ಆಸ್ತಿ ಖರೀದಿ ಚಾಕೋಲೇಟ್ ಖರೀದಿ ಮಾಡಿದ ಹಾಗಲ್ಲ. ಒಮ್ಮೆ ಕೊಟ್ಟ ಹಣ ಮತ್ತೆ ಬರೋದಿಲ್ಲ. ಹಾಗಾಗಿ ಯಾವುದೇ ಆಸ್ತಿ ಖರೀದಿಸುವ ಮೊದಲು ಪೂರ್ವಾಪರ ಆಲೋಚನೆ ಮಾಡ್ಬೇಕು. ಕಾನೂನಿನ ಬಗ್ಗೆ ಸರಿಯಾಗಿ ತಿಳಿದಿರಬೇಕು. 

ತಲೆ ಮೇಲೋಂದು ಸೂರು ಬೇಕು. ಮನೆ ಸ್ವಂತದ್ದಾಗಿರಬೇಕು. ಇದೇ ಉದ್ದೇಶದಿಂದ ಜನರು ಹಗಲಿರುಳು ದುಡಿಯುತ್ತಾರೆ. ಹೊಟ್ಟೆ,ಬಟ್ಟೆ ಕಟ್ಟಿ ಕೂಡಿಟ್ಟ ಹಣದಲ್ಲಿ ಮನೆ ಖರೀದಿ ಅಥವಾ ಆಸ್ತಿ ಖರೀದಿಗೆ ಮುಂದಾಗ್ತಾರೆ. ಆಸ್ತಿ ಖರೀದಿ ವೇಳೆ ದಾಖಲೆಗಳನ್ನು ಕೆಲವರು ಸರಿಯಾಗಿ ಪರಿಶೀಲನೆ ನಡೆಸುವುದಿಲ್ಲ. ಮತ್ತೆ ಕೆಲವರು ಹಣ ಉಳಿಸುವ ಉದ್ದೇಶದಿಂದ ಕಾನೂನಿಗೆ ವಿರುದ್ಧವಾಗಿ ನಡೆಯುತ್ತಾರೆ. ಈ ಮಾರ್ಗಗಳಲ್ಲಿ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೂಡಿಟ್ಟ ಹಣ ಸುರಿದು ಆಸ್ತಿ ಖರೀದಿ ಮಾಡಿದ್ರೂ ಅದ್ರ ಸಂಪೂರ್ಣ ಹಕ್ಕು ಇವರಿಗೆ ಸಿಗೋದಿಲ್ಲ. ಇತ್ತೀಚಿನ ದಿನಗಳಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಮೋಸಗಳು ನಡೆಯುತ್ತವೆ. ಯಾವುದೇ ಮನೆ ಇರಲಿ ಇಲ್ಲ ಆಸ್ತಿ ಇರಲಿ ಅದನ್ನು ಖರೀದಿ ಮಾಡುವ ಮುನ್ನ ಕೆಲ ವಿಷ್ಯಗಳನ್ನು ಅಗತ್ಯವಾಗಿ ಅರಿತಿರಬೇಕಾಗುತ್ತದೆ. ನಾವಿಂದು ಮನೆ ಖರೀದಿ ವೇಳೆ ನೀವು ಏನೆಲ್ಲ ವಿಷ್ಯ ಗಮನಿಸಬೇಕು ಎಂಬುದನ್ನು ಹೇಳ್ತೆವೆ.

ಹಣ (Money) ಉಳಿಸಲು ಹೋಗಿ ಕೈಸುಟ್ಟು ಕೊಳ್ಳಬೇಡಿ : ಆಸ್ತಿ (Property) ಖರೀದಿಸಿದ ನಂತ್ರ ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡ್ಬೇಕು ಎಂಬ ಸಂಗತಿ ನಿಮಗೆ ತಿಳಿದಿರಬೇಕು. ಆಸ್ತಿ ಖರೀದಿಸಿದ್ರೆ ಸರ್ಕಾರಕ್ಕೆ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸ್ಟ್ಯಾಂಪ್ (Stamp) ಸುಂಕವನ್ನು ಪಾವತಿಸಿದ ನಂತರವೇ ನಿಮ್ಮ ಆಸ್ತಿಯನ್ನು ನೋಂದಾಯಿಸಲಾಗುತ್ತದೆ. ಆದರೆ ಇದರ ಹಣ ಉಳಿಸಲು ಕೆಲವರು ಮುಂದಾಗ್ತಾರೆ. ಹಣ ದುರಾಸೆಗೆ ಬಿದ್ದ ಜನರು ಮುದ್ರಾಂಕ ಶುಲ್ಕವನ್ನು ಪಾವತಿಸುವುದಿಲ್ಲ. ಇದರಿಂದಾಗಿ ಅವರ ಆಸ್ತಿ ನೋಂದಣಿ (Registration) ಆಗೋದಿಲ್ಲ. ಇದ್ರಿಂದ ಸಮಸ್ಯೆ ದೊಡ್ಡದಾಗುತ್ತದೆ.

