Asianet Suvarna News Asianet Suvarna News

ಟ್ರಂಪ್ ದ್ವೇಷ: ಭಾರತೀಯ ಐಟಿ ಕಂಪನಿಗಳಿಗೆ ವಿನಾಶ!

ಹೆಚ್​-1ಬಿ ವೀಸಾ ನೀತಿಯ ವ್ಯಾಖ್ಯಾನಕ್ಕೆ ತಿದ್ದುಪಡಿ ತರಲು ಮುಂದಾದ ಅಮೆರಿಕ! ವಿದೇಶಿ ಉದ್ಯೋಗ ವೀಸಾ ವ್ಯಾಖ್ಯಾನ ಮರು ಪರಿಶೀಲನೆಗೆ ಟ್ರಂಪ್ ಆಸಕ್ತಿ! ಷೇರು ಮಾರುಕಟ್ಟೆಯಲ್ಲಿ ಭಾರತೀಯ ಐಟಿ ಕಂಪನಿಗಳ ಷೇರು ಪಾತಾಳಕ್ಕೆ!ವಿವಿಧ ಭಾರತೀಯ ಐಟಿ ಕಂಪನಿಗಳ ಷೇರು ಮೌಲ್ಯದಲ್ಲಿ ದಿಢೀರ್ ಕುಸಿತ

Trump H-1B Visa Proposal Makes Indian IT Companies Shares Down
Author
Bengaluru, First Published Oct 20, 2018, 8:07 PM IST

ಮುಂಬೈ(ಅ.20): ಎರಡು ದಿನದ ಹಿಂದೆಯಷ್ಟೇ ಅಮೆರಿಕಾದ ಅಧ್ಯಕ್ಷ  ಡೋನಾಲ್ಡ್​ ಟ್ರಂಪ್​ ಹೆಚ್​-1ಬಿ ವೀಸಾ ನೀತಿಯ ವ್ಯಾಖ್ಯಾನಕ್ಕೆ ತಿದ್ದುಪಡಿ ತರುವುದಾಗಿ ಘೋಷಿಸಿದ್ದರು. ಅಲ್ಲದೇ ಅಮೆರಿಕದ ಭಾರತೀಯ ಐಟಿ ಕಂಪನಿಗಳು ನೇಮಿಸಿಕೊಳ್ಳುವ ವಿದೇಶಿ ಉದ್ಯೋಗ ವೀಸಾ ವ್ಯಾಖ್ಯಾನ ಮರು ಪರಿಶೀಲನೆ ನಡೆಸುವುದಾಗಿ ತೀರ್ಮಾನ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ದಸರಾ ಹಬ್ಬದ ತರುವಾಯ ಆರಂಭವಾದ ಷೇರು ಪೇಟೆಯಲ್ಲಿ ಐಟಿ ಷೇರುಗಳ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ.

ಮುಂಬೈನ ರಾಷ್ಟ್ರೀಯ ಸಂವೇದಿ ಷೇರು ಸೂಚ್ಯಂಕದಲ್ಲಿ ದೇಶದ ದಿಗ್ಗಜ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್​)​, ಇನ್ಫೋಸಿಸ್​, ಟೆಕ್​ ಮಹೇಂದ್ರ, ಎಚ್​ಸಿಎಲ್​ ಟೆಕ್ನಾಲಜಿ ಸೇರಿದಂತೆ ಇತರೆ ಕಂಪನಿಗಳು ವಹಿವಾಟಿನಲ್ಲಿ ಶೇ.4ರಷ್ಟು ಷೇರು ಮೌಲ್ಯ ಕಳೆದುಕೊಂಡಿವೆ.

ನಿಫ್ಟಿಯಲ್ಲಿ ಮೈಂಡ್​ಟ್ರೀ, ಸೋನಾಟ ಸಾಫ್ಟ್​ವೇರ್​, ಎಂಫೆಸಿಸ್​, ಟ್ರಿಜ್ಯನ್ ಟೆಕ್ನಾಲಜಿಸ್​, ಲಾರ್ಸನ್​ ಆ್ಯಂಡ್​ ಟರ್ಬೋ ಇನ್ಫೋಟೆಕ್, ಹೆಕ್ಸ್​ವೆರ್​ ಟೆಕ್ನಾಲಜಿಸ್​ ಆ್ಯಂಡ್ ಮಾಸ್ಟೆಕ್ ವೇರ್​ಗಳ ಷೇರು ಮೌಲ್ಯ ಶೇ.4 ರಿಂದ ಶೇ.15 ಕುಸಿತಗೊಂಡಿವೆ. ನಿಫ್ಟಿಯ 50 ಸೂಚ್ಯಂಕದಲ್ಲಿ ಶೇ.1.6 ಕುಸಿತಕ್ಕೆ ಹೋಲಿಸಿದರೆ ಶೇ.3 ರಷ್ಟು ಐಟಿ ವಲಯದ ಷೇರುಗಳು ಕ್ಷೀಣಿಸಿವೆ.

ಸದ್ಯ ಟಿಸಿಎಸ್​ ಷೇರು ಮೌಲ್ಯ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಮಟ್ಟದ 1,870 ರೂ. ಕುಸಿದಿದೆ. ಮೈಂಡ್​ ಟ್ರೀ ಷೇರು ಕೂಡ ಶೇ.18 ಕುಸಿದು 801 ರೂ. ಗೆ ಬಂದು ತಲುಪಿದೆ.

ಟ್ರಂಪ್ ಆಡಳಿತದ ವೀಸಾ ನೀತಿಯ ಬದಲಾವಣೆಯು ಅಮೆರಿಕಾದಲ್ಲಿನ ಭಾರತೀಯ ಮೂಲದ ಸಣ್ಣ ಮತ್ತು ಮಧ್ಯಮ ವಲಯದ ಐಟಿ ಕಂಪನಿಗಳ ಕಾರ್ಯಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಕಂಪನಿಗಳಲ್ಲಿ ಬಹುತೇಕರು ಭಾರತೀಯ ಮೂಲದ ಉದ್ಯೋಗಿಗಳು ​ಹೆಚ್​-1ಬಿ ವೀಸಾದಡಿ ವಲಸೆ ಬಂದವರೇ ಆಗಿದ್ದಾರೆ.

Follow Us:
Download App:
  • android
  • ios