ನವದೆಹಲಿ[ಸೆ.13]: ಆನಂದ್ ಮಹೀಂದ್ರಾ ಇತ್ತೀಚೆಗೆ ಟ್ವಿಟರ್ ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ಜನರಿಗೂ ಅವರ ಟ್ವೀಟ್ ಗಳು ಬಹಳಷ್ಟು ಇಷ್ಟವಾಗುತ್ತಿವೆ. ಸದ್ಯ ಅವರು ಮಾಡಿರುವ ಮತ್ತೊಂದು ಟ್ವೀಟ್ ಭಾರೀ ಸೌಂಡ್ ಮಾಡುತ್ತಿದ್ದು, ಇದು ಬಡ ಅಜ್ಜಿಯೊಬ್ಬರ ಅದೃಷ್ಟ ಬದಲಾಯಿಸಿದೆ. ಅಷ್ಟಕ್ಕೂ ಟ್ವೀಟ್ ನಲ್ಲೇನಿದೆ? ಇಲ್ಲಿದೆ ವಿವರ

ತಮಿಳುನಾಡಿನ ವದಿವೇಲಂಪಾಲಾಯಂ ಪ್ರದೇಶದಲ್ಲಿ ಕಮಲಾಥಲ್ ಹೆಸರಿನ ಬಡ ಅಜ್ಜಿ ಪುಟ್ಟ ಅಂಗಡಿಯನ್ನು ನಡೆಸುತ್ತಿದ್ದಾರೆ. ಆರ್ಥಿಕ ವಿಚಾರದಲ್ಲಿ ಇವರು ಬಡವರಾಗಿದ್ದರೂ ಹೃದಯ ಶ್ರೀಮಂತಿಕೆಯಲ್ಲಿ ಇವರನ್ನು ಮೀರಿಸುವವರಿಲ್ಲ. ಕೇವಲ 1 ರೂಪಾಯಿಗೆ ಇಡ್ಲಿ ಮಾರಿ ಹಸಿದವರ ಹೊಟ್ಟೆ ತಣ್ಣಗಿಡುತ್ತಿದ್ದ ಅಜ್ಜಿ ಈಗ ಆನಂದ್ ಮಹೀಂದ್ರಾರ ಒಂದು ಟ್ವೀಟ್ ನಿಂದ ಫೇಮಸ್ ಆಗಿದ್ದಾರೆ. ಅಲ್ಲದೇ ಕಟ್ಟಿಗೆ ಒಲೆ ಮೂಲಕವೇ ಇಡ್ಲಿ ತಯಾರಿಸುತ್ತಿದ್ದ ಜ್ಜಿಗೆ ಸರ್ಕಾರವೇ ಖುದ್ದು LPG ಗ್ಯಾಸ್ ಕನೆಕ್ಷನ್ ನೀಡಿದೆ.

4 ವರ್ಷ ಹಿಂದೆಯೇ ಉಬರ್, ಓಲಾ ಬಗ್ಗೆ ಎಚ್ಚರಿಸಿದ್ದ ಆನಂದ್ ಮಹೀಂದ್ರಾ!

ಹೃದಯ ಶ್ರೀಮಂತಿಕೆಯುಳ್ಳ ಈ ಅಜ್ಜಿಯ ಕಥೆಯನ್ನು ಟ್ವೀಟ್ ಮೂಲಕ ಶೇರ್ ಮಾಡಿಕೊಂಡಿದ್ದ ಉದ್ಯಮಿ ಆನಂದ್ ಮಹೀಂದ್ರಾ, 'ಸಮಾಜದಲ್ಲಿ ಇಂತಹ ಒಳ್ಳೆಯ ವ್ಯಕ್ತಿಗಳಿರುತ್ತಾರೆ. ಕೇವಲ 1 ರೂಪಾಯಿಗೆ ಇಡ್ಲಿ ಮಾರುವ ಈ ಅಜ್ಜಿ, ಅದನ್ನು ಮಾಡಲು ಕಟ್ಟಿಗೆ ಒಲೆಯನ್ನೇ ಬಳಸುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಆಕೆ ಯಾರು ಎಂದು ಯರಿಗೂ ತಿಳಿದಿದ್ದರೆ, ಆಕೆ ಉದ್ಯಮಕ್ಕೆ ಸಹಾಯ ಮಾಡಲು ನಾನು ಸಹಾಯ ಮಾಡುತ್ತೇನೆ. ಆಕೆಗೊಂದು LPG ಗ್ಯಾಸ್ ಕೊಡಿಸಿ' ಎಂದಿದ್ದಾರೆ.