ಫುಲ್ ಪೇಮೆಂಟ್ ಅಗ್ರಿಮೆಂಟ್ (Payment Agreement) : ಮೊದಲೇ ಹೇಳಿದಂತೆ ಹಣ ಉಳಿಸಲು ಕೆಲವರು ಮುದ್ರಾಂಕ ಶುಲ್ಕವನ್ನು ಪಾವತಿಸುವುದಿಲ್ಲ. ಅದ್ರ ಬದಲು ಫುಲ್ ಪೇಮೆಂಟ್ ಅಗ್ರಿಮೆಂಟ್ ಗೆ ಒಪ್ಪಿಕೊಳ್ತಾರೆ. ಇದು ಕಾನೂನಿನ ದೃಷ್ಟಿಕೋನದಿಂದ ನೋಡಿದರೆ ತಪ್ಪು. ಫುಲ್ ಪೇಮೆಂಟ್ ಅಗ್ರಿಮೆಂಟ್ ಒಪ್ಪಂದದ ಬಗ್ಗೆ ತಿಳಿದುಕೊಳ್ಳಬೇಕಾದ ಮೊದಲ ವಿಷಯವೆಂದರೆ, ಇದು ಯಾವುದೇ ಆಸ್ತಿಯ ಕಾನೂನು ಮಾಲೀಕತ್ವವನ್ನು ನಿಮಗೆ ನೀಡೋದಿಲ್ಲ. ಹಾಗಾಗಿ ನೀವು ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಫುಲ್ ಪೇಮೆಂಟ್ ಅಗ್ರಿಮೆಂಟ್ ನಿಶ್ಚಿತ ಸಮಯಕ್ಕೆ ಮೀಸಲು. ಆಸ್ತಿಯ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಿದ ನಂತ್ರ ಈ ಅಗ್ರಿಮೆಂಟ್ ಮಾಡಲಾಗುತ್ತದೆ. ಈ ಅಗ್ರಿಮೆಂಟ್ ಇಟ್ಟುಕೊಂಡು ನೀವು ಆಸ್ತಿ ಮೇಲೆ ಹಕ್ಕು ಸಾಧಿಸಲು ಆಗುವುದಿಲ್ಲ. ನಿಮಗೆ ಆಸ್ತಿ ಮೇಲೆ ಹಕ್ಕು ಬೇಕೆಂದ್ರೆ ನೀವು ನೋಂದಣಿ ಮಾಡಬೇಕು. ನೋಂದಣಿ ಹಣ ಉಳಿಸಲು ಹೋದ್ರೆ ಆಸ್ತಿ ಕೈತಪ್ಪುತ್ತದೆ. 

ದೀಪಾವಳಿಗೆ ಏನಾದ್ರೂ ಖರೀದಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ನೋ ಕಾಸ್ಟ್ ಇಎಂಐ ಬಗ್ಗೆ ನಿಮ್ಗೆ ತಿಳಿದಿರಲಿ

ಮಾರಾಟಗಾರದಿಂದ ನಡೆಯುತ್ತೆ ಮೋಸ : ನೀವು ಆಸ್ತಿಯನ್ನು ನೋಂದಣಿ ಮಾಡದೆ ಬರೀ ಫುಲ್ ಪೇಮೆಂಟ್ ಅಗ್ರಿಮೆಂಟ್ ಮಾಡಿಸಿಕೊಂಡರೆ ಆಸ್ತಿ ಮಾರಾಟಗಾರನಿಗೆ ಮೋಸ ಮಾಡುವುದು ಸುಲಭವಾಗುತ್ತದೆ. ಆತ ಆಸ್ತಿಯನ್ನು ವಾಪಸ್ ಕೇಳುವ ಸಾಧ್ಯತೆಯಿರುತ್ತದೆ. ಹಾಗಾಗಿ ಸ್ವಲ್ಪ ಹಣ ಉಳಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಬೇಡಿ. ಎಂದಿಗೂ ಫುಲ್ ಪೇಮೆಂಟ್ ಅಗ್ರಿಮೆಂಟ್ ಗೆ ಮುಂದಾಗಬೇಡಿ. ಕಾನೂನಿನ ಪ್ರಕಾರ, ಆಸ್ತಿಯನ್ನು ಖರೀದಿಸಿದ ನಂತರ, ಅದರ ಬದಲಾಗಿ ಸ್ಟಾಂಪ್ ಸುಂಕದ ಮೊತ್ತವನ್ನು ಪಾವತಿಸಿ ಅದನ್ನು ನೋಂದಾಯಿಸಬೇಕು. ಇದರಿಂದಾಗಿ ನಿಮ್ಮ ಆಸ್ತಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಅಷ್ಟೇ ಅಲ್ಲ, ರಿಜಿಸ್ಟ್ರಿ ಮಾಡಿದ ನಂತರ ಆ ಆಸ್ತಿಯ ಫೈಲಿಂಗ್ ಅನ್ನು ತಿರಸ್ಕರಿಸುವುದು ಸಹ ಬಹಳ ಮುಖ್ಯ. 

Personal Finance : ಸ್ವಂತ ಉದ್ಯೋಗ ಬಯಸುವ ಬಡವರಿಗೆ ಇಲ್ಲಿ ಸಿಗ್ತಿದೆ ನೆರವು

ನೀವು ಆಸ್ತಿ ಖರೀದಿ ಮಾಡುವ ಮುನ್ನ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಅನೇಕ ಬಾರಿ ಒಂದು ಸಹಿಯಲ್ಲಿ ನೀವು ಮೋಸ ಹೋಗುವ ಸಾಧ್ಯತೆಯಿರುತ್ತದೆ.