ಲಂಡನ್[ಮೇ.15]: ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯಗೆ ಕೊಂಚ ರಿಲೀಫ್ ಸಿಕ್ಕಿದೆ. ಗೃಹ ಸಾಲಕ್ಕೆ ಸಂಬಂಧಿಸಿದಂತೆ ಸ್ವಿಸ್ ಬ್ಯಾಂಕ್ ಯುಬಿಎಸ್ ಜೊತೆ ಮತುಕತೆ ನಡೆಸಲು ಯಶಸ್ವಿಯಾಗಿದ್ದು, ತಮ್ಮ ಲಂಡನ್ನಿನ ಬಂಗಲೆ ಉಳಿಸಿಕೊಳ್ಳಲು ಸಫಲರಾಗಿದ್ದಾರೆ. ದುಬಾರಿ ಮೌಲ್ಯದ ಪ್ರದೇಶದಲ್ಲಿ ಫ್ಲ್ಯಾಟ್ ಖರೀದಿಸಲು ಮಲ್ಯ ಪಡೆದುಕೊಂಡ ಸಾಲ ತೀರಿಸಲು ಯುಬಿಎಸ್ ಬ್ಯಾಂಕ್ 2020ರ ಏಪ್ರಿಲ್ ವರೆಗೆ ಸಮಯಾವಖಾಶ ನೀಡಿದೆ.

ಬ್ಯಾಂಕ್ 2.04 ಕೋಟಿ ಪೌಂಡ್ ಸಾಲ ತೀರಿಸಿಲ್ಲವೆಂದು ವಿಜಯ್ 63 ವರ್ಷ ವಯಸ್ಸಿನ ಮಲ್ಯರ ಐಷಾರಾಮಿ ಕರ್ನಾವಾಲ್ ಟೆರೆಸ್ ಅಪಾರ್ಟ್ಮೆಂಡ್ ವಶಪಡಿಸಿಕೊಳ್ಳುವ ಹೆಜ್ಜೆ ಇರಿಸಿತ್ತು. ಈ ಪ್ರಕರಣದ ವಿಚಾರಣೆ ಕಈಗ ಪೂರ್ಣಗೊಂಡಿದ್ದು, ಮಲ್ಯಗೆ ರಿಲೀಫ್ ಸಿಕ್ಕಿದೆ. ಇನ್ನು ಭಾರತದಲ್ಲಿ ಹಲವಾರು ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಮೌಲ್ಯದ ಸಾಲ ಪಡೆದಿದ್ದ ಮಲ್ಯ ಅದನ್ನು ತೀರಿಸಲಾಗದೆ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬುವುದು ಉಲ್ಲೇಖನೀಯ. ಆರ್ಥಿಕ ಅಪರಾಧಿಯಾಗಿರುವ ಮಲ್ಯ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ಸಿಬಿಐ, ಜಾರಿ ನಿರ್ದೆಶನಾಲಾಯ ಸತತ ಪ್ರಯತ್ನಗಳನ್ನು ನಡೆಸುತ್ತಿದೆ.

ಲಂಡನ್ನಿನ ಬ್ಯಾಂಕ್ ನಲ್ಲಿ ಮಲ್ಯ ಪಡೆದ ಸಾಲವೆಷ್ಟು?

ಲಂಡನ್ನಿನ ಕಾರ್ನ್ ವಲ್ ಟೆರೇಸ್ ಅಪಾರ್ಟ್ಮೆಂಟ್ ಖರೀದಿಸಿರುವ ಮಲ್ಯ,  20. 4 ಕೋಟಿ ಪೌಂಡ್ ಸಾಲ ಮಾಡಿದ್ದರು. ಸಾಲ ಪಡೆದ ಮಲ್ಯ 820,333.64 ಪೌಂಡ್ಸ್ ಬಡ್ಡಿ, ಕಾನೂನು ಖರ್ಚು ವೆಚ್ಚ 1,047,081.18 ಪೌಂಡ್ಸ್ ಹಾಗೂ 223,863.82 ಪೌಂಡ್ಸ್ ಇತರೆ ಖರ್ಚನ್ನು ಕೂಡಾ ಮಲ್ಯ ಭರಿಸಬೇಕಿದೆ.

ಮಲ್ಯ ಅವರು ಸದ್ಯ ಬಂಗಲೆಯಲ್ಲಿ ವಾಸಿಸಲು ಅನುಮತಿ ನೀಡಲಾಗಿದೆ. ಆದರೆ, ಏಪ್ರಿಲ್ 2020ರೊಳಗೆ ಬಾಕಿಮೊತ್ತವನ್ನು ಪಾವತಿಸದಿದ್ದರೆ ಯುಬಿಎಸ್ ತಕ್ಷಣವೇ ಬಂಗಲೆಯನ್ನು ತನ್ನ ವಶಕ್ಕೆ ಪಡೆಯಬಹುದು ಎಂದು ಜಡ್ಜ್ ಹೇಳಿದ್ದಾರೆ.