Banks Interest: ಈ ಬ್ಯಾಂಕ್ ನೀಡುತ್ತೆ ಕಡಿಮೆ ಬಡ್ಡಿಗೆ ಕಾರ್ ಲೋನ್
ಕಾರ್ ಖರೀದಿ ಮಾಡೋದು ಈಗಿನ ದಿನಗಳಲ್ಲಿ ದೊಡ್ಡ ವಿಷ್ಯವಲ್ಲ. ಒಬ್ಬರ ಮನೆಯಲ್ಲಿ ಒಂದೆರಡು ಕಾರ್ ಇರೋದು ಮಾಮೂಲಿಯಾಗಿದೆ. ಆದ್ರೆ ಅನೇಕರು ಸಾಲ ಮಾಡಿಯೇ ಕಾರ್ ಖರೀದಿ ಮಾಡಿರ್ತಾರೆ. ಸಾಲದ ಬಡ್ಡಿ ತೀರಿಸಿಯೇ ಅರ್ಧ ಜೀವನ ಕಳೆದಿರುತ್ತದೆ. ನಿಮಗೂ ಹೀಗಾಗಬಾರದು ಅಂದ್ರೆ ಕಡಿಮೆ ಬಡ್ಡಿದರವಿರುವ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.
ಕಾರು ಖರೀದಿ ಮಾಡ್ಬೇಕು ಎಂಬುದು ಅನೇಕರ ಕನಸು. ಸ್ವಂತ ಕಾರೊಂದಿದ್ರೆ ಓಡಾಟದ ಕೆಲಸ ಸುಲಭವಾಗುತ್ತದೆ. ಸಾರ್ವಜನಿಕ ಸಾರಿಗೆಗೆ ಗಂಟೆಗಟ್ಟಲೆ ಕಾಯಬೇಕಾಗಿಲ್ಲ, ಬೇಕಾದ್ದಲ್ಲಿ ಹೋಗಿ ಬರಬಹುದು. ದ್ವಿಚಕ್ರ ವಾಹನಕ್ಕೆ ಹೋಲಿಸಿದ್ರೆ ಕಾರ್ ಸೇಪ್. ಕಾರ್, ಐಷಾರಾಮಿ ಕೂಡ ಹೌದು. ಹೀಗೆ ನಾನಾ ಕಾರಣಕ್ಕೆ ಜನರು ಕಾರು ಖರೀದಿ ಮಾಡ್ತಾರೆ. ಎಲ್ಲರ ಬಳಿ ಕ್ಯಾಶ್ ನೀಡಿ ಕಾರು ಖರೀದಿ ಸಾಧ್ಯವಿಲ್ಲ. ಬಹುತೇಕರು ಸಾಲ ಮಾಡಿ ಕಾರು ಖರೀದಿ ಮಾಡ್ತಾರೆ. ನೀವು ಸಾಲ ಮಾಡಿ ಕಾರು ಕೊಳ್ಳುವ ಪ್ಲಾನ್ ನಲ್ಲಿದ್ದರೆ ಆತುರಪಡಬೇಡಿ. ಮೊದಲು ಕಾರಿನ ಲೋನ್ ಬಗ್ಗೆ ಸರಿಯಾಗಿ ಮಾಹಿತಿ ಪಡೆಯಿರಿ.
ಕಾರ (Car) ನ್ನು ಸಾಲ (Loan) ದಲ್ಲಿ ಪಡೆಯೋದು ಸುಲಭ. ಈಗ ಎಲ್ಲ ಬ್ಯಾಂಕ್ (Bank) ಗಳು ಹಾಗೂ ಹಣಕಾಸು ಸಂಸ್ಥೆಗಳು ಫಟಾಫಟ್ ಅಂತ ವಾಹನ ಲೋನ್ ನೀಡುತ್ತವೆ. ಆದ್ರೆ ಬಡ್ಡಿ ಮಾತ್ರ ವಿಪರೀತ ಬೀಳುತ್ತೆ. ಬಂದ ಸಂಬಳವೆಲ್ಲ ಇಎಂಐ (EMI) ಕಟ್ಟಿ ಖಾಲಿಯಾಗುತ್ತೆ. ಇದು ಆಗ್ಬಾರದು, ಕಡಿಮೆ ಬಡ್ಡಿಗೆ ಕಾರ್ ಸಿಗ್ಬೇಕೆಂದ್ರೆ ಯಾವ ಬ್ಯಾಂಕ್ ಎಷ್ಟು ಬಡ್ಡಿಗೆ ಸಾಲ ನೀಡುತ್ತದೆ ಎಂಬುದನ್ನು ಪರೀಕ್ಷಿಸಬೇಕು. ಹಾಗೆಯೇ ಸಾಲದ ನಿಯಮಗಳನ್ನು ನೀವು ಅರಿತ ನಂತ್ರ ಸಾಲ ಪಡೆಯಲು ಮುಂದಾಗಬೇಕು.