'ಚಂದ್ರಯಾನ 2ರ ಹೃದಯ ಬಡಿತ ಪ್ರತಿ ಭಾರತೀಯನಿಗೂ ಕೇಳಿಸ್ತಿದೆ'

ಈ ಟ್ವೀಟ್ ಮಾಡಿದ ಬೆನ್ನಲ್ಲೇ ಬುಧವಾರದಂದು ಕೊಯಮುತ್ತೂರಿನ ಭಾರತ್ ಗ್ಯಾಸ್ ಪ್ರತಿಕ್ರಿಯಿಸಿದ್ದು, 'ಕಮಲಾಥಲ್ ಗೆ ನಾವು ಗ್ಯಾಸ್ ಕನೆಕ್ಷನ್ ನೀಡಿದ್ದೇವೆ' ಎಂದಿದ್ದಾರೆ. ಈ ಟ್ವೀಟ್ ಗಮನಿಸಿದ ನೆಟ್ಟಿಗರು ಭಾರತ್ ಗ್ಯಾಸ್ ನ ಈ ಉದಾರ ಮನಸ್ಸಿಗೆ ಭೇಷ್ ಎಂದಿದ್ದಾರೆ. 

ಆನಂದ್ ಮಹೀಂದ್ರಾ ಕೂಡಾ ಇದಕ್ಕೆ ಪ್ರತಿಯಾಗಿ ಮತ್ತೆ ಟ್ವೀಟ್ ಮಾಡಿದ್ದು 'ಅದ್ಭುತ, ಬಡ ಅಜ್ಜಿಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು. ನಾನು ಈ ಮೊದಲು ಹೇಳಿದಂತೆ ಮುಂದೆಯೂ ನಾನು ಆಕೆಗೆ ಸಹಾಯ ಮಾಡಲು ಸದಾ ಸಿದ್ಧನಾಗಿರುತ್ತೇನೆ' ಎಂದಿದ್ದಾರೆ.

ಇದಾದ ಬಳಿಕ ಹಿಂದೂಸ್ತಾನ್ ಪೆಟ್ರೋಲಿಯಂ ಕೂಡಾ ಆನಂದ್ ಮಹೀಂದ್ರಾರನ್ನು ಟ್ಯಾಗ್ ಮಾಡುತ್ತಾ 'ಕಮಲಾಥಲ್ HP ಗ್ಯಾಸ್ ಬಳಸುತ್ತಿದ್ದಾರೆ. ನಾವು ಅವರನ್ನು ಭೇಟಿಯಾಗಿ ಬರ್ನರ್ ನೀಡಿದ್ದೇವೆ. ಈಗ ಅವರು ಒಂದೇ ಬಾರಿ ಹೆಚ್ಚು ತಿಂಡಿ ತಯಾರಿಸಬಹುದು. ಈ ಮೂಲಕ ಅವರ ಉದ್ಯಮ ಮತ್ತಷ್ಟು ಹೆಚ್ಚಲಿದೆ' ಎಂದಿದ್ದಾರೆ. 

ಸದ್ಯ ಈ ಅಜ್ಜಿಯ ಸಹಾಯ ಮಾಡಿದ ಆನಂದ್ ಮಹೀಂದ್ರಾಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.