ನವದೆಹಲಿ[ಜು.05]: ನಿರ್ಮಲಾ ಸೀತಾರಾಮನ್ ಬಹು ನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಅಳೆದು ತೂಗಿ ಯೋಜನೆ ಹಾಗೂ ಅನುದಾನ ಘೋಷಿಸಿರುವ ಹಣಕಾಸು ಸಚಿವೆ, ಭಾರತದ ಪ್ರವಾಸೀ ತಾಣಗಳ ಅಭಿವೃದ್ಧಿಗೂ ಒತ್ತು ನೀಡಿದ್ದಾರೆ.

ಬಜೆಟ್ ನಲ್ಲಿ ಭಾರತದ ಪ್ರವಾಸೀ ಕೆಂದ್ರಗಳ ಅಭಿವೃದ್ಧಿಯನ್ನು ಉಲ್ಲೇಖಿಸಿರುವ ನಿರ್ಮಲಾ ಸೀತಾರಾಮನ್ 17 ಪ್ರಮುಖ ಪ್ರವಾಸಿ ತಾಣಗಳನ್ನ ವಿಶ್ವ ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಭಾರತದ ರಾಯಭಾರ ಕಚೇರಿ ತೆರೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.