ಮುಂದಿನ ವಾರ ಈ 5 ಸ್ಟಾಕ್‌ಗಳು ನೀಡಲಿವೆ  ಬಂಪರ್ ರಿಟರ್ನ್ಸ್? ಮರೆಯದೇ ನಿಮ್ಮ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಿ!

ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದ ನಡುವೆ, ತಜ್ಞರು ಸೋಮವಾರ ಲಾಭ ಗಳಿಸಬಹುದಾದ 5 ಸ್ಟಾಕ್‌ಗಳನ್ನು ಶಿಫಾರಸು ಮಾಡಿದ್ದಾರೆ. ಆ ಐದು ಷೇರುಗಳು ಯಾವವು ಎಂಬುವುದು ಈ ಲೇಖನದಲ್ಲಿದೆ.

These 5 stocks will give bumper returns Don t forget to add them to your portfolio mrq

ಮುಂಬೈ: ಈ ವಾರ ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಸತತ ಐದು ದಿನಗಳಿಂದ ಸೆನ್ಸಕ್ಸ್ ಮತ್ತು ನಿಫ್ಟಿಯಲ್ಲಿಯೂ ಕುಸಿತವಾಗಿತ್ತು. ಸೆನ್ಸಕ್ಸ್ 663 ಅಂಕ ಕುಸಿತದೊಂದಿಗೆ 79,402 ಅಂಕಗಳೊಂದಿಗೆ ಅಂತ್ಯವಾಗಿದೆ. ಇತ್ತ ನಿಫ್ಟಿ ಸಹ ಭಾರೀ 219 ಅಂಕಗಳ ಕುಸಿತದೊಂದಿಗೆ ಶುಕ್ರವಾರ 24,181ರೊಂದಿಗೆ ಮುಕ್ತಾಯಗೊಂಡಿದೆ. ಇನ್ನು ನಿಫ್ಟಿ ಬ್ಯಾಂಕ್ ಸಹ 744 ಅಂಕಗಳ ಕುಸಿತ ಕಂಡು 50,787 ಲೆವೆಲ್‌ನಲ್ಲಿ ಕ್ಲೋಸ್ ಆಗಿದೆ. ಸನ್ಸಕ್‌ 30ರಲ್ಲಿ 20, ನಿಫ್ಟಿ ಬ್ಯಾಂಕ್ 12ರಲ್ಲಿ 9 ಷೇರುಗಳಲ್ಲಿ ಕುಸಿತವಾಗಿರೋದು ಶುಕ್ರವಾರ ಕಂಡು ಬಂದಿದೆ. 

ಷೇರು ಮಾರುಕಟ್ಟೆ ಕುಸಿತ ಕಂಡು ಬರುತ್ತಿರುವ ಸಂದರ್ಭದಲ್ಲಿ ತಜ್ಞರು ಹೂಡಿಕೆದಾರರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಇಂದು ಖರೀದಿಸಿ, ನಾಳೆ ಮಾರಾಟ ಮಾಡಬಹುದಾದ ಹೂಡಿಕೆದಾರರಿಗೆ ಸೋಮವಾರ ಲಾಭಗಳಿಸಬಹುದಾದ ಎನ್ನಲಾದ ಐದು ಷೇರುಗಳ ಮಾಹಿತಿಯನ್ನು ನೀಡಿದ್ದಾರೆ. ಈ ಐದು ಸ್ಟಾಕ್‌ಗಳು ಸೋಮವಾರ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ತೋರುವ ಸಾಧ್ಯತೆಗಳಿವೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹಾಗಾದ್ರೆ ಆ ಐದು ಷೇರುಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

1.Lupin
ಮಾರುಕಟ್ಟೆ ತಜ್ಞರಾದ ಜಿತಿನ್ ಗೊಡಿಯಾ ಎಂಬವರು, ಸೋಮವಾರ ಲುಪಿನ್ (Lupin) ಷೇರು ಖರೀದಿಗೆ ಸಲಹೆ ನೀಡಿದ್ದಾರೆ. ಲುಪಿನ್ ಷೇರುಗಳನ್ನು 2,159 ರೂಪಾಯಿ ಲೆವಲ್ ನಲ್ಲಿ ಖರೀದಿಸಿ ಮತ್ತು 2,138 ರೂ.ವರೆಗೆ ಸ್ಟಾಪ್‌ಲಾಸ್‌ ವರೆಗೂ ಇರಿಸಿಕೊಳ್ಳಬೇಕು. ಲುಪಿನ್ ಷೇರುಗಳು 2,175 ರೂ.ವರೆಗೆ ಟಾರ್ಗೆಟ್ ಸೆಟ್ ಮಾಡಬಹುದು ಅಂದಾಜಿಸಲಾಗಿದೆ.

