬಬ್ಬಾ..165 ಕೋಟಿಯ ರಾಣಿಹಾರದ ಒಡತಿ ಇಶಾ ಅಂಬಾನಿ, ಬೆರಗುಗೊಳಿಸುತ್ತೆ ಜ್ಯುವೆಲ್ಲರಿ ಕಲೆಕ್ಷನ್
ಹಿಂದೂ ನಡೆದಿದೆ ಇಂಥ ಘಟನೆ: ಸ್ಮಿತ್ ಗೆ ಇಷ್ಟೊಂದು ಪಾರ್ಸಲ್ ಬಂದಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಅಮೆಜಾನ್‌ನಿಂದ ಇನ್ನೊಬ್ಬ ವ್ಯಕ್ತಿಗೆ ಇದೇ ರೀತಿ ಪಾರ್ಸಲ್ ಹೋಗಿತ್ತು. ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದ ಕೋನಿ ಮ್ಯಾಥ್ಯೂಸ್ ಅವರಿಗೆ ಡಿಸೆಂಬರ್ 2022ರಲ್ಲಿ ಅಮೆಜಾನ್‌ನಿಂದ ಸುಮಾರು 100 ಸ್ಪೇಸ್ ಹೀಟರ್‌ಗಳನ್ನು ಕಳುಹಿಸಲಾಗಿತ್ತು. ಆರ್ಡರ್ ಮಾಡದೆ ಕೋನಿ ಇದನ್ನು ಪಡೆದಿದ್ದರು.
