Published : Jul 23 2024, 07:08 AM IST| Updated : Jul 23 2024, 04:29 PM IST
Share this Liveblog
FB
TW
Linkdin
Whatsapp
Budget 2024 LIVE: ತೆರಿಗೆದಾರರಿಗಿಲ್ಲ ರಿಲ್ಯಾಕ್ಸ್, ಕರ್ನಾಟಕಕ್ಕಂತೂ ಏನೂ ಇಲ್ಲ!
ಸಾರಾಂಶ
ಮೋದಿ 3.0 ಸರ್ಕಾರದ ಮೊದಲ ಬಜೆಟ್‌ಗೆ ವೇದಿಕೆ ಸಜ್ಜಾಗಿದೆ. ದಾಖಲೆಯ ಏಳನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದು, ಅಂಥದ್ದೇನೂ ಮಹತ್ವಾಕಾಂಕ್ಷಿ ಯೋಜನೆಯಿಲ್ಲದ ಬಜೆಟ್ ಎಂದೇ ಬಣ್ಣಿಸಲಾಗುತ್ತಿದೆ. ತೆರಿಗೆಯಲ್ಲಿ ಹೆಚ್ಚಿನ ವಿನಾಯಿತಿ ನಿರೀಕ್ಷಿಸುವ ಮಧ್ಯಮ ವರ್ಗದ ಜನರಿಗೆ ಈ ಸಾರಿಯೂ ದಕ್ಕಿದ್ದೇನೂ ಇಲ್ಲ. ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಾಯಿಗೆ ತುಪ್ಪ ಸವರದಂತೆ ಮಾಡಿರುವ ನಿರ್ಮಲಾ, ಮತ್ತೇನೂ ಮಾಡಿಲ್ಲವೆಂದು ಸಂಕಟಪಡುತ್ತಿದ್ದಾರೆ. ಪ್ರಧಾನಿ ಮೋದಿ ಈ ಬಜೆಟ್ ಸರ್ವಶಕ್ತಿ ಬಜೆಟ್ ಎಂದು ಬಣ್ಣಿಸಿದ್ದು, ಭಾರತೀಯರನ್ನು ಅಭಿನಂದಿಸಿದ್ದಾರೆ. ಪ್ರತಿಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಕಾಪಿ ಮಾಡಿದಂತಿದೆ ಎಂದು ಆರೋಪಿಸಿದ್ದು, ಈ ಬಜೆಟ್‌ನಲ್ಲಿ ಹುರುಳಿಲ್ಲವೆಂದಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಬಜೆಟ್ 2024ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
09:16 PM (IST) Jul 23
ಇದು ದೂರಗಾಮಿ ಬಜೆಟ್ ಎಂದ ಎಚ್‌ಡಿಕೆ
ಪ್ರಸ್ತುತ 2024-25ನೇ ಸಾಲಿನ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದ್ದು, ಇದೊಂದು ದೂರಗಾಮಿ ಬಜೆಟ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅಪಾರ. ಇಲ್ಲಿ ಖಾಸಗಿ ವಲಯಕ್ಕೂ ಆದ್ಯತೆ ನೀಡುವ ಸಲುವಾಗಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹಲವು ಯೋಜನೆಗಳನ್ನು ಘೋಷಿಸಿದ್ದು, ಏನೇನಿವೆ ಇಲ್ಲಿ ನೋಡಿ.
ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಗೆ ಶೇ.2.5 ಅನುದಾನ ಹೆಚ್ಚಳ, ಒಟ್ಟು 26,092 ಕೋಟಿ ರೂ.ಮೀಸಲು ವಿವಿಧ ಇಲಾಖೆಯಡಿಯಲ್ಲಿ ಮಹಿಳೆ, ಬಾಲಕಿಯರ ಪ್ರಗತಿಗೆ ಒಟ್ಟಾರೆ 3 ಲಕ್ಷ ಕೋಟಿ ಅನುದಾನ ಮೀಸಲು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲುದಾರಿಕೆ ಕೊಂಡಾಡಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಹಿಳಾ ಹಾಸ್ಟೆಲ್ಸ್ ಬೆಂಬಲಿಸುವ ಸಾಮರ್ಥ್ಯ ಉಪ ಯೋಜನೆ, ಸ್ವಾಧಾರ್ ಗೃಹ, ಪ್ರಧಾನ್ ಮಂತ್ರಿ ಮಾತೃ ಯೋಜನೆಗೆ 2.5 ಸಾವಿರ ಕೋಟಿ ಅನುದಾನ ಸಕ್ಷಮ್ ಅಂಗನವಾಡಿ, ಪೋಷಣ್ 2.0, ಮಿಷನ್ ವಾತ್ಸಲ್ಯ, ಮಿಷನ್ ಶಕ್ತಿ ಸೇರಿ ಪ್ರಮುಖ ಯೋಜನೆಗಳಿಗೆ ಅಗತ್ಯ ಅನುದಾನ
03:03 PM (IST) Jul 23
ಸಮಾಜದ ಪ್ರತಿ ವರ್ಗದ ಜನರಿಗೆ ಶಕ್ತಿ ನೀಡುವ ಬಜೆಟ್, ದೇಶದ ಜನತೆಗೆ ಮೋದಿ ಅಭಿನಂದನೆ!
Union Budget 2024 ಮಂಡನೆಯಾದ ನಂತರ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಇದು ಸರ್ವಶಕ್ತ ಬಜೆಟ್ ಎಂದು ಬಣ್ಣಿಸಿದ್ದು, ದೇಶದ ಜನರನ್ನು ಅಭಿನಂದಿಸಿದ್ದಾರೆ.
ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ 1.48 ಲಕ್ಷ ಕೋಟಿ ಮೀಸಲಿಟ್ಟಿದ್ದು, ಕೌಶಲ್ಯಾಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು. ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ವರೆಗೂ ಶಿಕ್ಷಣ ಸಾಲ ನೀಡಲಾಗುವುದು. ರಾಜ್ಯ ಸರಕಾರ ಹಾಗು ಉದ್ಯಮಗಳೊಂದಿಗೆ ಕೈ ಜೋಡಿಸಿ, ಕೌಶಲ್ಯಾಭಿವೃದ್ಧಿಗೆ ಒತ್ತು ಐದು ವರ್ಷಗಳಲ್ಲಿ 20 ಲಕ್ಷ ಯುವಕರ ಕೌಶಲ್ಯಾಭಿವೃದ್ಧಿಗೆ ಗುರಿ. ಅಗತ್ಯ ನೆರವು. ಸಾವಿರ ಐಟಿಐಗಳ ಉನ್ನತೀಕರಣ, ಕೋರ್ಸ್ ಮರು ವಿನ್ಯಾಸ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ತರಬೇತಿ.
