Asianet Suvarna News Asianet Suvarna News

ಭಾರತಕ್ಕೆ ಚೂರಿ ಇರಿದ ಅಮೆರಿಕ: ರಫ್ತು ತೆರಿಗೆ ವಿನಾಯ್ತಿ ಕಟ್!

ಭಾರತದ ಬೆನ್ನಿಗೆ ಚೂರಿ ಇರಿದ ಅಮೆರಿಕದ ಟ್ರಂಪ್ ಸರ್ಕಾರ! ಭಾರತದ 50ಕ್ಕೂ ಹೆಚ್ಚು ವಸ್ತುಗಳ ಆಮದು ತೆರಿಗೆ ರಹಿತ ರಿಯಾಯ್ತಿ ರದ್ದು! ಭಾರತ-ಅಮೆರಿಕ ವಿಶ್ವಾಸಾರ್ಹತೆಗೆ ಟ್ರಂಪ್ ಸರ್ಕಾರದಿಂದ ಚೂರಿ! ಟ್ರಂಪ್ ಸರ್ಕಾರದಿಂದ ಭಾರತದ ವಿರುದ್ಧ ಕಠಿಣ ವ್ಯಾಪಾರದ ನಿಲುವು

US Revokes Duty-free Privileges on Import on 50 Indian Goods
Author
Bengaluru, First Published Nov 1, 2018, 1:54 PM IST

ವಾಷಿಂಗ್ಟನ್(ನ.1): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಕನಿಷ್ಠ 50 ವಸ್ತುಗಳ ಮೇಲೆ ಆಮದು ತೆರಿಗೆ ರಹಿತ ರಿಯಾಯ್ತಿಯನ್ನು ಅಮೆರಿಕ ಸರ್ಕಾರ ರದ್ದುಪಡಿಸಿದೆ. ಈ ಮೂಲಕ ಭಾರತ-ಅಮೆರಿಕ ವಿಶ್ವಾಸಾರ್ಹತೆಗೆ ಟ್ರಂಪ್ ಸರ್ಕಾರ ಚೂರಿ ಇರಿದಿದೆ.   

ಕೈಮಗ್ಗ, ದಿಂದ ಕೃಷಿ ವಲಯದ ವಸ್ತುಗಳ ಮೇಲಿನ ಆಮದು ತೆರಿಗೆ ರಹಿತ ರಿಯಾಯ್ತಿಯನ್ನು ಅಮೆರಿಕ ಇದೀಗ ರದ್ದುಗೊಳಿಸಿದೆ. ಈ ಮೂಲಕ ವ್ಯಾಪಾರ ಸಂಬಂಧಿ ವಿಷಯಗಳಲ್ಲಿ ಭಾರತದೊಂದಿಗೆ ತನ್ನ ಕಠಿಣ ನಿಲುವನ್ನು ಅಮೆರಿಕ ಹೊರಹಾಕಿದೆ.

ಈ ಕುರಿತು ಶ್ವೇತಭವನ ಅಧಿಸೂಚನೆಯನ್ನು ಹೊರಡಿಸಿದ್ದು, ಪ್ರಾಶಸ್ತ್ಯಗಳ ಸಾಮಾನ್ಯ ವ್ಯವಸ್ಥೆ (ಜಿಎಸ್‌ಪಿ) ಅಡಿಯಲ್ಲಿ ಇದುವರೆಗೆ ತೆರಿಗೆ ವಿನಾಯ್ತಿ ಪಡೆಯುತ್ತಿದ್ದ ಸುಮಾರು 90 ಉತ್ಪನ್ನಗಳನ್ನು ಪಟ್ಟಿ ಮಾಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಮಂಗಳವಾರವಷ್ಟೇ ಪ್ರಕಟಣೆ ಹೊರಡಿಸಿದ್ದರು. ಇಂದಿನಿಂದಲೇ ಈ ಉತ್ಪನ್ನಗಳ ಮೇಲೆ ಆಮದು ತೆರಿಗೆ ವಿನಾಯ್ತಿ ರದ್ದಾಗಲಿದೆ.

ಜಿಎಸ್‌ಪಿ ಅಮೆರಿಕಾದ ಅತಿ ಹಳೆಯ ಮತ್ತು ಬೃಹತ್ ಪ್ರಮಾಣದ ವ್ಯಾಪಾರ ಆದ್ಯತೆ ಕಾರ್ಯಕ್ರಮವಾಗಿದ್ದು ನಿರ್ದಿಷ್ಟ ದೇಶಗಳಿಗೆ ಸಾವಿರಾರು ಉತ್ಪನ್ನಗಳನ್ನು ತೆರಿಗೆ ವಿನಾಯ್ತಿ ನೀಡಿ ರಫ್ತು ಮಾಡುವುದಾಗಿತ್ತು. ಇದು ಎರಡೂ ದೇಶಗಳ ಆರ್ಥಿಕಾಭಿವೃದ್ಧಿ ಕಾರ್ಯಕ್ರಮದ ಭಾಗವಾಗಿತ್ತು. ಜಿಎಸ್‌ಪಿ ವ್ಯವಸ್ಥೆಯ ಫಲಾನುಭವ ಪಡೆಯುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. 

ಅಮೆರಿಕ ಪಟ್ಟಿಯಲ್ಲಿ ಮಾಡಿರುವ ವಸ್ತುಗಳನ್ನು ನೋಡಿದಾಗ ಅವುಗಳಲ್ಲಿ ಕನಿಷ್ಟ 50 ಉತ್ಪನ್ನಗಳು ಭಾರತದ ವಸ್ತುಗಳಾಗಿವೆ. ಕಳೆದ ವರ್ಷ ಭಾರತದಿಂದ ಅಮೆರಿಕಕ್ಕೆ ಜಿಎಸ್‌ಪಿಯಡಿ 5.6 ಶತಕೋಟಿ ಡಾಲರ್ ಗಿಂತ ಅಧಿಕ ವಸ್ತುಗಳು ತೆರಿಗೆ ರಹಿತವಾಗಿ ರಫ್ತಾಗಿದ್ದವು.

ಆದರೆ ಇದೀಗ ಟ್ರಂಪ್ ಆಡಳಿತ ತೆಗೆದುಕೊಂಡಿರುವ ಈ ನಿರ್ಧಾರದಿಂದ ಭಾರತದಿಂದ ರಫ್ತಾಗುವ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸಹ ಪೆಟ್ಟು ಬೀಳಲಿದೆ. ಅದರಲ್ಲೂ ಮುಖ್ಯವಾಗಿ ಕೈಮಗ್ಗ ಮತ್ತು ಕೃಷಿ ಉತ್ಪನ್ನಗಳ ಮೇಲೆ ಹೆಚ್ಚು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅಮೆರಿಕದ ಜಿಎಸ್‌ಪಿ ಪಟ್ಟಿಯಿಂದ ಭಾರತ ಮಾತ್ರವಲ್ಲದೆ ಅರ್ಜೆಂಟೀನಾ, ಬ್ರೆಜಿಲ್, ಥೈಲ್ಯಾಂಡ್, ಸುರಿನಾಮೆ, ಪಾಕಿಸ್ತಾನ, ಟರ್ಕಿ, ಫಿಲಿಫೈನ್ಸ್, ಈಕ್ವೆಡಾರ್ ಮತ್ತು ಇಂಡೋನೇಷಿಯಾ ದೇಶಗಳನ್ನು ಕೂಡ ತೆಗೆದುಹಾಕಲಾಗಿದೆ.

Follow Us:
Download App:
  • android
  • ios