ಒಂದೇ ದಿನದಲ್ಲಿ 2 ಲಕ್ಷ ಕೋಟಿ ರು. ಸಮೀಪ ಗಳಿಸುವ ಮೂಲಕ ಈ ವ್ಯಕ್ತಿ ದಾಖಲೆ ಬರೆದಿದ್ದಾರೆ.  ಷೇರು ದರ ಏರಿಕೆಯಾದ ಕಾರಣ ಆಸ್ತೊ ಮೊತ್ತದಲ್ಲಿ ಭಾರೀ ಏರಿಕೆಯಾಗಿದೆ. 

ನವದೆಹಲಿ (ಮಾ.12): ಟೆಸ್ಲಾ ಕಂಪನಿಯ ಸಿಇಒ ಎಲಾನ್‌ ಮಸ್ಕ್‌ ಅವರ ಆಸ್ತಿ ಒಂದೇ ದಿನದಲ್ಲಿ ಬರೋಬ್ಬರಿ 1.87 ಲಕ್ಷ ಕೋಟಿ ರು. ಏರಿಕೆಯಾಗಿದೆ.

 ಈ ಮೂಲಕ ಮಸ್ಕ್‌ ಮತ್ತೊಂದು ದಾಖಲೆ ಬರೆದಿದ್ದಾರೆ. ಮಂಗಳವಾರ ಟೆಸ್ಲಾ ಕಂಪನಿಯ ಷೇರು ಬೆಲೆ ಶೇ.20ರಷ್ಟುಹೆಚ್ಚಾಗಿತ್ತು. ಹೀಗಾಗಿ ಮಸ್ಕ್‌ ಅವರ ಆಸ್ತಿ 13 ಲಕ್ಷ ಕೋಟಿಗೆ ಏರಿಕೆಯಾಗಿದೆ. 

ಎಫ್‌ಡಿಐ ಮಿತಿ ಶೇ.74ಕ್ಕೆ ಹೆಚ್ಚಿಸಲು ಸಂಪುಟ ಅಸ್ತು! ..

ಇದರೊಂದಿಗೆ ವಿಶ್ವದ ನಂಬರ್‌ 1 ಶ್ರೀಮಂತ ಅಮೆಜಾನ್‌ ಸಂಸ್ಥಾಪಕ ಜೆ ಬೆಜೋಸ್‌ ಮತ್ತು ಮಸ್ಕ್‌ ನಡುವಿನ ಸಂಪತ್ತಿನ ಅಂತರ ಮತ್ತಷ್ಟುಕಡಿಮೆಯಾಗಿದೆ ಎಂದು ಬ್ಲೂಮ್‌ಬರ್ಗ್‌ ಸೂಚ್ಯಂಕ ತಿಳಿಸಿದೆ. 

ಮಂಗಳವಾರ ಬೆಜೋಸ್‌ ಸಹ 45 ಸಾವಿರ ಕೋಟಿ ಗಳಿಸಿದ್ದು, ಈ ಮೂಲಕ ಅವರ ಆಸ್ತಿ 13.5 ಲಕ್ಷ ಕೋಟಿಗೆ ಏರಿಕೆಯಾಗಿದೆ.