01:07 PM (IST) Jul 23
ಹೊಸ ಆದಾಯ ತೆರಿಗೆ ನೀತಿ ಆಯ್ಕೆ ಮಾಡಿಕೊಂಡವರಿಗೆ ಕೊಂಚ ರಿಲೀಫ್
ಹೊಸ ಆದಾಯ ತೆರಿಗೆ ನೀತಿ ಆಯ್ಕೆ ಮಾಡಿಕೊಂಡವರಿಗೆ ಕೊಂಚ ರಿಲೀಫ್ ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಭಾರ ಸ್ವಲ್ಪ ಕಡಿಮೆ 3 ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ ಆದಾಯ ತೆರಿಗೆ ಮಿತಿ 2.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಸಂಬಳದಾರರಿಗೆ ಬಿಗ್ ರಿಲೀಫ್ ಕೊಟ್ಟ ಕೇಂದ್ರ
01:06 PM (IST) Jul 23
ಬಜೆಟ್ ಬಳಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ
ಬಜೆಟ್ ಬಳಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೆನ್ಸೆಕ್ಸ್ 700 ಪಾಯಿಂಟ್ ಕುಸಿತ ನಿಫ್ಟಿ 225 ಪಾಯಿಂಟ್ ಕುಸಿತ ಬಜೆಟ್‌ಗೆ ಷೇರು ಮಾರುಕಟ್ಟೆ ನಿರಾಶಾದಾಯ ಪ್ರತಿಕ್ರಿಯೆ ಹಲವು ಪ್ರಮುಖ ಉದ್ದಿಮೆಗಳ ಷೇರುಗಳ ಕುಸಿತ
01:05 PM (IST) Jul 23
Union Budget 2024: ಸ್ವಂತ ವ್ಯವಹಾರ ಆರಂಭಿಸೋರಿಗೆ ಸಿಗಲಿದೆ 20 ಲಕ್ಷ
ಯುವ ಸಮುದಾಯಕ್ಕೆ 20 ಲಕ್ಷ ರೂ.ವರೆಗೆ ಸಾಲ ಸಿಗಲಿದೆ. ಈ ಮೊದಲು ಮುದ್ರಾ ಯೋಜನೆಯಡಿ ಗರಿಷ್ಠ 10 ಲಕ್ಷ ರೂ.ವರೆಗೆ ಮಾತ್ರ ಹಣಕಾಸಿನ ನೆರವನ್ನು ನೀಡಲಾಗುತ್ತಿತ್ತು
ಯಾವುದು ಅಗ್ಗ? ಮೊಬೈಲ್ ಫೋನ್ಸ್ ಕ್ಯಾನ್ಸರ್ ಔಷಧಿ ಸಾಗರ ಆಹಾರ ಚಿನ್ನ-ಬೆಳ್ಳಿ ಪ್ಲಾಟಿನಂ ಸೌರವಿದ್ಯುತ್ ಬಿಡಿ ಭಾಗಗಳು ಚಪ್ಪಲಿ
12:30 PM (IST) Jul 23
ತೆರಿಗೆ ಪಾವತಿ ಮಿತಿ 50 ಸಾವಿರದಿಂದ 75 ಸಾವಿರಕ್ಕೆ ಏರಿಕೆ
ಪ್ರತಿ ತೆರಿಗೆದಾರರಿಗೆ ವಾರ್ಷಿಕ 17500 ಉಳಿತಾಯ 3 ಲಕ್ಷದವರೆಗೆ ಆದಾಯ ಇರೋರಿಗೆ ಯಾವುದೇ ತೆರಿಗೆ ವಿನಾಯತಿ ಇಲ್ಲ. ವಿದೇಶಿ ಕಾರ್ಪೋರೇಟ್ ಹೂಡಿಕೆದಾರರಿಗೆ ವಿಧಿಸುತ್ತಿದ್ದ ಏಂಜೆಲ್ ಟ್ಯಾಕ್ಸ್ ಕಡಿತ. 0-3 : nil 3 to 7- 5% 7 to 10- 10% 10 to 12- 15% 12-15- 20%
12:27 PM (IST) Jul 23
ಹೊಸ ಟ್ಯಾಕ್ಸ್ ಪದ್ಧತಿ ಆರಿಸಿಕೊಳ್ಳಲು ಪ್ರೋತ್ಸಾಹ
ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ ಪ್ರೋತ್ಸಾಹ ಪೆನ್ಷನ್ ಪಡೆಯುವವರಿಗೆ ಅನಕೂಲ 1 ರಿಂದ 3 ಲಕ್ಷದವರಿಗೆ ಆದಾಯ ಪಡೆಯುವವರಿಗೆ ತೆರಿಗೆ ವಿನಾಯತಿ.
