Asianet Suvarna News Asianet Suvarna News

Jobs For Uneducated: ಅನಕ್ಷರಸ್ಥರೆಂದು ಚಿಂತಿಸಬೇಕಾಗಿಲ್ಲ, ಈ ಮೂಲಕ ನೀವು ಗಳಿಸ್ಬಹುದು ಲಕ್ಷಾಂತರ ರೂ.

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಸಾಕಷ್ಟಿದೆ. ಶಿಕ್ಷಣಕ್ಕೆ ತಕ್ಕ ಕೆಲಸದ ಹುಡುಕಾಟ ನಡೆಸುವ ಜನರು ಕಡಿಮೆ ಸಂಬಳಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದ್ರೆ ಅನೇಕ ಕಾರಣಕ್ಕೆ ವಿದ್ಯಾಭ್ಯಾಸ ಮಾಡದೆ ಇರುವ ಅಥವಾ ಮಧ್ಯದಲ್ಲಿಯೇ ಓದು ಬಿಡುವ ಜನರು ಹೊಟ್ಟೆ ಪಾಡಿಗಾಗಿ ಯಾವ ಕೆಲಸಕ್ಕೆ ಬೇಕಾದ್ರೂ ಸಿದ್ಧರಿರ್ತಾರೆ. ಅನಕ್ಷರಸ್ಥರಿಗೂ ನಮ್ಮಲ್ಲಿ ಅನೇಕ ಕೆಲಸಗಳಿವೆ.  
 

The Best Job For Illiterates In India private jobs business and more
Author
Bangalore, First Published Jan 12, 2022, 1:36 PM IST

Business Desk: ಒಂದು ದಿನದಲ್ಲಿ ಶ್ರೀಮಂತ (Rich)ರಾಗುವುದು ಎಷ್ಟು ಕಷ್ಟವೋ ಕೆಲಸ (Job )ಸಿಗುವುದೂ ಕೂಡ ಅಷ್ಟೇ ಕಷ್ಟ. ಹೆಚ್ಚಿನ ವಿದ್ಯಾಭ್ಯಾಸ (Education )ಮಾಡಿದ್ದರೂ,ಅಂಕ ಪಟ್ಟಿಯಲ್ಲಿ ಮುಂದಿದ್ದರೂ ಬೇಗ ಕೆಲಸ ಸಿಗುವುದಿಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯುವುದು ಸವಾಲಿನ ಕೆಲಸ. ಅದರಲ್ಲೂ ಅನಕ್ಷರಸ್ಥರಿಗೆ ಕೆಲಸ ಸಿಗುವುದು ಸುಲಭದ ಮಾತಲ್ಲ. ವಿದ್ಯಾವಂತರೇ ಅನೇಕ ಬಾರಿ ಮೋಸದ ಜಾಲಕ್ಕೆ ಬೀಳ್ತಾರೆ. ಸರ್ಕಾರಿ ಕೆಲಸ (Government work)ದ ಹೆಸರಿನಲ್ಲಿ ಅನಕ್ಷರಸ್ಥರನ್ನು ಕೆಲವರು ಮೋಸ ಮಾಡಿ, ಹಣ ದೋಚುತ್ತಾರೆ. ಕೆಲಸ ಪಡೆಯುವ ಮೊದಲು ಅನೇಕ ಸಂಗತಿಗಳನ್ನು ತಿಳಿದಿರಬೇಕು. ಇಂದು ಅನಕ್ಷರಸ್ಥರು ಎಲ್ಲಿ ಕೆಲಸ ಪಡೆಯಬಹುದು ಎಂಬುದನ್ನು ಈ ಲೇಖನದಲ್ಲಿ ಹೇಳ್ತೇವೆ. ಇದಕ್ಕೂ ಮುನ್ನ ಒಂದು ಪ್ರಶ್ನೆಗೆ ಉತ್ತರ ನೀಡ್ತೆವೆ. 

