Asianet Suvarna News Asianet Suvarna News

ಸರ್ಕಾರಿ ಬ್ಯಾಂಕ್‌ನಿಂದ ಗೃಹ ಸಾಲ ಬಡ್ಡಿ ಇಳಿಕೆ; ಮಹಿಳೆಯರಿಗೆ ಬಂಪರ್!

ಗೃಹ ಸಾಲ ಬಡ್ಡಿ ದರದಲ್ಲಿ ಕಡಿತಗೊಳಿಸುವುದರ ಜತೆಗೆ ಝೀರೊ ಪ್ರೊಸೆಸಿಂಗ್‌ ಚಾರ್ಜ್‌ ಸೌಲಭ್ಯವನ್ನು ಸಹ ಬ್ಯಾಂಕ್‌ ಕಲ್ಪಿಸಿದ್ದು ಈ ಆಫರ್‌ ಡಿಸೆಂಬರ್‌ 31 ರ ವರೆಗೆ ಚಾಲ್ತಿಯಲ್ಲಿರುತ್ತದೆ

Union Bank of India cuts home loan rates by 10 bps pod
Author
Bangalore, First Published Nov 2, 2020, 5:50 PM IST

ಬೆಂಗಳೂರು(ನ.02): ಸರ್ಕಾರಿ ಸೌಮ್ಯದ ಬ್ಯಾಂಕ್‌ ಆದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾವು ಗೃಹ ಸಾಲದ ಬಡ್ಡಿ ದರವನ್ನು 10 ಬೇಸಿಸ್‌ ಪಾಯಿಂಟ್ಸ್‌ (BPS) ನಷ್ಟು ಕಡಿತಗೊಳಿಸಿದ್ದು ಈ ದರವು 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಸಾಲ ಪಡೆದ ಗ್ರಾಹಕರಿಗೆ ಅನ್ವಯಿಸುತ್ತದೆ. ಅಷ್ಟೇ ಅಲ್ಲದೆ ಗೃಹಸಾಲ ಬಡ್ಡಿಯಲ್ಲಿ ಮಹಿಳೆಯರಿಗೆ ವಿಶೇಷ ರಿಯಾಯಿತಿ ಸೌಲಭ್ಯವನ್ನು ಬ್ಯಾಂಕ್‌ ಘೋಷಿಸಿದ್ದು ಮಹಿಳೆಯರು 5 ಬೇಸಿಸ್‌ ಪಾಯಿಂಟ್ಸ್‌ನಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ಸಹ ಬ್ಯಾಂಕ್‌ ಕಲ್ಪಿಸಿದೆ.

ಗೃಹ ಸಾಲ ಬಡ್ಡಿ ದರದಲ್ಲಿ ಕಡಿತಗೊಳಿಸುವುದರ ಜತೆಗೆ ಝೀರೊ ಪ್ರೊಸೆಸಿಂಗ್‌ ಚಾರ್ಜ್‌ ಸೌಲಭ್ಯವನ್ನು ಸಹ ಬ್ಯಾಂಕ್‌ ಕಲ್ಪಿಸಿದ್ದು ಈ ಆಫರ್‌ ಡಿಸೆಂಬರ್‌ 31 ರ ವರೆಗೆ ಚಾಲ್ತಿಯಲ್ಲಿರುತ್ತದೆ. ಒಂದು ವೇಳೆ ಗೃಹ ಸಾಲವನ್ನು ಬೇರೆ ಬ್ಯಾಂಕ್‌ನಿಂದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಟೇಕ್‌ ಓವರ್‌ ಮಾಡಿಕೊಂಡರೆ ರೂ 10000 ವರೆಗೆ ಕಾನೂನು ಮತ್ತು ಮೌಲ್ಯ ಮಾಪನ (ಲೀಗಲ್‌ ಅಂಡ್‌ ಇವ್ಯಾಲುಎಷನ್‌) ಶುಲ್ಕವನ್ನು ಬ್ಯಾಂಕ್‌ ಕಡಿತಗೊಳಿಸಿದೆ.

ಈ ಎಲ್ಲಾ ಸೌಲಭ್ಯವು ನವೆಂಬರ್‌ 1 ರಿಂದ ಜಾರಿಯಲ್ಲಿರುತ್ತದೆ. ಗೃಹ ಸಾಲ ಸೌಲಭ್ಯದ ಜತೆಗೆ ಕಾರು ಮತ್ತು ಶೈಕ್ಷಣಿಕ ಸಾಲ ಪಡೆದುಕೊಳ್ಳುವವರಿಗೆ ಸಹ ರಿಯಾಯಿತಿ ಕಲ್ಪಿಸಿದ್ದು ಈ ಸಾಲಗಳ ಮೇಲಿನ ಪ್ರೊಸೆಸಿಂಗ್‌ ಶುಲ್ಕವನ್ನು ಬ್ಯಾಂಕ್‌ ಮನ್ನಾ ಮಾಡಿದೆ. ರಿಟೈಲ್‌ ಮತ್ತು ಎಂಎಸ್‌ಎಂಇ ಸಾಲುಗಳು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಬ್ಯಾಂಕ್‌ ಹಲವಾರು ಅಭಿಯಾನಕ್ಕೆ ಸಹ ಚಾಲನೆ ನೀಡಿದೆ. ಹಬ್ಬಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಗ್ರಾಹಕರು ಈ ಎಲ್ಲಾ ರಿಯಾಯಿತಿ ಕೊಡುಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸ ಬ್ಯಾಂಕ್‌ನದ್ದು.

Follow Us:
Download App:
  • android
  • ios