2.Bandhan Bank
ಮಾರುಕಟ್ಟೆ ತಜ್ಞೆ ಮಾನಸಾ ಜೈಸ್ವಾಲ್, ಸೋಮವಾರ ಬಂಧನ್ ಬ್ಯಾಂಕ್ ಷೇರುಗಳನ್ನು ಮಾರಾಟ ಮಾಡಲು ಸಲಹೆ ನೀಡಿದ್ದಾರೆ. ಈ ಷೇರುಗಳನ್ನು 168 ರೂ. ಲೆವೆಲ್‌ನಲ್ಲಿ ಮಾರಾಟ ಮಾಡಬಹುದು, ಇವುಗಳ ಟಾರ್ಗೆಟ್ 160 ರೂ.ವರೆಗೆ ಆಗಲಿದೆ. 172 ರೂ.ವರೆಗೆ ಸ್ಟಾಪ್‌ಲಾಸ್ ವರೆಗೆ ಷೇರುಗಳನ್ನು ಹೋಲ್ಡ್ ಮಾಡಿಕೊಳ್ಳುವಂತೆ ಮಾನಸಾ ಜೈಸ್ವಾಲ್ ಸಲಹೆ ನೀಡುತ್ತಾರೆ.

3.Ramco Cements
ಸೋನಿ ಪಟ್ನಾಯಕ್ ಅವರ ಪ್ರಕಾರ, ಸೋಮವಾರ Ramco Cements ಕಂಪನಿಯ ಸ್ಟಾಕ್ ಖರೀದಿಸಲು ಸಲಹೆ ನೀಡಿದ್ದಾರೆ. 853 ರೂ. ಬೆಲೆಯಲ್ಲಿ ಈ ಷೇರುಗಳನ್ನು ಖರೀದಿಸಬಹುದು. ಸ್ಟಾಪ್ ಲಾಸ್ 840 ರೂಪಾಯಿ ಆಗಿದ್ದು, ಟಾರ್ಗೆಟ್ 870-875 ರೂ. ಆಗಿದೆ. 

ಇದನ್ನೂ ಓದಿ: ಇವರು ನೇಪಾಳದ ಒಬ್ಬರೇ ಬಿಲಿಯೇನರ್, ಭಾರತದ ಕಿರಾಣಿ ಸ್ಟೋರ್‌ನಲ್ಲಿ ಮಾರಾಟವಾಗುತ್ತೆ ಇವರ ಪ್ರೊಡಕ್ಟ್

4.Indian Hotels
ಮಾರುಕಟ್ಟೆ ತಜ್ಞರಾದ ರಚನಾ ವೈದ್ಯ, ಸೋಮವಾರ Indian Hotels ಷೇರು ಖರೀದಿಗೆ ಸಲಹೆ ನೀಡಿದ್ದಾರೆ. 691 ರೂ. ಬೆಲೆಯಲ್ಲಿ ಷೇರು ಖರೀದಿಗೆ ಸಲಹೆ ನೀಡಲಾಗಿದ್ದು, ಸ್ಟಾಪ್‌ಲಾಸ್ 689 ರೂ.ಗಳಾಗಿದೆ. ಟಾರ್ಗೆಟ್ ಸೆಟ್ 710 ರೂ. ಆಗಿದ್ದು, ಈ ಸಂದರ್ಭದಲ್ಲಿ ಷೇರು ಸಹ ಮಾರಾಟ ಮಾಡಬಹುದು ಎಂದಿದ್ದಾರೆ. 

5.HDFC Bank
ಮಾರುಕಟ್ಟೆ ತಜ್ಞ ಅಮಿತ್ ಸೇಠ್, ಹೆಚ್‌ಡಿಎಫ್‌ಸಿ ಬ್ಯಾಂಕ್‌ ಒಳ್ಳೆಯ ರಿಟರ್ನ್ ನೀಡುವ ಸಾಧ್ಯತೆ ಇದೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳನ್ನು 1,744 ರೂ. ದರದಲ್ಲಿ ಖರೀದಿಗೆ ಸಲಹೆ ನೀಡಲಾಗಿದ್ದು, 1,725 ರೂ. ಸ್ಟಾಪ್‌ಲಾಸ್ ಮತ್ತು ಟಾರ್ಗೆಟ್ ಸೆಟ್ 1,775 ರೂಪಾಯಿ ಆಗಿದೆ. 

(Disclaimer: ಈ ಮಾಹಿತಿಯು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಇದನ್ನು ಹೂಡಿಕೆಯ ಸಲಹೆಯನ್ನಾಗಿ ತೆಗೆದುಕೊಳ್ಳಬಾರದು. ಯಾವುದೇ ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಸಲಹೆಗಾರರು ಅಥವಾ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ.) 

ಇದನ್ನೂ ಓದಿ: ಈ ಷೇರು ಖರೀದಿಸಿ ಊರಿನವರೆಲ್ಲಾ ಕೋಟ್ಯಾಧಿಪತಿಗಳಾದ್ರು; ₹100 ಹೂಡಿಕೆ, ₹14 ಕೋಟಿ ಆಯ್ತು!

Latest Videos
Follow Us:
Download App:
  • android
  • ios