PAN Aadhaar Link:ಕೇವಲ 3 ದಿನಗಳಷ್ಟೇ ಬಾಕಿ,ಆಧಾರ್-ಪ್ಯಾನ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಕಾರ್ ಸಾಲಕ್ಕೆ ಯಾವ ಬ್ಯಾಂಕ್ ಬೆಸ್ಟ್? :
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ : ಕಾರ್ ಖರೀದಿಗೆ ಸಾಲ ಮಾಡುವವರಿದ್ದರೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಬೆಸ್ಟ್. ಈ ಬ್ಯಾಂಕ್ ಐದು ವರ್ಷಗಳ ಅವಧಿಗೆ ಸಾಲ ನೀಡುತ್ತದೆ. ಈ ಬ್ಯಾಂಕ್ ನಿಮಗೆ 7 ಲಕ್ಷದವರೆಗೆ ಸಾಲ ನೀಡುತ್ತದೆ. ಸ್ಯಾಲರಿ ಕ್ಲಾಸ್ ನವರಿಗೆ ಶೇಕಡಾ 0.20ರಷ್ಟು ಹೆಚ್ಚುವರಿ ರಿಯಾಯಿತಿ ಕೂಡ ಸಿಗುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇಕಡಾ 6.65ರ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ.
ಸೆಂಟ್ರಲ್ ಬ್ಯಾಂಕ್ : ಸೆಂಟ್ರಲ್ ಬ್ಯಾಂಕ್‌ನಿಂದ ಕೂಡ ನೀವು ಸುಲಭವಾಗಿ ಕಾರಿನ ಸಾಲ ಪಡೆಯಬಹುದು. ಸೆಂಟ್ರಲ್ ಬ್ಯಾಂಕ್ ನಂಬಿಕಸ್ತ ಬ್ಯಾಂಕ್ ನಲ್ಲಿ ಒಂದು. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಸೆಂಟ್ರಲ್ ಬ್ಯಾಂಕ್‌ನಲ್ಲಿ ಕಾರ್ ಲೋನ್ ಗೆ ಅರ್ಜಿ ಸಲ್ಲಿಸಿದರೆ ಆರಂಭಿಕ ಬಡ್ಡಿ ದರ ಶೇಕಡಾ 7.25ರಷ್ಟಿರುತ್ತದೆ.
Bank Holidays:ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ ನೋಡಿ
ಹೆಚ್ ಡಿಎಫ್ ಸಿ ಬ್ಯಾಂಕ್ : ಭಾರತದಲ್ಲಿ ಉತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆ ಹೆಚ್ ಡಿಎಫ್ ಸಿ ಬ್ಯಾಂಕ್ ಪಾತ್ರವಾಗಿದೆ. ಗ್ರಾಹಕರ ನಂಬಿಕೆಯನ್ನು ಇದು ಉಳಿಸಿಕೊಂಡಿದೆ. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಶೇಕಡಾ 7.95ರ ಬಡ್ಡಿ ದರದಲ್ಲಿ ಕಾರಿನ ಸಾಲವನ್ನು ನೀಡುತ್ತದೆ. ನೀವು ಹೊಸ ಕಾರಿಗೆ ಈ ಬ್ಯಾಂಕ್‌ನಿಂದ ಸಾಲವನ್ನು ತೆಗೆದುಕೊಂಡರೆ, ಪ್ರತಿ ತಿಂಗಳು ಸುಮಾರು 15,561 ರೂಪಾಯಿ ಇಎಂಐ ಪಾವತಿಸಬೇಕಾಗುತ್ತದೆ.
ಬ್ಯಾಂಕ್ ಆಫ್ ಇಂಡಿಯಾ : ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶೇಕಡಾ 8.25ರ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ. ಬ್ಯಾಂಕ್ 10 ಲಕ್ಷದವರೆಗೆ ಕಾರು ಸಾಲವನ್ನು ನೀಡುತ್ತಿದೆ. ನೀವು 84 ತಿಂಗಳ ಕಾಲ ಪ್ರತಿ ತಿಂಗಳು 15,711 ರೂಪಾಯಿವರೆಗೆ ಇಎಂಐ ಪಾವತಿ ಮಾಡಬೇಕಾಗುತ್ತದೆ.
ಆಕ್ಸಿಸ್ ಬ್ಯಾಂಕ್ : ಆಕ್ಸಿಸ್ ಬ್ಯಾಂಕ್ ಹೊಸ ಕಾರು ಖರೀದಿಸಲು ಸಾಲ ಸೌಲಭ್ಯ ನೀಡುತ್ತದೆ. ಕನಿಷ್ಠ ಒಂದು ಲಕ್ಷ ರೂಪಾಯಿಯಿಂದ ಸಾಲ ಲಭ್ಯವಿದೆ. ಶೇಕಡಾ 100ರವರೆಗಿನ ಆನ್-ರೋಡ್ ಮೌಲ್ಯವನ್ನು ಮತ್ತು ಇತರ ಪ್ರಯೋಜನವನ್ನು ಇದು ನೀಡುತ್ತದೆ. ಸಾಲದ ಮೇಲಿನ ಬಡ್ಡಿ ಇಲ್ಲಿ ಶೇಕಡಾ 7.99ರಿಂದ ಶುರುವಾಗುತ್ತದೆ.