ಯೂರೋಪ್ ಉಕ್ಕು ಉದ್ಯಮಕ್ಕೆ ಟಾಟಾ ಸ್ಟೀಲ್ ಬಾಸ್!

Tata Steel-Thyssenkrup joint venture approved, will become second-largest in European steel market
Highlights

ಯೂರೋಪ್ ಉಕ್ಕು ಉದ್ಯಮಕ್ಕೆ ಟಾಟಾ ಸ್ಟೀಲ್ ಬಾಸ್

ಥೈಸೆನ್ಕ್ರಾಪ್​ ಜತೆ ಸಹಭಾಗಿತ್ವಕ್ಕೆ ಟಾಟಾ ಸ್ಟೀಲ್ ಮುಂದು

ಯುರೋಪ್‌ನ 2ನೇ ಅತಿದೊಡ್ಡ ಉಕ್ಕು ಉತ್ಪಾದನೆ ಸಂಸ್ಥೆ

ಶೇ. 50 ರಷ್ಟು ಷೇರುಗಳನ್ನು ಖರೀದಿಸಿದ ಟಾಟಾ ಸಂಸ್ಥೆ
 

ಫ್ರಾಂಕ್ಫರ್ಟ್(ಜು.1):  ಪ್ರಖ್ಯಾತ ಉಕ್ಕು ತಯಾರಿಕಾ ಕಂಪನಿ ಟಾಟಾ ಸ್ಟೀಲ್, ಥೈಸೆನ್ಕ್ರಾಪ್​ ಜತೆ ಸಹಭಾಗಿತ್ವ ಹೊಂದಲು ಮೇಲ್ವಿಚಾರಣಾ ಮಂಡಳಿ ಅನುಮತಿ ನೀಡಿದೆ. ಈ ಮೂಲಕ ಯುರೋಪ್​ ಉಕ್ಕು ಕ್ಷೇತ್ರದಲ್ಲೀ ಭಾರೀ ಬದಲಾವಣೆಗೆ ಈ ಒಪ್ಪಂದ ನಾಂದಿ ಹಾಡಲಿದೆ.

2006ರಲ್ಲಿ ಮಿತ್ತಲ್  ಯುರೋಪ್​ನ ಅತಿ ದೊಡ್ಡ ಕಂಪನಿ ಆರ್ಸೆಲರ್ ಜೊತೆಗೆ ಜಂಟಿ ಉದ್ಯಮ ಆರಂಭಿಸುವ ಮೂಲಕ, ಯೂರೋಪ್​ನ ದೊಡ್ಡ ಉಕ್ಕು ಉದ್ಯಮವಾಗಿ ಹೊರಹೊಮ್ಮಿದ್ದರು. ಇದೀಗ ನಷ್ಟದ ಹಾದಿಯಲ್ಲಿದ್ದ  ಥೈಸೆನ್ಕ್ರಾಪ್ ಜತೆ ಟಾಟಾ ಸ್ಟೀಲ್ ಕೈ ಜೋಡಿಸಲು ಮುಂದಾಗಿದ್ದು, ಆ ಕಂಪನಿಯ ಶೇ 50ರಷ್ಟು ಷೇರುಗಳನ್ನು ಕೊಂಡುಕೊಳ್ಳುವ ಮೂಲಕ ಯುರೋಪಿನ 2ನೇ ಅತಿದೊಡ್ಡ ಉಕ್ಕು ಉತ್ಪಾದನೆ ಸಂಸ್ಥೆಯಾಗಿ ಹೊರಹೊಮ್ಮಲಿದೆ.  

ಈ ನಡುವೆ ಯುರೋಪ್​ನಿಂದ ಆಮದಾಗುವ ಉಕ್ಕಿನ ಮೇಲೆ ಅಮೆರಿಕ ಆಮದು ಸುಂಕ ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ಉಕ್ಕು ಉದ್ಯಮ ನಷ್ಟ ಅನುಭವಿಸುತ್ತಿದೆ. ಹೀಗಾಗಿ  ಥೈಸೆನ್ಕ್ರಾಪ್ ಕಂಪನಿ ಮಾರಾಟ ಮಾಡಲು ಮುಂದಾಗಿದೆ. ಟಾಟಾ ಸ್ಟೀಲ್​ ಶೇ 50 ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ಯುರೋಪ್​ನ ದೈತ ಥೈಸೆನ್ಕ್ರಾಪ್​ ಜೊತೆ ಜಂಟಿ ಸಹಭಾಗಿತ್ವದಲ್ಲಿ ಉದ್ಯಮ ಮುಂದುವರೆಸಲಿದೆ.

loader