ಕಳೆದ ಕೆಲವು ತಿಂಗಳುಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರಕ್ಕೆ ಬಜೆಟ್ ಮತ್ತಷ್ಟು ಬಲ ನೀಡಿತ್ತು. 55 ಸಾವಿರದ ಗಡಿಗೆ ಮುಟ್ಟಿದ್ದ ಚಿನ್ನದ ದರದಲ್ಲಿ ಕೆಲ ದಿನಗಳಿಂದ ಕೊಂಚ ಇಳಿಕೆಯಾಗುತ್ತಿದೆ. ಶನಿವಾರದ ಚಿನ್ನದ ರದ ಏಕಾಏಕಿ ಕುಸಿದಿದ್ದು ಗ್ರಾಹಕರಿಗೆ ನೆಮ್ಮದಿ ನೀಡಿದೆ. 

ಬೆಂಗಳೂರು (ಫೆ.4): ಚಿನ್ನದ ದರ 40ರ ಆಸುಪಾಸಿನಲ್ಲಿದ್ದಾಗಲೇ ಇದೇನಪ್ಪಾ ಇಷ್ಟು ರೇಟ್‌ ಎನ್ನುತ್ತಿದ್ದ ಜನ ಇತ್ತೀಚೆಗೆ ಚಿನ್ನವೆಂದರೆ ಮಾರು ದೂರ ಹೋಗುತ್ತಿದ್ದಾರೆ. ಅದಕ್ಕೆ ಕಾರಣ, ಚಿನ್ನದ ದರ 55 ಸಾವಿರದ ಗಡಿ ದಾಟಿದ್ದು. ಚಿನ್ನ ಖರೀದಿ ಮಾಡೋದಕ್ಕಿಂತ ಚಿನ್ನದ ದರ ನೋಡಿಕೊಂಡೇ ಇರೋಣ ಎನ್ನುತ್ತಿದ್ದ ಜನರಿಗೆ ಸಮಾಧಾನವಾಗುವಂತ ಸುದ್ದಿ ಇಲ್ಲಿದೆ. ಶನಿವಾರ ಚಿನ್ನದ ದರದಲ್ಲಿ ಏಕಾಏಕಿ ಕುಸಿತ ಕಂಡಿರುವ ಕಾರಣ, ಗ್ರಾಹಕರು ಹರ್ಷ ವ್ಯಕ್ತಪಡಿಸಿದ್ದಾರೆ. ಫೆ.1 ರಂದು ಬಜೆಟ್ ಮಂಡನೆಯಾದ ಬಳಿಕ ಸಾರ್ವಕಾಲಿಕ ದಾಖಲೆಯ ಗಡಿ ಮುಟ್ಟಿದ್ದ ಚಿನ್ನದ ದರವೀಗ ನಿಧಾನವಾಗಿ ಇಳಿಕೆ ಕಾಣುತ್ತಿದೆ. ಸತತ 2ನೇ ದಿನ ಚಿನ್ನದ ದರದಲ್ಲಿ ಕುಸಿತ ಕಂಡಿರುವದು ಹಳದಿ ಲೋಹ ಪ್ರಿಯ ಗ್ರಾಹಕರಿಗೆ ಖುಷಿ ತಂದಂತಾಗಿದೆ.

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ
ಒಂದು ಗ್ರಾಂ ಚಿನ್ನ (1GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,315
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5365

ಎಂಟು ಗ್ರಾಂ ಚಿನ್ನ (8GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 42,520
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,920

ಹತ್ತು ಗ್ರಾಂ ಚಿನ್ನ (10GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 53,150
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 53,650

ನೂರು ಗ್ರಾಂ ಚಿನ್ನ (100GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,31,500
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,36,500

ದೇಶದ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 53,150 ಆಗಿದ್ದರೆ ಚೆನ್ನೈ 53,350 ಮುಂಬೈ 52,400 ಹಾಗೂ ಕೋಲ್ಕತ್ತಾದಲ್ಲಿ 52,400 ಹಾಗೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,550 ರೂ. ಆಗಿದೆ. 

ಬಜೆಟ್ ಬಳಿಕ ಮುಟ್ಟಲಾಗದು ಬಂಗಾರ ... ಚಿನ್ನದ ದರದಲ್ಲಿ ಭಾರಿ ಏರಿಕೆ

ಇಂದಿನ ಬೆಳ್ಳಿ ದರ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.

ಸರ್ಕಾರಿ ಶಾಲೆಗೆ ಸೇರುವ ಮಕ್ಕಳಿಗೆ ಚಿನ್ನದ ನಾಣ್ಯ, 5 ಸಾವಿರ ರೂ!

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್: ಹಾಗೆಯೇ ಬೆಂಗಳೂರಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 742, ರೂ. 7,420 ಹಾಗೂ ರೂ. 74,200 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,200 ಆಗಿದ್ದರೆ, ಮುಂಬೈನಲ್ಲಿ ರೂ. 71,200 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 71,200 ಗಳಾಗಿದೆ. ಅಲ್ಲದೆ, ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸಹ ಇಂದಿನ ಬೆಳ್ಳಿ ದರ ರೂ. 71,200 ಆಗಿದೆ.