Asianet Suvarna News Asianet Suvarna News

Online Shopping ವೇಳೆ ಹಣ ಉಳಿಸ್ಬೇಕೆಂದ್ರೆ ಹೀಗೆ ಮಾಡಿ

ಆನ್ಲೈನ್ ಶಾಪಿಂಗ್ ಮಾಡುವ ವೇಳೆ ಹಣ ಖಾಲಿಯಾಗಿದ್ದೇ ತಿಳಿಯೋದಿಲ್ಲ. ಕಾರ್ಡ್ ಉಜ್ಜೋದ್ರಿಂದ ಕೈನಲ್ಲಿರುವ ಹಣ ಖರ್ಚಾಗಿದ್ದು ಗಮನಕ್ಕೆ ಬರೋದಿಲ್ಲ. ಆನ್ಲೈನ್ ಶಾಪಿಂಗ್ ವೇಳೆ ಬುದ್ಧಿವಂತಿಕೆಯಿಂದ ಕೆಲಸ ಮಾಡೋದು ಮುಖ್ಯ. ಆನ್ಲೈನ್ ಶಾಪಿಂಗ್ ವೇಳೆ ಏನ್ ಮಾಡ್ಬೇಕು ಅನ್ನೋದನ್ನು ನಾವಿಂದು ಹೇಳ್ತೇವೆ. 
 

Trick To Save Money In Online Shopping
Author
First Published Sep 17, 2022, 11:44 AM IST

ಆನ್ಲೈನ್ ಶಾಪಿಂಗ್ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ತುತ್ತತುದಿ ಮುಟ್ಟಿದೆ. ಬಹುತೇಕ ಜನರು ಆನ್ಲೈನ್ ಶಾಪಿಂಗ್ ಇಷ್ಟಪಡ್ತಿದ್ದಾರೆ. ಆನ್ಲೈನ್ ನಲ್ಲಿ ಸೀರೆಯಿಂದ ಹಿಡಿದು ಸಗಣಿವರೆಗೆ ಎಲ್ಲವೂ ಸಿಗ್ತಿದೆ. ಅಂಗಡಿಗೆ ಹೋಗಿ ಬಾರ್ಗಿನ್ ಮಾಡಿ ಸುತ್ತಾಗಿ ಮನೆಗೆ ಬರಬೇಕಾಗಿಲ್ಲ. ಮನೆಯಲ್ಲಿ ಟಿವಿ ನೋಡ್ತಾ ಆರಾಮವಾಗಿ ಶಾಪಿಂಗ್ ಮಾಡ್ಬಹುದು. ಖರೀದಿಸಿದ ವಸ್ತು ಮನೆಗೆ ಬರುತ್ತೆ. ಇನ್ನೇನು ಬೇಕು?. ಕೆಲ ಶಾಪಿಂಗ್ ಸೈಟ್ ಗಳಲ್ಲಿ ಭರ್ಜರಿ ಆಫರ್ ಕೂಡ ಇರುತ್ತೆ. ಹಾಗಾಗಿಯೇ ಜನರು ಆನ್ಲೈನ್ ಶಾಪಿಂಗ್ ಇಷ್ಟಪಡಲು ಶುರು ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಸೈಟ್ ಗಳು ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಜೊತೆಗೆ ಕೆಲ ಆಫರ್ ನೀಡ್ತವೆ. ಇದೇ ಕಾರಣಕ್ಕೆ ಜನರು ಹಬ್ಬದ ಸಂದರ್ಭದಲ್ಲಿ ಎಲ್ಲೆ ಮೀರಿ ಖರೀದಿ ಮಾಡ್ತಾರೆ. ಆನ್ಲೈನ್ ನಲ್ಲಿ ಶಾಪಿಂಗ್ ಮಾಡೋದು ಅನೇಕರಿಗೆ ಹುಚ್ಚು. ಅವಶ್ಯಕತೆ ಇಲ್ಲದ ವಸ್ತುವನ್ನು ಕೂಡ ಖರೀದಿ ಮಾಡೋರಿದ್ದಾರೆ. ಓವನ್ ಗ್ಲೌಸ್ ಖರೀದಿಸಿದ ಮೇಲೆ ಅದನ್ನು ಬಳಸಬೇಕು ಅಂತಾ ಓವನ್ ಖರೀದಿ ಮಾಡೋರನ್ನು ನೀವು ನೋಡಿರಬಹುದು. ಆನ್ಲೈನ್ ಶಾಪಿಂಗ್ ವೇಳೆ ಮನಸ್ಸು ನಿಯಂತ್ರಣದಲ್ಲಿರೋದು ಬಹಳ ಮುಖ್ಯ. ಅದ್ರ ಜೊತೆ ಕೆಲ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ನಾವು ಆನ್ಲೈನ್ ಶಾಪಿಂಗ್ ಸಂದರ್ಭದಲ್ಲಿ ಏನೆಲ್ಲ ಗಮನಿಸಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ಆನ್ಲೈನ್ (Online) ಶಾಪಿಂಗ್ ವೇಳೆ ಇದನ್ನು ಗಮನಿಸಿ :