12:22 PM (IST) Jul 23
ವಿವಾದ್ ಸೇ ವಿಶ್ವಾಸ್ ಸ್ಕೀಂ ಯೋಜನೆ ಜಾರಿ
ನೇರ ತೆರಿಗೆ, ಎಕ್ಸೈಸ್ ಹಾಗೂ ವಿವಿಧ ಟ್ರಿಬ್ಯೂನಲ್‌ನಲ್ಲಿ ವಿವಾದವಿದ್ದು, ತೆರಿಗೆ ಪಾವತಿ ಡಿಲೇ ಆಗುತ್ತಿದ್ದರೆ, ಸುಗಮಗೊಳಿಸಲು ವಿವಾದ್ ಸೇ ವಿಶ್ವಾಸ ಸ್ಕೀಂ. ಆವಿಷ್ಕಾರಕ್ಕೆ ಒತ್ತು ನೀಡಲು ಎಂಜೇಲ್ ಟ್ಯಾಕ್ಸ್ ತೆಗೆದು ಹಾಕಲು ನಿರ್ಧಾರ. ಉದ್ಯಗ ಸೃಷ್ಟಿಸುತ್ತಿರುವ ಕ್ಷೇತ್ರಗಳಿಗೆ ತೆರಿಗೆ ವಿನಾಯಿತು. ವಜ್ರ ಪಾಲಿಶ್ ಕ್ಷೇತ್ರಕ್ಕೆ ಅಗತ್ಯ ನೆರವು ವಿದೇಶಿ ಬಂಡವಾಳ ಹೆಚ್ಚಿಸಲು ಅಗತ್ಯ ತೆರಿಗೆ ವಿನಾಯಿತಿ.
12:19 PM (IST) Jul 23
ಟಿಡಿಎಸ್ ಪೇಮೆಂಟ್ ಮಾಡೋದು ಲೇಟ್ ಆದ್ರೆ ಯಾವುದೇ ದಂಡ ಇಲ್ಲ
ತೆರಿಗೆ ಪಾವತಿ ಸರಳೀಕರಣ. ತೆರಿಗೆ ಅಸ್ಥಿರತೆ ತಡೆಯಲು ಸೂಕ್ತ ಕ್ರಮ. ಜಿಎಸ್‌ಟಿ ಹಾಗೂ ಕಸ್ಟಮ್ಸ್ ಸುಂಕ ಕಟ್ಟುವುದನ್ನು ಡಿಜಿಟಲೈಸ್ ಮಾಡಲಾಗಿದ್ದು, ಎಲ್ಲ ರೀತಿಯ ತೆರಿಗೆ ಪಾವತಿಯನ್ನು ಇನ್ನೆರಡು ವರ್ಷಗಳಲ್ಲಿ ಪೇಪರ್‌ಲೆಸ್ ಮಾಡಲಾಗುತ್ತದೆ.
12:16 PM (IST) Jul 23
Budget 2024 LIVE: 100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರ
ಎನ್‌ಟಿಪಿಸಿ ಮತ್ತು ಬಿಎಚ್‌ಇಎಲ್ ನಡುವಿನ ಜಂಟಿ ಉದ್ಯಮವು AUSC (ಅಡ್ವಾನ್ಸ್‌ಡ್ ಅಲ್ಟ್ರಾ ಸೂಪರ್‌ಕ್ರಿಟಿಕಲ್) ತಂತ್ರಜ್ಞಾನವನ್ನು ಬಳಸಿಕೊಂಡು 100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಿದೆ. ದೇಶದಲ್ಲಿ ಸಣ್ಣ ರಿಯಾಕ್ಟರ್‌ಗಳ ಸ್ಥಾಪನೆ, ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪರಮಾಣು ಶಕ್ತಿಗಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತವು ಖಾಸಗಿ ವಲಯದೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
12:07 PM (IST) Jul 23
ಕ್ಯಾನ್ಸರ್ ಡ್ರಗ್ಸ್‌ಗೆ ಕಸ್ಟಮ್ ಡ್ಯುಟಿಯಿಂದ ವಿನಾಯಿತಿ
ಎಲ್ಲೆಡೆ ಕ್ಯಾನ್ಸರ್ ಹೆಚ್ಚುತ್ತಿದ್ದು, ರೋಗಕ್ಕೆ ಕೊಡುವ ಔಷಧಿಗೆ ಸುಂಕ ವಿನಾಯಿತು ಕೊಡಲು ಸರಕಾರ ಒತ್ತು:ನಿರ್ಮಲಾ ಸಿತರಾಮನ್.
