Asianet Suvarna News Asianet Suvarna News

ತೈವಾನ್ ಟೆಕ್ ಕಂಪನಿಯಿಂದ ಮಹತ್ವದ ನಿರ್ಧಾರ, ಚೀನಾದಿಂದ ಭಾರತಕ್ಕೆ ಸ್ಥಳಾಂತರ!

ಬಹುರಾಷ್ಟ್ರೀಯ ಕಂಪನಿಗಳು ಈಗಾಗಲೇ ಚೀನಾದಿಂದ ಭಾರತ ಸೇರದಂತೆ ಇತರ ರಾಷ್ಟ್ರಗಳಿಗೆ ಸ್ಥಳಾಂತರಗೊಳ್ಳುತ್ತಿರುವುದು ಹೊಸದೇನಲ್ಲ. ಇದೀಗ ತೈವಾನ್ ಟೆಕ್ ಕಂಪನಿ ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದೆ. ಚೀನಾದಲ್ಲಿನ ಆತಂಕದ ವಾತಾವರಣ, ಉಭಯ ದೇಶದ ನಡುವಿನ ಸಂಬಂಧ ಸೇರಿದಂತೆ ಹಲವು ಕಾರಣಗಳಿಂದ ಇದೀಗ ಸುರಕ್ಷಿತ ತಾಣ ಭಾರತಕ್ಕೆ ಸ್ಥಳಾಂತರಗೊಳ್ಳುತ್ತಿದೆ.

Taiwan tech giants plan to relocate manufacture unit to India from China amid rising military tension ckm
Author
First Published Jul 2, 2023, 6:32 PM IST

ನವದೆಹಲಿ(ಜು.02) ತೈವಾನ್ ಹಾಗೂ ಚೀನಾ ನಡುವಿನ ಸಂಬಂಧ ಅಷ್ಟಕಷ್ಟೆ. ತೈವಾನ್ ಮೇಲೆ ಚೀನಾ ನಿಯಂತ್ರಣ ಸಾಧಿಸುತ್ತಿದೆ. ತೈವಾನ್ ಹಕ್ಕುಗಳನ್ನು ಚೀನಾ ದಮನ ಮಾಡುತ್ತಿದೆ ಅನ್ನೋ ಹೋರಾಟಗಳು ನಡೆಯುತ್ತಲೇ ಇದೆ. ಇದರ ಫಲವಾಗಿ ತೈವಾನ್ ಟೆಕ್ ದಿಗ್ಗಜ ಕಂಪನಿ ಬೀಜಿಂಗ್‌ನಿಂದ ಭಾರತಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದೆ. ಇದು ಭಾರತಕ್ಕೆ ಅತ್ಯಂತ ದೊಡ್ಡ ಯಶಸ್ಸು. ಕಾರಣ ಈ ತೈವಾನ್ ಕಂಪನಿ ಸೆಮಿಕಂಡಕ್ಟರ್ ಸೇರಿದಂತೆ ಭಾರಿ ಬೇಡಿಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತದೆ. ಇದೀಗ ಈ ಕಂಪನಿಯ ಭಾರತದಲ್ಲಿ ಕಾರ್ಯಾರಂಭಗೊಂಡರೆ ಸೆಮಿಕಂಡಕ್ಟರ್ ಸಮಸ್ಯೆ ನಿವಾರಣೆಯಾಗಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಇದರ ಜೊತೆಗೆ ಭಾರತ ಹಾಗೂ ತೈವಾನ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ.

ತೈವಾನ್ ರಾಷ್ಟ್ರೀಯ ಅಭಿವೃದ್ಧಿ ಸಚಿವ ಕಾವೋ ಶೈನ್ ಕ್ಯೂಯೆ ಈ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಚೀನಾದಲ್ಲಿನ ಆತಂಕದ ವತಾವಾರಣ, ವ್ಯತಿರಿಕ್ತ ಕಾರಣಗಳಳಿಂದ ತೈವಾನ್ ಟೆಕ್ ದಿಗ್ಗಜ ಕಂಪನಿ, ಭಾರತದತ್ತ ಮುಖ ಮಾಡಿದೆ. ಈ ಕುರಿತು ಮಾತುಕತೆಗಳು ನಡೆಯುತ್ತಿದೆ ಎಂದು  ಕಾವೋ ಶೈನ್ ಕ್ಯೂಯೆ ಹೇಳಿದ್ದಾರೆ. 

ರಾಜ್ಯದಲ್ಲಿ ಬೃಹತ್‌ ಐಫೋನ್‌ ಘಟಕ: ತೈವಾನ್‌ ಮೂಲದ ಫಾಕ್ಸ್‌ಕಾನ್‌ 

ತೈವಾನ್ ಕಂಪನಿಯ ವಿಶ್ವ ಪೂರೈಕೆ ಜಾಲವನ್ನು ಬಲಪಡಿಸಲು ಭಾರತಕ್ಕಿಂತ ಉತ್ತಮ ಹಾಗೂ ಸುರಕ್ಷಿತ ತಾಣ ಮತ್ತೊಂದಿಲ್ಲ. ಭಾರತ ಇದೀಗ ವಿಶ್ವದ ಅತ್ಯಂತ ದೊಡ್ಡ ಎಲೆಕ್ಟ್ರಾನಿಕ್ ಹಾಗೂ ಉತರ ಉತ್ಪಾದನಾ ವಲಯದ ಹಬ್ ಆಗಿ ಮಾರ್ಪಡುತ್ತಿದೆ. ಚೀನಾದಿಂದ ವಿಶ್ವ ಪೂರೈಕೆ ಜಾಲದಲ್ಲಿ ಅಧಿಪತ್ಯ ಸಾಧಿಸುವುದು ಸವಾಲಾಗುತ್ತಿದೆ. ಭಾರತದಲ್ಲಿ ಪೂರಕ ವಾತಾವರಣ ಕಂಪನಿಯ ಬೆಳವಣಿಗೆ ದೃಷ್ಟಿಯಿಂತ ಉತ್ತಮವಾಗಿದೆ ಎಂದು ತೈವಾನ್ ಏಸಿಯಾನ್ ಸ್ಟಡೀಸ್ ಸೆಂಟರ್ ನಿರ್ದೇಶಕ ಕ್ರಿಸ್ಟಿ ತ್ಸುನ್ ತ್ಜೂ ಹೇಳಿದ್ದಾರೆ. 

ಚೀನಾ ಹಾಗೂ ತೈವಾನ್ ನಡುವಿನ ಮಿಲಿಟರಿ ಟೆನ್ಶನ್ ಹೆಚ್ಚಾಗುತ್ತಿದೆ. ತೈವಾನ್ ಮೇಲೆ ಅಧಿಪತ್ಯ ಸಾಧಿಸಲು ಚೀನಾ ಪ್ರಯತ್ನಗಳು ಈ ಹಿಂದಿಗಿಂತಲೂ ಹೆಚ್ಚಾಗಿದೆ. ಹೀಗಾಗಿ ಚೀನಾದಲ್ಲಿರುವ ತೈವಾನ್ ಕಂಪನಿಗಳ ಸುರಕ್ಷತೆ ಕುರಿತು ಆತಂಕ ಎದುರಾಗಿದೆ. ದಾಳಿ, ದಂಗೆಗಳಿಂದ ತೈವಾನ್ ಕಂಪನಿಗಳು ಹೆಚ್ಚಿನ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಇದಕ್ಕಿಂತ ಚೀನಾದಿಂದ ಭಾರತಕ್ಕೆ ಸ್ಥಳಾಂತರವಾಗುವುದೇ ಸುರಕ್ಷಿತ ಎಂದು ಹಲವು ತೈವಾನ್ ಕೈಗಾರಿಕೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Chinaದಿಂದ ಯುದ್ಧೋತ್ಸಾಹ: ತೈವಾನ್‌ ವಶಕ್ಕೆ ಮಿಲಿಟರಿ ಬಳಸಲೂ ಹಿಂಜರಿಯುವುದಿಲ್ಲ ಎಂದ ಜಿನ್‌ಪಿಂಗ್‌

ಭಾರತದಲ್ಲಿ ಈಗಾಗಲೇ ತೆಲ ತೈವಾನ್ ಕಂಪನಿಗಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ತೈವಾನ್ ಟೆಕ್ ಕಂಪನಿಗಳು ವಿಶ್ವ ಮಾರುಕಟ್ಟೆಯಲ್ಲಿ ಶೇಕಡಾ 70 ರಷ್ಟು ಸೆಮಿಕಂಡಕ್ಟರ್ ಉತ್ಪಾದನೆ ಪಾಲು ಹೊಂದದೆ. ಇನ್ನು ಚಿಪ್ ಮಾರುಕಟ್ಟೆಯಲ್ಲಿ ಶೇಕಡಾ 90 ರಷ್ಟು ಪಾಲು ಹೊಂದಿದೆ. ಈ ಕಂಪನಿಗಳು ಭಾರತದತ್ತ ಮುಖಮಾಡಿದರೆ, ಭಾರತ ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ನಂಬರ್ 1 ಆಗುವುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios