Asianet Suvarna News Asianet Suvarna News

#OneTeam ಹ್ಯಾಷ್‌ಟ್ಯಾಗ್ ಬಳಸಿ ಟ್ವಿಟ್ಟರ್‌ಗೆ ಭಾವುಕ ಗುಡ್‌ಬೈ ಹೇಳಿದ ಉದ್ಯೋಗಿಗಳು

ನೌಕರರ ವಿರೋಧದ ನಡುವೆ ತನ್ನ ಶೇ.50ರಷ್ಟು ಸಿಬ್ಬಂದಿಯನ್ನು, ಅರ್ಥಾತ್‌  7500 ಸಿಬ್ಬಂದಿಗಳನ್ನು ಚುಟುಕು ಸಾಮಾಜಿಕ ಮಾಧ್ಯಮ ‘ಟ್ವೀಟರ್‌’, ವಜಾ ಮಾಡಿದೆ.

twitter ex employees say godbye to twitter Using Onteam has tag, some share emotional memory akb
Author
First Published Nov 6, 2022, 3:30 PM IST


ಸ್ಯಾನ್‌ ಫ್ರಾನ್ಸಿಸ್ಕೊ: ನೌಕರರ ವಿರೋಧದ ನಡುವೆ ತನ್ನ ಶೇ.50ರಷ್ಟು ಸಿಬ್ಬಂದಿಯನ್ನು, ಅರ್ಥಾತ್‌  7500 ಸಿಬ್ಬಂದಿಗಳನ್ನು ಚುಟುಕು ಸಾಮಾಜಿಕ ಮಾಧ್ಯಮ ‘ಟ್ವೀಟರ್‌’, ವಜಾ ಮಾಡಿದೆ. ಈ ಕುರಿತು ಟ್ವೀಟ್‌ ಮಾಡಿರುವ ಟ್ವೀಟರ್‌ನ ನೂತನ ಮಾಲೀಕ ಎಲಾನ್‌ ಮಸ್ಕ್, ‘ಕಂಪನಿ ದಿನಕ್ಕೆ 40 ಲಕ್ಷ ಡಾಲರ್‌ನಷ್ಟು ನಷ್ಟ ಅನುಭವಿಸುತ್ತಿದೆ. ಹಾಗಾಗಿ ವಜಾ ಮಾಡದೇ ಬೇರೆ ಆಯ್ಕೆ ಇಲ್ಲ’ ಎಂದಿದ್ದಾರೆ. ಕಂಪನಿಯನ್ನು ಲಾಭದತ್ತ ಕೊಂಡೊಯ್ಯುವ ಉದ್ದೇಶದಿಂದ 50% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡುವ ತಮ್ಮ ಯೋಜನೆ ಬಗ್ಗೆ ಕೇವಲ ಒಂದು ವಾರದ ಹಿಂದೆ ಮಸ್ಕ್‌ ಘೋಷಿಸಿದ್ದರು. ಈ ಕುರಿತು ವಜಾಗೊಂಡ ಉದ್ಯೋಗಿಗಳು ಅಸಮಾಧಾನ ಹೊರಹಾಕಿದ್ದು, ‘ಇದು ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಮಾರ್ಗವಾಗಿದ್ದು, ಮಸ್ಕ್‌  ಎಲ್ಲ ಕಡೆಯಿಂದಲೂ ಲಾಭ ಗಳಿಸುವ ಯೋಚನೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ವಜಾ ಮಾಡುವ 24 ಗಂಟೆಯ ಮೊದಲು ಕೆಲಸದಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಕಚೇರಿಗೆ ಹೋಗದೆ ಮನೆಯಲ್ಲೇ ಇರಲು ಸಿಬ್ಬಂದಿಗಳಿಗೆ ಇ-ಮೇಲ್‌ ಕಳುಹಿಸಲಾಗಿತ್ತು ಹಾಗೂ ಕೆಲಸಕ್ಕೆ ಲಾಗಿನ್‌ ಆಗುವ ಅವಕಾಶವನ್ನು ನಿರಾಕರಿಸಲಾಗಿತ್ತು. ಇತ್ತೀಚೆಗೆ, ಟೆಸ್ಲಾ ಕಾರು ಕಂಪನಿ ಮಾಲೀಕ ಮಸ್ಕ್‌ 44 ದಶಲಕ್ಷ ಡಾಲರ್‌ಗೆ ಟ್ವೀಟರ್‌ ಅನ್ನು  ಖರೀದಿಸಿದ್ದರು. ಈ ಹಣದ ವಸೂಲಿ ಭಾಗವಾಗಿ ಮಸ್ಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಟ್ವೀಟರ್‌ನಲ್ಲಿ ಉಳಿದ ಉದ್ಯೋಗಿಗಳ ಮೇಲ್ವಿಚಾರಣೆಗೆ ಟೆಸ್ಲಾದ ಉದ್ಯೋಗಿಗಳನ್ನು ಕರೆತರಲಾಗುತ್ತಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

Twitter ಖಾತೆ ಅಮಾನತಿಗೆ ಎಲಾನ್‌ ಮಸ್ಕ್‌ರನ್ನು ವಿಚಾರಣೆಗೆ ಕರೆಸಿ ಎಂದು ಅರ್ಜಿ: ಕೋರ್ಟ್‌ನಿಂದ 25 ಸಾವಿರ ರೂ. ದಂಡ

ಇತ್ತ ಎಲಾನ್‌ ಮಸ್ಕ್ ಈ ನಿರ್ಧಾರದಿಂದ ತಕ್ಷಣದಿಂದ ಉದ್ಯೋಗ ಕಳೆದುಕೊಂಡ ಅನೇಕರು ಟ್ವಿಟ್ಟರ್‌ ಮೂಲಕವೇ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಒನ್‌ಟೀಮ್ ಹ್ಯಾಷ್‌ಟ್ಯಾಗ್ ಮೂಲಕ ತಮ್ಮ ನೋವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಅವರ ಕೆಲವು ಟ್ವಿಟ್‌ಗಳು ಇಲ್ಲಿವೆ ನೋಡಿ.

Twitterನಿಂದ 8 ತಿಂಗಳ ಗರ್ಭಿಣಿ ವಜಾ: ಮಹಿಳೆಯ ಟ್ವೀಟ್‌ ವೈರಲ್‌

 

Follow Us:
Download App:
  • android
  • ios