ಟಾಟಾ ಕನ್ಸಲ್ಟನ್ಸಿ ಸರ್ವಿಸ್‌ ಕಂಪನಿಗೆ ಮತ್ತೊಂದು ಗರಿಕಂಪನಿ ವ್ಯವಹಾರ 6 ಲಕ್ಷದ 86 ಸಾವಿರ ಕೋಟಿ ರೂ.ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರ

ಮುಂಬೈ(ಜು.10): ಭಾರತದ ಐಟಿ ದೈತ್ಯ ಟಿಸಿಎಸ್​ 100 ಬಿಲಿಯನ್​ ಮೌಲ್ಯದ ಸಂಪತ್ತು ಹೊಂದುವ ಮೂಲಕ , ಅತೀ ಹೆಚ್ಚು ಸಂಪತ್ತು ಹೊಂದಿರುವ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಟಾಟಾ ಕನ್ಸಲ್ಟೆನ್ಸಿ ಕಂಪನಿ ಸುಮಾರು 6 ಲಕ್ಷದ 86 ಸಾವಿರ ಕೋಟಿ ರೂ. ವ್ಯವಹಾರ ಹೊಂದಿರುವ ದೇಶದ ಅತಿದೊಡ್ಡ ಕಂಪನಿಯಾಗಿದೆ.

ಟಿಸಿಎಸ್ ನಲ್ಲಿ ವಿಶ್ವದ ೧೦ ಟಾಪ್ ಮೋಸ್ಟ್ ಕಂಪನಿಗಳು ಷೇರುಗಳನ್ನು ಹೊಂದಿವೆ. ಈ ಪೈಕಿ ಎಲ್‌ಐಸಿ ಅತೀ ಹೆಚ್ಚಿ ಷೇರುಗಳನ್ನು ಹೊಂದಿದ್ದು, ಮೊದಲ ಸ್ಥಾನದಲ್ಲಿದದೆ. ಟಿಸಿಎಸ್ ನ ಒಟ್ಟಾರೆ ಶೇ. ೩.೯ ರಷ್ಟು ಷೇರಿಗಳನ್ನು ಎಲ್‌ಐಸಿ ಹೊಂದಿದೆ. ಅಂದರೆ 7,53,84,947 ಷೇರುಗಳನ್ನು ಎಲ್‌ಐಸಿ ಹೊಂದಿದೆ. 

ಇನ್ನು ಏಷ್ಯಾ ಸ್ಪೆಸಿಫಿಕ್ ಲೀಡರ್ಸ್ ಎರಡನೇ ಅತೀ ಹೆಚ್ಚು ಷೇರುಗಳನ್ನು ಖರೀದಿ ಮಾಡಿದ್ದು, ಲಜಾರ್ಡೋ ಎಮರ್ಜಿಂಗ್ ಮಾರ್ಕೆಟ್ ಮೂರನೇ ಸ್ಥಾನದಲ್ಲಿದೆ. ಲಜಾರ್ಡೋ ಸುಮಾರು ೯೮ ಲಕ್ಷ ಷೇರುಗಳನ್ನು ಹೊಂದಿದೆ.