ಲೋಕಸಭೆಯಲ್ಲಿ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ| ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ಕೇಂದ್ರ ಹಣಕಾಸು ಸಚಿವೆ| ಅರ್ಥ ಪಥದ ನೀಲನಕ್ಷೆ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್|ಹೊಸ ನಾಣ್ಯ ಬಿಡುಗಡೆ ಘೋಷಣೆ ಮಾಡಿದ ಕೇಂದ್ರ ವಿತ್ತ ಸಚಿವೆ| 1,2,5,10,20 ರೂ. ಮುಖಬೆಲೆಯ ಹೊಸ ನಾಣ್ಯಗಳು| ಅಂಧರಿಗೆ ಅನುಕೂಲವಾಗಲು ವಿಶೇಷ ವಿನ್ಯಾಸದ ನಾಣ್ಯಗಳು|
ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಈ ವೇಳೆ ಹೊಸ ನಾಣ್ಯಗಳ ಬಿಡುಗಡೆಯನ್ನು ಕೇಂದ್ರ ಹಣಕಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. 1,2,5,10 ಮತ್ತು 20 ರೂ. ಮುಖಬೆಲೆಯ ಹೊಸ ನಾಣ್ಯಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.
ಅಂಧರಿಗೆ ಅನುಕೂಲವಾಗಲಿ ಎಂದು ಈ ಹೊಸ ನಾಣ್ಯಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಅಲ್ಲದೇ ಕಳೆದ ಮಾರ್ಚ್‌ನಲ್ಲೇ ಈ ನಾಣ್ಯಗಳನ್ನು ತಯಾರಿಸಲಾಗಿದ್ದು, ಇಂದು ಅಧಿಕೃತವಾಗಿ ಚಲಾವಣೆಗೆ ಬಂದಿವೆ.
