Asianet Suvarna News Asianet Suvarna News

ಟಾಟಾ ಸಾಮ್ರಾಜ್ಯ ಕಟ್ಟಿದ್ದು ಜೆಮ್‌ಶೆಡ್‌ಜಿ ಟಾಟಾ: ಸೆಣಬು ಉತ್ಪನ್ನ ರಫ್ತಿನೊಂದಿಗೆ ಆರಂಭವಾದ ಗ್ರೂಪ್‌

ಇಂದು ಭಾರತದ ಉದ್ಯಮವಲಯದಲ್ಲಿ ಬೃಹತ್ತಾಗಿ ಬೆಳೆದಿರುವ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಹಿಂದೆ ಜೆಮ್‌ಶೆಟ್‌ಜಿಯವರ ಪರಿಶ್ರಮಯಿದೆ. ಟಾಟಾ ತಮ್ಮ ಜೀವಿತಾವಧಿಯಲ್ಲಿ ಈ ಕಾರ್ಖಾನೆಯನ್ನು ಸ್ಥಾಪಿಸಲು ಆಗಲಿಲ್ಲ.

Tata Empire Built by Jamshedji Tata The Group Started with Export of Jute Products gvd
Author
First Published Oct 10, 2024, 7:30 AM IST | Last Updated Oct 10, 2024, 7:30 AM IST

ಜೆಮ್‌ಶೆಡ್‌ಜಿ ಟಾಟಾರವರು ಮೂಲತಃ ಗುಜರಾತಿನ ಪಾರ್ಸಿ ಕುಟುಂಬದಿಂದ ಬಂದವರು. ಆಗ ಪಾರ್ಸಿಗಳಾರೂ ಉದ್ದಿಮೆ ವಲಯದಲ್ಲಿರಲಿಲ್ಲ. ಈ ವೇಳೆ ಟಾಟಾರ ತಂದೆ ನಸ್ಸರ್‌ವನ್ಜಿ ಟಾಟಾ ಗುಜರಾತಿನಿಂದ ಬಾಂಬೆಗೆ ಹೋಗಿ ಸೆಣಬು ಉತ್ಪನ್ನಗಳನ್ನು ರಫ್ತು ಮಾಡುವ ಉದ್ಯಮ ಆರಂಭಿಸಿದರು. ಅದು 1857ರ ಆಸುಪಾಸಿನ ಸಂದರ್ಭ. ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಿದ್ದ ಸಮಯ. 

ಇಂತಹ ಪ್ರಕ್ಷುಬ್ಧ ಸಂದರ್ಭದಲ್ಲಿ ಉದ್ದಿಮೆ ನಡೆಸುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಜೆಮ್‌ಶೆಟ್‌ಜಿ ಟಾಟಾರವರು ಬಾಂಬೆಗೆ ತೆರಳಿ ತಂದೆಯೊಂದಿಗೆ ತಾವೂ ಉದ್ದಿಮೆಯಲ್ಲಿ ತೊಡಗಿದರು. ಆಗ ಟಾಟಾರಿಗೆ 29ರ ಹರೆಯ. ಕಟ್ಟಿಕೊಂಡಿದ್ದ ನೂರಾರು ಕನಸುಗಳನ್ನ ನನಸು ಮಾಡುವ ಛಲ. 1869ರಲ್ಲಿ ಧೈರ್ಯ ಮಾಡಿ ಚಿಂಚ್‌ಪೋಕ್ಲಿಯಲ್ಲಿ ದಿವಾಳಿಯಾಗಿದ್ದ ತೈಲ ತಯಾರಿಕಾ ಕಂಪೆನಿಯೊಂದನ್ನು ಖರೀದಿಸಿ ಅದನ್ನು ಕಾಟನ್ ಬಟ್ಟೆ ಗಿರಣಿಯಾಗಿ ಪರಿವರ್ತಿಸಿದರು. ಬಳಿಕ ಈ ಕಾರ್ಖಾನೆಯನ್ನು ಅಧಿಕ ಲಾಭಕ್ಕೆ ಮಾರಿ, ಬಂದ ಹಣದಿಂದ ನಾಗಪುರದಲ್ಲಿ 1874ರಲ್ಲಿ ಬೃಹತ್ ಕಾಟನ್ ಗಿರಣಿ ಆರಂಭಿಸಿದರು. 

ಇಲ್ಲಿಂದಾಚೆಗೆ ಟಾಟಾ ಉದ್ಯಮಸಾಮ್ರಾಜ್ಯದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಹಂತಹಂತವಾಗಿ ಹಲವು ಕಾರ್ಖಾನೆಗಳನ್ನು ಆರಂಭಿಸಿದರು. ಟಾಟಾ ಸ್ಟೀಲ್ , ಟಾಟಾ ಪವರ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್‌ ಸೈನ್ಸ್‌ ಸಂಸ್ಥೆಗಳನ್ನು ಹುಟ್ಟುಹಾಕಿದರು. ಮುಂಬೈಯ ಕೊಲಾಬೊ ಜಿಲ್ಲೆಯಲ್ಲಿ ಐಷಾರಾಮಿ ತಾಜ್ ಹೋಟೆಲ್ ಸ್ಥಾಪಿಸಿದರು. ಎಲ್ಲಾ ವಲಯಗಳನ್ನೂ ಒಂದೇ ಸಂಸ್ಥೆಯಡಿ ಬರುವಂತೆ ಮಾಡಲು ಟಾಟಾ ಗ್ರೂಪ್ ಸ್ಥಾಪಿಸಿ ವಿಶ್ವದಲ್ಲೇ ಯಶಸ್ವಿ ಉದ್ದಿಮೆದಾರ ಎನಿಸಿಕೊಂಡರು.

ರಾಷ್ಟ್ರಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಬಂದ ರಿಷಬ್: ಕಾಂತಾರ ಪ್ರೀಕ್ವೆಲ್ ಬಗ್ಗೆ ಬಿಗ್​ ಅಪ್‌ಡೇಟ್‌‌ ಕೊಟ್ಟ ಶೆಟ್ರು!

ಇಂದು ಭಾರತದ ಉದ್ಯಮವಲಯದಲ್ಲಿ ಬೃಹತ್ತಾಗಿ ಬೆಳೆದಿರುವ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಹಿಂದೆ ಜೆಮ್‌ಶೆಟ್‌ಜಿಯವರ ಪರಿಶ್ರಮಯಿದೆ. ಟಾಟಾ ತಮ್ಮ ಜೀವಿತಾವಧಿಯಲ್ಲಿ ಈ ಕಾರ್ಖಾನೆಯನ್ನು ಸ್ಥಾಪಿಸಲು ಆಗಲಿಲ್ಲ. ಅವರು ಮೃತರಾದ 3 ವರ್ಷಗಳ ಬಳಿಕ 1907ರಲ್ಲಿ ಅವರ ಮಗ ದೊರಾಬ್ಜಿ ಟಾಟಾ ಮತ್ತು ಸಹೋದರರು ತಂದೆಯ ಕನಸನ್ನು ನನಸು ಮಾಡಿದ್ದರು.

Latest Videos
Follow Us:
Download App:
  • android
  • ios