12:06 PM (IST) Jul 23
ಜಿಎಸ್‌ಟಿ ಸರಳೀಕರಣಕ್ಕೆ ಆದ್ಯತೆ
ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದ್ದು, ಮಧ್ಯಮ ಹಾಗೂ ಬಡವರ ಮೇಲೆ ಅಪಾರ ಹೊರೆ ಆಗುತ್ತಿರುವ ಜಿಎಸ್‌ಟಿಯನ್ನು ಮತ್ತುಷ್ಟು ಸರಳೀಕರಿಸಲು ಸರಕಾರದ ಆದ್ಯತೆ: ನಿರ್ಮಲಾ.
12:05 PM (IST) Jul 23
Budget 2024 LIVE: ಧಾರ್ಮಿಕ ಪ್ರವಾಸೋದ್ಯಮಕ್ಕೆ ಸರ್ಕಾರದ ಒತ್ತು
ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದೆ. ಮಹಾಬೋಧಿ ದೇವಾಲಯಕ್ಕೆ ಕಾರಿಡಾರ್ ನಿರ್ಮಾಣವನ್ನು ಘೋಷಿಸಲಾಗಿದೆ. ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಕಾರಿಡಾರ್ ನಿರ್ಮಿಸಲಾಗುವುದು. ಇದು ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿಯ ಮಾದರಿಯಲ್ಲಿರಲಿದೆ.
12:05 PM (IST) Jul 23
Budget 2024 LIVE: ಸೂರ್ಯೋಘರ್ ಉಚಿತ ವಿದ್ಯುತ್ ಯೋಜನೆ
ಉಚಿತ ಸೌರ ವಿದ್ಯುತ್ ಯೋಜನೆ ಕುರಿತು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರಿಂದಾಗಿ 1 ಕೋಟಿ ಕುಟುಂಬಗಳು 300 ಯೂನಿಟ್ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
12:04 PM (IST) Jul 23
ಪ್ರವಾಹ ತಡೆಗೆ ಅಗತ್ಯ ನೆರವು
Union Budget 2024: ಬಿಹಾರದಲ್ಲಿ ಪದೆ ಪದೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ತಡೆಯಲು ಅಗತ್ಯ ಕ್ರಮ. ನೇಪಾಳ ಪ್ರವಾಹ ತಡೆಯಲು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ವಿಫಲವಾಗಿದ್ದು, ಇದಕ್ಕೆ ಕೇಂದ್ರದಿಂದ 11,500 ಕೋಟಿ ನೆರವು. ಬ್ರಹ್ಮಪುತ್ರಾ ಹಾಗೂ ಭಾರತದಿಂದ ಹೊರಗೆ ಹುಟ್ಟುವ ಇದರ ಉಪ ನದಿಗಳಿಂದ ಅಸ್ಸಾಂನಲ್ಲಿಯೂ ಪ್ರತೀ ವರ್ಷವೂ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಇದನ್ನು ತಡೆಯಲು ಅಗತ್ಯ ನೆರವು. ಉತ್ತರಾಖಾಂಡ, ಸಿಕ್ಕಿಂ, ಹಿಮಾಚಲ ಪ್ರದೇಶದಲ್ಲಿ ಪದೆ ಪದೇ ಸಂಭವಿಸುವ ಭೂ ಕುಸಿತ ತಡೆಗೂ ಸೂಕ್ತ ನೆರವು: ನಿರ್ಮಲಾ