ಟೆಲಿಕಾಂ ಕ್ಷೇತ್ರದ 65 ಸಾವಿರ ಉದ್ಯೋಗಗಳಿಗೆ ಬೀಳಲಿದೆ ಕತ್ತರಿ!

ದೇಶದ ಟೆಲಿಕಾಂ ಕ್ಷೇತ್ರಕ್ಕೆ ಶಾಕಿಂಗ್ ನ್ಯೂಸ್! 65 ಸಾವಿರ ಉದ್ಯೋಗಕ್ಕೆ ಬೀಳಲಿದೆ ಕತ್ತರಿ! ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ ಕತ್ತರಿ ಪ್ರಯೋಗ! ದೇಶದ ದೂರ ಸಂಪರ್ಕ ವಲಯದಲ್ಲಿ 25 ಲಕ್ಷ ಉದ್ಯೋಗಿಗಳು
 

Telecom Sector May Cut Over Thousands of Jobs

ನವದೆಹಲಿ(ಅ.24): ಟೆಲಿಕಾಂ ವಲಯದಲ್ಲಿ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ 65 ಸಾವಿರ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. 

ಟೆಲಿಕಾಂ ಕಂಪನಿಗಳ ವಿಲೀನ, ಟವರ್‌ ಕಂಪನಿಗಳು ಮತ್ತು ರೀಟೇಲ್‌ ಘಟಕಗಳನ್ನು ಲಾಭದಾಯಕವಾಗಿ ವಿನ್ಯಾಸಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ವಲಯದಲ್ಲಿ ಸಾವಿರಾರು ಉದ್ಯೋಗ ಕಡಿತದ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಗ್ರಾಹಕ ಸೇವೆಗಳು, ಹಣಕಾಸು ವ್ಯವಹಾರಗಳು ಮತ್ತಿತರ ವಿಭಾಗಗಳಲ್ಲಿ ಮಾರ್ಚ್‌ 31, 2019ರ ಹೊತ್ತಿಗೆ 65 ಸಾವಿರಕ್ಕೂ ಹೆಚ್ಚು ಟೆಲಿಕಾಂ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಟೀಮ್‌ಲೀಸ್‌ ಸರ್ವೀಸಸ್ ಅಂದಾಜು ಮಾಡಿದೆ. ಗ್ರಾಹಕ ಸೇವೆ ವಿಭಾಗದಲ್ಲಿ 8 ಸಾವಿರ, ಹಣಕಾಸು ವ್ಯವಹಾರಗಳ ವಿಭಾಗದಲ್ಲಿ ಕನಿಷ್ಠ 7 ಸಾವಿರ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ದೇಶದ ದೂರ ಸಂಪರ್ಕ ವಲಯದಲ್ಲಿ 25 ಲಕ್ಷ ಉದ್ಯೋಗಿಗಳಿದ್ದಾರೆ ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios