ವೇದಾಂತ್ ಕಾಲೇಜು ಶಿಕ್ಷಣ ಕಂಡಿಲ್ಲ. ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿರುವ ಈ ಯುವಕ ಶೂ, ಚಪ್ಪಲಿಗಳ ಮರು ಮಾರಾಟ ಮಾಡಿ ವಾರ್ಷಿಕ 100 ಕೋಟಿ ವ್ಯವಹಾರ ನಡೆಸುತ್ತಾರೆ.

ಜೀವನಶೈಲಿ ವ್ಲಾಗ್ ಮಾಡಲು ವೇದಾಂತ ಲಂಬಾ 2017 ರಲ್ಲಿ ಮೇನ್‌ಸ್ಟ್ರೀಟ್ ಟಿವಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಎರಡು ವರ್ಷವಾದ್ರೂ ಚಾನೆಲ್‌ಗೆ ಉತ್ತಮವ ಹೆಸರು ಸಿಗಲಿಲ್ಲ. ಇದು ಶೂನ್ಯದಿಂದ ವ್ಯಾಪಾರ ವಲಯದಲ್ಲಿ ತಾನು ಹೆಸರು ಮಾಡಲು ಸಹಾಯವಾಯ್ತು. ವೇದಾಂತ ಲಂಬಾ ಸ್ನೀಕರ್ಸ್ (ಚಪ್ಪಲಿ, ಬೂಟುಗಳು) ಬಗ್ಗೆ ಹೆಚ್ಚು ಉತ್ಸಾಹ ಹೊಂದಿದ್ದರು ಹೀಗಾಗಿ ಅದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು. ಅವರು ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್ ಎಂಬ ಆನ್‌ಲೈನ್ ಸ್ನೀಕರ್ ಅಂಗಡಿಯನ್ನು ಪ್ರಾರಂಭಿಸಿದರು. ಇದು ಶೂಗಳ ರೀಸೆಲ್ಲಿಂಗ್ ಕೂಡ ಆಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಸ್ನೀಕರ್ ಹೆಡ್‌ಗಳಿಗೆ ಹೆಚ್ಚು ಬೇಡಿಕೆಯಿರುವ ತಾಣಗಳಲ್ಲಿ ಒಂದಾಗಿದೆ. 

ಲಾಂಬಾಗೆ ಈಗ 24 ವರ್ಷ. ಅವರ ಕಂಪನಿಯು ಈಗ ಸ್ನೀಕರ್ಸ್, ಟಿ-ಶರ್ಟ್‌ಗಳು ಮತ್ತು ಹೂಡೀಸ್ ಸೇರಿದಂತೆ 3000 ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಈಗ ಮುಂಬೈ ಮೂಲದ ಸ್ಟಾರ್ಟಪ್‌ಗಳ ಕಂಪೆನಿಯ ಮಾಸಿಕ ಆದಾಯ 5 ಕೋಟಿ ದಾಟಿದೆ. ಕಂಪೆನಿಯು ಜೊಮಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್, ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಇತರರಿಂದ 2 ಮಿಲಿಯನ್ ಡಾಲರ್ ಹೂಡಿಕೆಯನ್ನು ಗಳಿಸಿದ್ದಾರೆ. ರಾಪರ್ ಬಾದಶಾ ಕೂಡ ಇವರ ಕಂಪೆನಿಯಲ್ಲಿ ಬಂಡವಾಳ ಹೂಡಿದ್ದಾರೆ.

ಭಾರತದ ಶ್ರೀಮಂತ ನಟಿ, ಯಶಸ್ವಿ ಉದ್ಯಮಿ ಬಳಿ ಇದೆ 3 ಮನೆ, 25 ಕೋಟಿ ರೂ ಬೆಲೆ ಬಾಳುವ

ರಣಬೀರ್ ಕಪೂರ್, ರಣವೀರ್ ಸಿಂಗ್ ಮತ್ತು ಕರಣ್ ಜೋಹರ್ ಅವರಂತಹ ಅನೇಕ ಸೆಲೆಬ್ರಿಟಿಗಳು ತಮ್ಮ ಗ್ರಾಹಕರಾಗಿದ್ದಾರೆ ಎಂದು ಲಂಬಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ವಾರ್ಷಿಕವಾಗಿ ಕಂಪೆನಿ 100 ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತದೆ.

ಕಂಪನಿಯು ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಇಲ್ಲಿಯವರೆಗೆ 50000 ಸ್ನೀಕರ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು ಮುಂಬೈನಲ್ಲಿ ಎರಡು ಮಳಿಗೆಗಳನ್ನು ಹೊಂದಿದೆ. ಇದು ಇನ್ನೂ ನಾಲ್ಕು ಭೌತಿಕ ಮಳಿಗೆಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

84 ಲಕ್ಷ ರೂ ವೇತನದ ಉದ್ಯೋಗ ಬಿಟ್ಟು ಬಟ್ಟೆ ಒಗೆಯವ ಕಂಪೆನಿ ತೆರೆದು ಗೆದ್ದು ಬೀಗಿದ ಐಐಟಿ

Yeezy, Jordan, Adidas, Nike, Drewhouse ಮತ್ತು Supreme ನಂತಹ ಬ್ರ್ಯಾಂಡ್‌ಗಳು ಇವರ ಶಾಪ್‌ನಲ್ಲಿ ಲಭ್ಯವಿದೆ. ಮೇನ್‌ಸ್ಟ್ರೀಟ್ ದೆಹಲಿಯಲ್ಲಿ 1,600 ಚದರ ಅಡಿ ಮಳಿಗೆಯನ್ನು ತೆರೆದಿದ್ದು, ಇದು ಏಷ್ಯಾದ ಅತಿದೊಡ್ಡ ಸ್ನೀಕರ್ ಮರುಮಾರಾಟದ ಅಂಗಡಿ ಎಂದು ಹೇಳಲಾಗುತ್ತದೆ.

ವೇದಾಂತ್ ಕಾಲೇಜು ಶಿಕ್ಷಣ ಕಂಡಿಲ್ಲ. ಈ ಬಗ್ಗೆ ಒಮ್ಮೆ ಅವರು ಹೈಸ್ಕೂಲ್ ಡ್ರಾಪ್ಔಟ್ ಎಂದು ಟ್ವೀಟ್ ಮಾಡಿದ್ದರು. ಅವರು 2005 ಮತ್ತು 2010 ರ ನಡುವೆ ಪುಣೆಯ ಸೇಂಟ್ ಮೇರಿಸ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ.