ಟಪ್ಪರ್‌ವೇರ್ ಬಾಕ್ಸ್, ಟಪ್ಪರ್‌ವೇರ್ ಉತ್ಪನ್ನಗಳಿಲ್ಲದ ಮನೆಗಳಿಲ್ಲ. ಅಷ್ಟರಮಟ್ಟಿಗೆ ಟಪ್ಪರ್‌ವೇರ್ ಭಾರತ ಹಾಗೂ ಜಗತ್ತಿನಲ್ಲೇ ಮನೆಮಾತಾಗಿದೆ. ಆದರೆ ಇದೇ ಟಪ್ಪರ್‌ವೇರ್ ಕಂಪನಿ ಇದೀಗ ದಿವಾಳಿಯಾಗಿದೆ. 

ನವದೆಹಲಿ(ಸೆ.18) ಟಪ್ಪರ್‌ವೇರ್ ಕಂಪನಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಬಹುತೇಕರ ಮನೆಯ ಅಡುಗೆ ಕೋಣೆಯಲ್ಲಿ ಟಪ್ಪರ್‌ವೇರ್ ಉತ್ಪನ್ನಗಳು ಇದ್ದೇ ಇರುತ್ತೆ. ಲಂಚ್ ಬಾಕ್ಸ್, ಬಿಸಿ ಬಿಸಿಯಾಗಿ ಆಹಾರ ಇಡಲು ಸೇರಿದಂತೆ ಹಲವು ಉತ್ಪನ್ನಗಳು ಟಪ್ಪರ್‌ವೇರ್ ಕಂಪನಿ ಮಾರುಕಟ್ಟೆಗೆ ಪರಿಚಯಿಸಿ ಯಶಸ್ವಿಯಾಗಿತ್ತು. ಆದರೆ ಕೇವಲ ಟಪ್ಪರ್‌ವೇರ್ ಬಾಕ್ಸ್‌ನೊಳಗೆ ಸಿಲುಕಿದ ಕಂಪನಿ ಇದೀಗ ದಿವಾಳಿಯಾಗಿದೆ. ಹೌದು, ಟಪ್ಪರ್‌ವೇರ್ ಬಾಕ್ಸ್‌ನಿಂದ ಜಗತ್ತಿನಲ್ಲೇ ಯಸಸ್ವಿ ವಹಿವಾಟು ನಡೆಸಿದ್ದ ಟಪ್ಪರ್‌ವೇರ್ ಕಂಪನಿ ಇದೀಗ ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿದೆ.

ಪೈಪೋಟಿ, ಪ್ರತಿಸ್ಪರ್ಧೆ ಜೊತೆಗೆ ಟಪ್ಪರ್‌ವೇರ್ ಬಾಕ್ಸ್ ಬಿಟ್ಟು ಬೇರೆ ಹೊಸದಾಗಿ ಉತ್ಪನ್ನಗಳ ಮಾರುಕಟ್ಟೆಗೆ ಪರಿಚಯಿಸದೇ ಒಂದೇ ಉತ್ಪನ್ನದ ಮೂಲಕ ವಹಿವಾಟು ನಡೆಸಿದ ಟಪ್ಪರ್‌ವೇರ್ ಕಂಪನಿ ಇದೀಗ ದಿವಾಳಿಯಾಗಿದೆ. ಮಾರಾಟದಲ್ಲಿ ಗಣನೀಯ ಕುಸಿತ ಕಂಪನಿಯ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಇದೀಗ ಕಂಪನಿ ಚಾಪ್ಟರ್ 11 ಮೂಲಕ ದಿವಾಳಿತನದಿಂದ ರಕ್ಷಣೆಗಾಗಿ ಅರ್ಜಿ ಸಲ್ಲಿಕೆ ಮಾಡಿದೆ.

WeWork Bankruptcy: ವೀವರ್ಕ್‌ ಕಂಪನಿ ದಿವಾಳಿ, ಶೇ. 50ರಷ್ಟು ಕುಸಿದ ಕಂಪನಿಯ ಷೇರುಗಳು!

ಈ ಅರ್ಜಿಯಲ್ಲಿ ಟಪ್ಪರ್‌ವೇರ್ ಕಂಪನಿ ಮೌಲ್ಯವನ್ನು 500 ಮಿಲಿಯನ್ ಅಮೆರಿಕನ್ ಡಾಲರ್‌ನಿಂದ 1 ಬಿಲಿಯನ್ ಅಮೆರಿಕನ್ ಡಾಲರ್ ಎಂದಿದೆ. ಆದರೆ ಸಾಲದ ಹೊಣೆಗಾರಿಕೆ ಇದೀಗ 1 ಬಿಲಿಯನ್‌ನಿಂದ 10 ಬಿಲಿಯನ್ ಎಂದು ಪಟ್ಟಿ ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ ಕಂಪನಿ ಸಾಲದ ಸುಳಿಗೆ ಬಿದ್ದಿದೆ. 2020ರ ಕೊರೋನಾ ಬಳಿಕ ಟಪ್ಪರ್‌ವೇರ್ ಕಂಪನಿ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿತ್ತು. 2020ರಿಂದ ಟಪ್ಪರ್‌ವೇರ್ ಕಂಪನಿಯ ಸಾಲ ಹೆಚ್ಚಾಗುತ್ತಲೆ ಹೋಗಿದೆ. 

2024ರ ಜೂನ್ ತಿಂಗಳಲ್ಲಿ ಅಮೆರಿಕದ ಫ್ಯಾಕ್ಟರಿಯನ್ನು ಮುುಚ್ಚಿತ್ತು. ಇಷ್ಟೇ ಅಲ್ಲ 150 ಉದ್ಯೋಗಿಗಳನ್ನು ಅಮಾನತು ಮಾಡಿತ್ತು. ಕಳೆದ ಕೆಲ ತಿಂಗಳಿನಿಂದ ಟಪ್ಪರ್‌ವೇರ್ ಕಂಪನಿ ಇತರ ಕಂಪನಿಗಳ ಜೊತೆ ಪಾಲುದಾರಿಕೆ ಮಾತುಕತೆ ನಡೆದಿದೆ. ಆದರೆ ಫಲಪ್ರದವವಾಗಿಲ್ಲ. 1946ರಲ್ಲಿ ಅರ್ಲ್ ಟಪ್ಪರ್ ಸಣ್ಣ ಹೂಡಿಕೆಯಿಂದ ಆರಂಭಿಸಿದ ಕಂಪನಿ ಟಪ್ಪರ್‌ವೇರ್. ಅಮೆರಿಕದಲ್ಲಿ ಆರಂಭಗೊಂಡ ಕಂಪನಿ ಅಷ್ಟೇ ವೇಗದಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಟಪ್ಪರ್‌ವೇರ್ ಚಾಪು ಮೂಡಿಸಿತ್ತು. ಆದರೆ ಟಪ್ಪರ್‌ವೇರ್ ಬಾಕ್ಸ್‌ಗಳಿಗೆ ಸೀಮಿತವಾಗಿತ್ತು. 

ಟಪ್ಪರ್‌ವೇರ್ ಕಂಪನಿ ಖರೀದಿಗೆ ಕೆಲ ಕಂಪನಿಗಳನ್ನು ಮುಂದೆ ಬಂದಿದೆ. ಆದರೆ ಸಾಲದ ಮೊತ್ತ ಹೆಚ್ಚಾಗಿರುವ ಕಾರಣ ಖರೀದಿ ಮಾತುಕತೆ ಮುರಿದು ಬೀಳುತ್ತಿದೆ. ಇತರ ಕಂಪನಿಗಳು ಖರೀದಿಸಿದರೆ ಟಪ್ಪರ್‌ವೇರ್ ಮುಂದುವರಿಯಲಿದೆ. ಇಲ್ಲದಿದ್ದರೆ ಟಪ್ಪರ್‌ವೇರ್ ಕಂಪನಿ ಬಾಗಿಲು ಮುಚ್ಚಲಿದೆ ಅನ್ನೋ ಮಾತುಗಳನ್ನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟಾಯ್ಲೆಟ್ ಕ್ಲೀನಿಂಗ್, ಟ್ಯಾಕ್ಸಿ ಚಾಲಕ, ಮೆಕ್ಯಾನಿಕ್.. ಸೂಪರ್ ಸ್ಟಾರ್‌ನಿಂದ ದಿವಾಳಿತನದವರೆಗೆ.. ಯಾರೀ ನಟ?