ಅನಕ್ಷರಸ್ಥರಿಗೆ ಸರ್ಕಾರಿ ನೌಕರಿ ಸಿಗಬಹುದೇ? ಈ ಪ್ರಶ್ನೆಗೆ ನೇರ ಉತ್ತರ ಇಲ್ಲ. ಯಾವುದೇ ರೀತಿಯ ಸರ್ಕಾರಿ ಉದ್ಯೋಗ ಪಡೆಯಲು ಕನಿಷ್ಟ 8 ರಿಂದ 10 ನೇ ತರಗತಿ ವಿದ್ಯಾಭ್ಯಾಸ ಮುಗಿಸಿರಬೇಕು. ಇದಕ್ಕಿಂತ ಕಡಿಮೆ ಶಿಕ್ಷಣವನ್ನು ಹೊಂದಿದ್ದರೆ ಮತ್ತು ಯಾವುದೇ ಪ್ರತ್ಯೇಕ ಪದವಿ ಅಥವಾ ಡಿಪ್ಲೋಮಾ ಹೊಂದಿಲ್ಲದಿದ್ದರೆ, ನೀವು ಸರ್ಕಾರಿ ಉದ್ಯೋಗವನ್ನು ಪಡೆಯಲು ಸಾಧ್ಯವಿಲ್ಲ. ನೀವು ಅನಕ್ಷರಸ್ಥರಾಗಿದ್ದು, ನಿಮಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಬಂದರೆ ಅವರನ್ನು ನಂಬಬೇಡಿ.

ಒಬ್ಬ ಅನಕ್ಷರಸ್ಥನು ಮನೆಯಲ್ಲಿ ಕುಳಿತು ಯಾವ ಕೆಲಸವನ್ನು ಮಾಡಬಹುದು?

ಅನಕ್ಷರಸ್ಥರು ಸರ್ಕಾರಿ ನೌಕರಿ ಸಿಗುವುದಿಲ್ಲವೆಂದು ಚಿಂತಿಸುವ ಅಗತ್ಯವಿಲ್ಲ.  ಮನೆಯಲ್ಲಿಯೇ ಕುಳಿತು ಅನೇಕ ರೀತಿಯ ಕೆಲಸಗಳನ್ನು ಮಾಡಬಹುದು ಮತ್ತು ಹಣ ಸಂಪಾದಿಸಬಹುದು. ವಿದ್ಯಾವಂತರಲ್ಲದಿದ್ದರೂ ಮನೆಯಲ್ಲೇ ಕುಳಿತು ಹಲವು ರೀತಿಯ ಕೆಲಸಗಳನ್ನು ಮಾಡುವುದರಿಂದ ತಿಂಗಳಿಗೆ ಒಳ್ಳೆಯ ಹಣ ಸಂಪಾದಿಸಬಹುದು.

ಅನಕ್ಷರಸ್ಥರು ಮನೆಯಲ್ಲಿ ಕುಳಿತು ಅಡುಗೆ ಮಾಡಿ ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಬಹುದು. ರುಚಿ ರುಚಿಯಾದ ಅಡುಗೆ ಮಾಡುವ ಕಲೆ ನಿಮಗೆ ಗೊತ್ತಿದ್ದರೆ ನೀವು ಈ ಮಾರ್ಗವನ್ನು ಆಯ್ದುಕೊಳ್ಳಬಹುದು. 

ಹೊಲಿಗೆಗೆ ವಿದ್ಯಾಭ್ಯಾಸದ ಅಗತ್ಯವಿಲ್ಲ. ಚೆಂದದ ಡ್ರೆಸ್ ಹೊಲಿಯಲು ನಿಮಗೆ ಬಂದರೆ ನೀವು ಅದ್ರಿಂದ ಸಾವಿರಾರು ರೂಪಾಯಿ ಗಳಿಸಬಹುದು. ಡ್ರೆಸ್,ಬ್ಲೌಸ್ ಬರಲೇಬೇಕೆಂದೇನು ಇಲ್ಲ, ನೀವು ಹರಿದ ಬಟ್ಟೆಗೆ ಹೊಲಿಗೆ ಹಾಕಿಯೂ ಹಣ ಗಳಿಸಬಹುದು.

