Asianet Suvarna News Asianet Suvarna News

2 ಸಮಸ್ಯೆಗಳಿಗೆ 2 ಸಮಿತಿ: ಇದು ಮೋದಿ ಕಾರ್ಯವೈಖರಿ ರೀತಿ!

ದೇಶವನ್ನು ಕಾಡುತ್ತಿರುವ 2 ಬೃಹತ್ ಸಮಸ್ಯೆಗಳು| ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಮೋದಿ ಉಪಾಯ| ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಗೆ ಮೋದಿ ನೇತೃತ್ವದಲ್ಲಿ 2 ಸಮಿತಿ| ಉನ್ನತ ಮಟ್ಟದ ಸಚಿವರ ಸಮಿತಿ ರಚಿಸಿದ ಪ್ರಧಾನಿ ಮೋದಿ| ಮೋದಿ ರಚಿಸಿದ ಸಮಿತಿಯಲ್ಲಿ ಘಟಾನುಘಟಿ ನಾಯಕರು| ಕೇಂದ್ರ ಬಜೆಟ್‌ಗೂ ಮುನ್ನ ಸಮಿತಿಯಿಂದ ವರದಿ ಸಲ್ಲಿಕೆ|  

To Tackle Economic Growth and Jobs PM Modi Forms 2 High-Powered Ministerial Panels
Author
Bengaluru, First Published Jun 5, 2019, 6:08 PM IST

ನವದೆಹಲಿ(ಜೂ.05): ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ತೀವ್ರ ಚಟುವಟಿಕೆ ಆರಂಭಿಸಿರುವ ನರೇಂದ್ರ ಮೋದಿ, ದೇಶವನ್ನು ಕಾಡುತ್ತಿರುವ ಎರಡು ಪ್ರಮುಖ ಸಮಸ್ಯೆಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಯತ್ತ ಪ್ರಧಾನಿ ಮೋದಿ ತಮ್ಮ ಗಮನ ಕೇಂದ್ರೀಕರಿಸಿದ್ದು, ಈ ಎರಡು ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಉನ್ನತ ಮಟ್ಟದ ಸಚಿವರ ಸಮಿತಿ ರಚಿಸಿದ್ದಾರೆ.

ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಎರಡಕ್ಕೂ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ಈ ಸಮಿತಿಗಳಿಗೆ ಖುದ್ದು ಪ್ರಧಾನಿ ಮೋದಿ ಅವರೇ ಮುಖ್ಯಸ್ಥರಾಗಿದ್ದಾರೆ.

ಕ್ಷಿಪ್ರಗತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ತ್ವರಿತ ಆರ್ಥಿಕ ಬೆಳವಣಿಗೆ ದಾಖಲಿಸುವುದು ಈ ಎರಡೂ ಸಮಿತಿಗಳ ಜವಾಬ್ದಾರಿಯಾಗಿದೆ.

ಇನ್ನು ಪ್ರಧಾನಿ ಮೋದಿ ನೇತೃತ್ವದ ಉನ್ನತ  ಮಟ್ಟಿದ ಸಚಿವರ ಸಮಿತಿಯತ್ತ ಗಮನಹರಿಸುವುದಾದರೆ...

ಆರ್ಥಿಕ ಬೆಳವಣಿಗೆ ಸಮಿತಿ:
ನರೇಂದ್ರ ಮೋದಿ
ಅಮಿತ್ ಶಾ
ನಿರ್ಮಲಾ ಸೀತಾರಾಮನ್
ನಿತಿನ್ ಗಡ್ಕರಿ
ಪಿಯೂಷ್ ಗೋಯಲ್

ಉದ್ಯೋಗಾವಕಾಶ ಸೃಷ್ಟಿ ಸಮಿತಿ:
ನರೇಂದ್ರ ಮೋದಿ
ಅಮಿತ್ ಶಾ
ನಿರ್ಮಾಲಾ ಸೀತಾರಾಮನ್
ಪಿಯೂಷ್ ಗೋಯಲ್
ನರೇಂದ್ರ ಸಿಂಗ್ ಥೋಮರ್
ರಮೇಶ್ ಪೋಕ್ರಿಯಾಲ್ ನಿಶಾಂಕ್
ಧರ್ಮೇಂದ್ರ ಪ್ರಧಾನ್
ಮಹೇಂದ್ರನಾಥ್ ಪಾಂಡೆ
ಸಂತೋಷ್ ಕುಮಾರ್ ಗಂಗ್ವಾರ್
ಹರ್ದಿಪ್ ಸಿಂಗ್ ಪುರಿ

ಮುಂಬರುವ ಜುಲೈ 5 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಎರಡೂ ಸಮಿತಿಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡಲಿವೆ ಎಂದು ಹೇಳಲಾಗಿದೆ.

Follow Us:
Download App:
  • android
  • ios