ನಾಲ್ಕಾರು ಕಡೆ ಸರ್ಚ್ (Search) ಮಾಡಿ : ಒಂದು ಆನ್ಲೈನ್ ಶಾಪಿಂಗ್ ವೆಬ್ ಸೈಟ್ (Web Site) ನಲ್ಲಿ, ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಎಂದು ಜಾಹೀರಾತು ಹಾಕಿರ್ತಾರೆ. ಅದ್ರ ಬೆಲೆ ನಿಮಗೆ ಅಗ್ಗ ಎನ್ನಿಸಿರುತ್ತದೆ. ಆದ್ರೆ ಈಗ ಅನೇಕ ಶಾಪಿಂಗ್ ವೆಬ್ ಸೈಟ್ ಲಭ್ಯವಿದೆ. ಹಾಗಾಗಿ ನೀವು ಅದೇ ವಸ್ತು ಬೇರೆ ವೆಬ್ಸೈಟ್ ನಲ್ಲಿ ಎಷ್ಟು ಬೆಲೆಗೆ ಸಿಗುತ್ತೆ ಎಂಬುದನ್ನು ಸರ್ಚ್ ಮಾಡಿ. ಒಂದ್ವೇಳೆ ಬೇರೆ ವೆಬ್ಸೈಟ್ ನಲ್ಲಿ ಅದೇ ವಸ್ತು ಕಡಿಮೆ ಬೆಲೆಗೆ ಲಭ್ಯವಿದ್ರೆ ನಿಮ್ಮ ಹಣವನ್ನು ನೀವು ಉಳಿಸಬಹುದು.

ಇದನ್ನೂ ಓದಿ: Online Shopping: ದಿನಸಿ ಖರೀದಿಸೋ ಮುನ್ನ ತಿಳ್ಕೊಳ್ಳಿ

ಬೆಲೆ ಬಗ್ಗೆ ಗಮನವಿರಲಿ : ಇಂದು ಆನ್ಲೈನ್ ನಲ್ಲಿ ಒಂದು ವಸ್ತು ಖರೀದಿ ಮಾಡ್ತಿದ್ದೀರಿ ಎಂದಾದ್ರೆ ಹಿಂದೆ ಅದ್ರ ಬೆಲೆ ಎಷ್ಟಿತ್ತು ಎಂಬುದನ್ನು ಪರೀಕ್ಷೆ ಮಾಡುವುದು ಮುಖ್ಯ. ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುತ್ತದೆ. ಆದ್ರೂ ನೀವು ಹಿಂದಿನ ಬೆಲೆ ಪರಿಶೀಲನೆ ಮಾಡ್ಬೇಕು. ಆನ್ಲೈನ್ ಪ್ರೈಸ್ ಹಿಸ್ಟ್ರಿ ಎಂಬ ಒಂದು ವೆಬ್ಸೈಟ್ ಇದೆ. ಅದ್ರಲ್ಲಿ ನಿಮಗೆ ಆ ವಸ್ತುವಿನ ಹಿಂದಿನ ಬೆಲೆ ಲಭ್ಯವಾಗುತ್ತದೆ. ಅದನ್ನು ನೀವು ಪರಿಶೀಲನೆ ಮಾಡ್ಬೇಕು. ಒಂದ್ವೇಳೆ ಹಿಂದಿನ ತಿಂಗಳಿದ್ದ ಬೆಲೆಯೇ ಈಗಲೂ ಮುಂದುವರೆದಿದ್ದರೆ ನೀವು ಆ ವಸ್ತುವನ್ನು ಕಣ್ಮುಚ್ಚಿ ಖರೀದಿ ಮಾಡಿ. ಬೆಲೆ ದುಬಾರಿಯಾಗಿದ್ದರೆ ಖರೀದಿ ಮಾಡಲು ಹೋಗ್ಬೇಡಿ. 

ಖರೀದಿಗೆ ಸಮಯ ಮುಖ್ಯ : ಅಗತ್ಯವಿಲ್ಲದ ವಸ್ತುಗಳನ್ನು ನೀವು ಸಾಮಾನ್ಯ ದಿನಗಳಲ್ಲಿ ಖರೀದಿ ಮಾಡಲು ಹೋಗ್ಬೇಡಿ. ಅದನ್ನು ಹಬ್ಬದ ಋತುವಿನಲ್ಲಿ ಖರೀದಿ ಮಾಡಿ. ಯಾಕೆಂದ್ರೆ ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ವೆಬ್ಸೈಟ್ ಗಳಲ್ಲಿ ಆಫರ್ ಹೆಚ್ಚಿರುತ್ತದೆ. ಕಡಿಮೆ ಬೆಲೆಗೆ ಹೆಚ್ಚಿನ ವಸ್ತುಗಳನ್ನು ನೀವು ಖರೀದಿ ಮಾಡಬಹುದಾಗಿದೆ. 

ಇದನ್ನೂ ಓದಿ: Health Care : ಆನ್ಲೈನ್ ನಲ್ಲಿ ಔಷಧಿ ಖರೀದಿ ವೇಳೆ ನಡೆಯುತ್ತೆ ತಪ್ಪು

ಖರೀದಿಸುವ ವಸ್ತುಗಳ ಪಟ್ಟಿ : ಒಂದೇ ಬಾರಿ ಹೆಚ್ಚು ಖರೀದಿಸುವ ಹಾಗೂ ಅನಗತ್ಯ ವಸ್ತುಗಳನ್ನು ಖರೀದಿಸುವ ಚಟ ನಿಮಗಿದ್ದರೆ ಅದನ್ನು ನಿಯಂತ್ರಿಸಲು ಮುಂದಾಗಿ. ಶಾಪಿಂಗ್ ಶುರು ಮಾಡುವ ಮುನ್ನ ಯಾವ ವಸ್ತು ಅತ್ಯಗತ್ಯ ಎಂಬುದನ್ನು ಪಟ್ಟಿ ಮಾಡಿ. ಎಲ್ಲ ವಸ್ತುಗಳನ್ನು ಸ್ಕ್ರಾಲ್ ಮಾಡುವ ಬದಲು ಬೇಕಾದ ವಸ್ತುವನ್ನು ಮಾತ್ರ ಸರ್ಚ್ ಮಾಡಿ. 

Follow Us:
Download App:
  • android
  • ios