ಬಜೆಟ್ ಹಂಚಿಕೆ: ಉತ್ತರ ಪ್ರದೇಶಕ್ಕೆ ಶೇ.18, ರಾಜ್ಯಕ್ಕೆ ಕೇವಲ ಶೇ.3
2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯವಾರು ಕೇಂದ್ರೀಯ ತೆರಿಗೆ/ಸುಂಕ ಹಂಚಿಕೆ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶಕ್ಕೆ ಒಟ್ಟಾರೆ 1.83 ಲಕ್ಷ ಕೋಟಿ ರು. ನೀಡಲಾಗಿದ್ದು ಅತಿ ಹೆಚ್ಚು ಕೊಡುಗೆ ಪಡೆದ ರಾಜ್ಯವಾಗಿದೆ.
ನವದೆಹಲಿ: 2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯವಾರು ಕೇಂದ್ರೀಯ ತೆರಿಗೆ/ಸುಂಕ ಹಂಚಿಕೆ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶಕ್ಕೆ ಒಟ್ಟಾರೆ 1.83 ಲಕ್ಷ ಕೋಟಿ ರು. ನೀಡಲಾಗಿದ್ದು ಅತಿ ಹೆಚ್ಚು ಕೊಡುಗೆ ಪಡೆದ ರಾಜ್ಯವಾಗಿದೆ. ಕರ್ನಾಟಕಕ್ಕೆ 37,252 ಕೋಟಿ ರು. ನೀಡಲಾಗಿದೆ.
ಬಿಹಾರಕ್ಕೆ 1.02 ಲಕ್ಷ ಕೋಟಿ ರು. ನೀಡಲಾಗಿದ್ದು 2ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶಕ್ಕೆ 80 ಸಾವಿರ ಕೋಟಿ ರು., ಪಶ್ಚಿಮ ಬಂಗಾಳಕ್ಕೆ 76 ಸಾವಿರ ಕೋಟಿ ರು., ಮಹಾರಾಷ್ಟ್ರಕ್ಕೆ 64 ಸಾವಿರ ಕೋಟಿ ರು. ಹಂಚಿಕೆ ಮಾಡಲಾಗಿದ್ದು, ಇವು ನಂತರ ಸ್ಥಾನಗಳಲ್ಲಿವೆ.
Union Budget:ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಖರ್ಚಿಗೆ ಹಣ ಕಳುಹಿಸಿದ್ರೂ ಜೇಬಿಗೆ ಬೀಳುತ್ತೆ ಕತ್ತರಿ
ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಗೆ ಕ್ರಮವಾಗಿ 41.6 ಸಾವಿರ ಕೋಟಿ ರು. ಹಾಗೂ 41.3 ಸಾವಿರ ಕೋಟಿ ರು. ನೀಡಲಾಗಿದ್ದು ಅತಿ ಹೆಚ್ಚು ಹಂಚಿಕೆ ಪಡೆದ ದಕ್ಷಿಣದ ರಾಜ್ಯಗಳು ಎನಿಸಿಕೊಂಡಿವೆ. ಛತ್ತೀಸ್‌ಗಢ (34 ಸಾವಿರ ಕೋಟಿ ರು.), ಅಸ್ಸಾಂ (31 ಸಾವಿರ ಕೋಟಿ ರು.), ಗುಜರಾತ್ (35 ಸಾವಿರ ಕೋಟಿ ರು.), ಜಾರ್ಖಂಡ್ (33 ಸಾವಿರ ಕೋಟಿ ರು.)ಗಳಿಗೆ ಶೇ.3ರಷ್ಟುಹಂಚಿಕೆ ಮಾಡಲಾಗಿದೆ.
ಅರುಣಾಚಲ ಪ್ರದೇಶ (17 ಸಾವಿರ ಕೋಟಿ ರು.), ಹರ್ಯಾಣ (11 ಸಾವಿರ ಕೋಟಿ ರು.), ಕೇರಳ (19 ಸಾವಿರ ಕೋಟಿ ರು.), ಪಂಜಾಬ್ (18 ಸಾವಿರ ಕೋಟಿ ರು.) ಹಾಗೂ ಉತ್ತರಾಖಂಡ (11 ಸಾವಿರ ಕೋಟಿ ರು.)ಗಳು ಶೇ.1ರಷ್ಟುಹಂಚಿಕೆಯನನ್ನು ಪಡೆದುಕೊಂಡ ರಾಜ್ಯಗಳಾಗಿವೆ.
Union Budget: ಉದ್ಯೋಗಿಗಳಿಗೆ ಕೊಂಚ ರಿಲೀಫ್, ಇಪಿಎಫ್ ವಿತ್ ಡ್ರಾ ಮೇಲಿನ ಟಿಡಿಎಸ್ ಶೇ.30ರಿಂದ ಶೇ.20ಕ್ಕೆ ಇಳಿಕೆ