ಭಾರತದ ಚಾಲ್ತಿ ಖಾತೆ ಕೊರತೆ ಏರಿಕೆ! 10 ಕೋಟಿ ಭಾರತೀಯರ ದುಬಾರಿ ವೆಚ್ಚಗಳೇ ಏರಿಕೆಗೆ ಕಾರಣ! ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಸದಸ್ಯ ರತಿನ್ ರಾಯ್! ಕಾರು, ಉನ್ನತ ಶಿಕ್ಷಣ, ವಿಮಾನಯಾನ ವೆಚ್ಚವೇ ಸಿಎಡಿ ಏರಿಕೆಗೆ ಕಾರಣ

ನವದೆಹಲಿ(ಸೆ.24): ಭಾರತದ ಚಾಲ್ತಿ ಖಾತೆ ಕೊರತೆಯು(ಸಿಎಡಿ) ರೂಪಾಯಿ ಮೌಲ್ಯ ಕುಸಿತದ ನಂತರ ಗಣನೀಯ ಏರಿಕೆಯಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಿರುವ ಕೇಂದ್ರ ಸರ್ಕಾರ, ಭಾರತೀಯರ ಐಷಾರಾಮಿ ಜೀವನವೇ ಸಿಎಡಿ ಏರಿಕೆಗೆ ಕಾರಣ ಎಂಬ ವಿಚಿತ್ರ ಕಾರಣ ನೀಡಿದೆ.

10 ಕೋಟಿ ಭಾರತೀಯರ ದುಬಾರಿ ವೆಚ್ಚಗಳೇ ಸಿಎಡಿ ಏರಿಕೆಗೆ ಭಾಗಶಃ ಕಾರಣ ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಹಾಗೂ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಫೈನಾನ್ಸ್‌ ಆಂಡ್‌ ಪಾಲಿಸಿಯ ನಿರ್ದೇಶಕ ರತಿನ್‌ ರಾಯ್‌ ಹೇಳಿದ್ದಾರೆ.

10 ಕೋಟಿ ಜನರು ಕಾರು, ಉನ್ನತ ಶಿಕ್ಷಣ, ವಿಮಾನಯಾನ, ವಿದೇಶ ಪ್ರಯಾಣ ಇತ್ಯಾದಿಗಳಿಗೆ ಮಾಡುವ ವೆಚ್ಚವೇ ಸಿಎಡಿ ಕೊರತೆ ಹೆಚ್ಚಳಕ್ಕೂ ಕಾರಣವಾಗಿದೆ. ಎಂದು ರತಿನ್‌ ರಾಯ್‌ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಮಂತ ಭಾರತೀಯರು ಬಳಸುವ ಸರಕು-ಸೇವೆಗಳು ನಮ್ಮ ದೇಶಕ್ಕೆ ಸಂಬಂಧಿಸಿರುವುದಿಲ್ಲ. ಅಂದರೆ, ಉನ್ನತ ಶಿಕ್ಷಣ, ವಾಯುಯಾನ, ಮನರಂಜನೆಗಾಗಿ ಪ್ರವಾಸಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಇದರಿಂದ ದೇಶದ ಸಿಎಡಿ ಕುಸಿಯುತ್ತದೆ ಎಂದು ರಾಯ್ ವಿಶ್ಲೇಷಿಸಿದ್ದಾರೆ.