ಇದನ್ನೂ ಓದಿHow To Cut Down Expenses: ಹೊಸ ವರ್ಷದಲ್ಲಿ ಖರ್ಚು ಕಡಿಮೆ ಮಾಡಿ ಸಾಲದ ಹೊರೆ ತಗ್ಗಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

 ಮನೆಯಲ್ಲಿ ಕುಳಿತು ಪ್ಯಾಕಿಂಗ್ ಕೆಲಸ ಮಾಡುವುದರಿಂದ ಸಾಕಷ್ಟು ಹಣ ಗಳಿಸಬಹುದು. ಅನೇಕ ಕಂಪನಿಗಳು ಪ್ಯಾಕಿಂಗ್ ಕೆಲಸವನ್ನು ನೀಡುತ್ತವೆ. ಮನೆಗೆ ಬರುವ ವಸ್ತುಗಳನ್ನು ಪ್ಯಾಕ್ ಮಾಡಿ ನೀವು ಅವರಿಗೆ ವಾಪಸ್ ನೀಡಬೇಕಾಗುತ್ತದೆ.  ನಿಮ್ಮ ಮನೆ ಬಳಿ ಕಾರ್ಖಾನೆಗಳಿದ್ದು, ಟೀ ಗುತ್ತಿಗೆ ಪಡೆಯಬಹುದು. ಉದ್ಯೋಗಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಟೀ ತಯಾರಿಸಿ ನೀಡುವ ಮೂಲಕ ಹಣ ಗಳಿಸಬಹುದು. 

ಇವು ಕೇವಲ ಉದಾಹರಣೆಗಳು ಮಾತ್ರ. ಅನಕ್ಷರಸ್ಥರು ಮನೆಯಲ್ಲಿಯೇ ಕುಳಿತು ಇನ್ನೂ ಅನೇಕ ಕೆಲಸಗಳನ್ನು ಮಾಡಬಹುದು. ನೀವು ಯಾವ ಪ್ರದೇಶದಲ್ಲಿದ್ದೀರಿ ಹಾಗೂ ಅಲ್ಲಿ ಯಾವುದರ ಕೊರತೆಯಿದೆ,ನಿಮ್ಮ ನೈಪುಣ್ಯತೆಯೇನು ಎಲ್ಲವನ್ನೂ ಅರಿತು ನೀವು ಕೆಲಸ ಶುರು ಮಾಡಿದ್ರೆ ಹೆಚ್ಚಿನ ಲಾಭ ಗಳಿಸಬಹುದು.

ಅನಕ್ಷರಸ್ಥರಿಗೆ ಖಾಸಗಿ ಉದ್ಯೋಗ :

ಖಾಸಗಿ ಕಂಪನಿಗಳಲ್ಲಿಯೂ ಅನಕ್ಷರಸ್ಥರಿಗೆ ಕೆಲಸ ನೀಡಲಾಗುತ್ತದೆ. ಸ್ವಂತ ಉದ್ಯೋಗ ಸಾಧ್ಯವಿಲ್ಲ ಎನ್ನುವವರು ಖಾಸಗಿ ಕಂಪನಿಗಳಲ್ಲಿ ಕೆಲಸ ಹುಡುಕಬಹುದು.  ಸರ್ಕಾರಿ ಕೆಲಸಕ್ಕಿಂತ ಹೆಚ್ಚಿನ ಸಂಬಳವನ್ನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ಗಳಿಸಬಹುದು. ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಬಹುದು. ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ನೀವು ಹತ್ತಿರದ ದೊಡ್ಡ ಕಂಪನಿಗಳನ್ನು ಸಂಪರ್ಕಿಸಿ ಕೆಲಸ ಖಾಲಿ ಇದೆಯೇ ಎಂದು ವಿಚಾರಿಸಬೇಕಾಗುತ್ತದೆ.

ಇದನ್ನೂ ಓದಿ: Tax Free Incomes: ಈ ಮೂಲಗಳಿಂದ ಹಣ ಗಳಿಸಿದರೆ ಸಿಗುತ್ತೆ ತೆರಿಗೆ ವಿನಾಯಿತಿ!

ಚಾಲನೆಯಲ್ಲಿ ನೀವು ನಿಪುಣರಾಗಿದ್ದರೆ ಚಾಲಕರಾಗಿಯೂ ಹಣ ಗಳಿಸಬಹುದು. ಓಲಾ,ಉಬರ್ ಸೇರಿದಂತೆ ಕೆಲ ಕಂಪನಿಗಳು ಚಾಲಕರನ್ನು ನೇಮಿಸಿಕೊಳ್ಳುತ್ತವೆ. ಈ ಕಂಪನಿ ಜೊತೆ ಕೆಲಸ ಮಾಡುವ ಮೂಲಕ ನೀವು ತಿಂಗಳಿಗೆ 15000-30 ಸಾವಿರದವರೆಗೆ ಗಳಿಸಬಹುದು. 

Follow Us:
Download App:
  • android
  • ios