Asianet Suvarna News Asianet Suvarna News

ಬಳಕೆದಾರರಿಗೆ ಶಾಕ್ ನೀಡಿದ ಸ್ವಿಗ್ಗಿ;ಪ್ರತಿ ಫುಡ್ ಆರ್ಡರ್ ಮೇಲೆ 2ರೂ. ಪ್ಲಾಟ್ ಫಾರ್ಮ್ ಶುಲ್ಕ

ಆನ್ ಲೈನ್ ಆಹಾರ ಪೂರೈಕೆ ಪ್ಲಾಟ್ ಫಾರ್ಮ್ ಸ್ವಿಗ್ಗಿ ಪ್ರತಿ ಫುಡ್ ಆರ್ಡರ್ ಮೇಲೆ 2ರೂ. ಪ್ಲಾಟ್ ಫಾರ್ಮ್ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಇದರಿಂದ ಸ್ವಿಗ್ಗಿ ಬಳಕೆದಾರರ ಜೇಬಿನ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಆದರೆ, ಈ ಶುಲ್ಕ ಇನ್ ಸ್ಟಾಮಾರ್ಟ್ ಬಳಕೆದಾರರಿಗೆ ಅನ್ವಯಿಸೋದಿಲ್ಲ ಎಂದು ಸ್ವಿಗ್ಗಿ ತಿಳಿಸಿದೆ. 

Swiggy begins charging Rs 2 platform fee per food order from users anu
Author
First Published Apr 30, 2023, 2:01 PM IST

ಬೆಂಗಳೂರು (ಏ.30): ಆನ್ ಲೈನ್ ಆಹಾರ ಪೂರೈಕೆ ಪ್ಲಾಟ್ ಫಾರ್ಮ್ ಸ್ವಿಗ್ಗಿ ಎಲ್ಲ ಬಳಕೆದಾರರಿಗೂ ಕಾರ್ಟ್ ಮೌಲ್ಯದ ಹೊರತಾಗಿ  ಪ್ರತಿ  ಆಹಾರ ತಿನಿಸುಗಳ ಆರ್ಡರ್ ಮೇಲೆ 2ರೂ. 'ಪ್ಲಾಟ್ ಫಾರ್ಮ್ ಶುಲ್ಕ' ವಿಧಿಸಲು ಪ್ರಾರಂಭಿಸಿದೆ. ಈ ಹೆಚ್ಚುವರಿ ಶುಲ್ಕಗಳು ಕೇವಲ ಮುಖ್ಯ ಪ್ಲಾರ್ಟ್ ಫಾರ್ಮ್ ಆರ್ಡರ್ ಗಳಿಗೆ ಅನ್ವಯಿಸುತ್ತದೆ. ಇನ್ ಸ್ಟಾಮಾರ್ಟ್ ಬಳಕೆದಾರರಿಗೆ ಅನ್ವಯಿಸೋದಿಲ್ಲ ಎಂದು ಸಂಸ್ಥೆ ತಿಳಿಸಿದೆ. 'ಪ್ಲಾಟ್ ಫಾರ್ಮ್ ಶುಲ್ಕ ಆಹಾರ ಆರ್ಡರ್ ಗಳ ಮೇಲೆ ವಿಧಿಸುವ ಅತ್ಯಲ್ಪ ಶುಲ್ಕವಾಗಿದೆ. ಈ ಶುಲ್ಕ ನಮ್ಮ ಪ್ಲಾಟ್ ಫಾರ್ಮ್ ಅನ್ನು ಅಭಿವೃದ್ಧಿಪಡಿಸಲು ಹಾಗೂ ಕಾರ್ಯನಿರ್ವಹಣೆಗೆ ನೆರವು ನೀಡುತ್ತದೆ. ಈ ಮೂಲಕ ಅಪ್ಲಿಕೇಷನ್ ಫೀಚರ್ ಗಳನ್ನು ಅಭಿವೃದ್ಧಿಪಡಿಸಲು ಹಾಗೂ ಆ ಮೂಲಕ ಅನಿಯಮಿತಿ  ಆ್ಯಪ್ ಅನುಭವಗಳನ್ನು ಪಡೆಯಲು ನೆರವು ನೀಡುತ್ತದೆ' ಎಂದು ಸ್ವಿಗ್ಗಿ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ಈ ಪ್ಲಾರ್ಟ್ ಫಾರ್ಮ್ ಶುಲ್ಕವನ್ನು ಆಹಾರ ಪೂರೈಕೆಯ ಅನುಕೂಲ ಹಾಗೂ ನಿರ್ವಹಣಾ ಶುಲ್ಕದ ಮೇಲೆ ವಿಧಿಸಲಾಗುತ್ತದೆ. 

ದಿನವೊಂದರಲ್ಲಿ 1.5-2 ಮಿಲಿಯನ್ ಗಿಂತಲೂ ಅಧಿಕ ಆರ್ಡರ್ ಗಳನ್ನು ನಿರ್ವಹಣೆ ಮಾಡುತ್ತಿರೋದಾಗಿ ಸ್ವಿಗ್ಗಿ ತಿಳಿಸಿದೆ. ರಂಜಾನ್ ತಿಂಗಳಲ್ಲಿ ಹೈದರಾಬಾದ್ ನಲ್ಲಿ ಜನರು ಸ್ವಿಗ್ಗಿ (Swiggy)ಮೂಲಕ 10 ಲಕ್ಷ ಪ್ಲೇಟ್ ಬಿರಿಯಾನಿಗಳು ಹಾಗೂ 4ಲಕ್ಷ ಪ್ಲೇಟ್ ಗಳಷ್ಟು ಹಲೇಮ್ ಆರ್ಡರ್ ಮಾಡಿದ್ದಾರೆ. ಇನ್ನು ಕಳೆದ 12 ತಿಂಗಳಲ್ಲಿ 33 ಮಿಲಿಯನ್ ಪ್ಲೇಟ್ ಗಳಷ್ಟು ಇಡ್ಲಿ ಡೆಲಿವರಿ ಮಾಡಿರೋದಾಗಿ  ಸ್ವಿಗ್ಗಿ ಮಾರ್ಚ್ ನಲ್ಲಿ ಮಾಹಿತಿ ನೀಡಿದೆ.ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ಇಡ್ಲಿ ಆರ್ಡರ್ ಮಾಡಿದ ಭಾರತದ ಟಾಪ್ ಮೂರು ನಗರಗಳಾಗಿವೆ. ಈ ಕಂಪನಿ 2.5 ಲಕ್ಷಕ್ಕೂ ಅಧಿಕ ರೆಸ್ಟೋರೆಂಟ್ ಸಹಭಾಗಿತ್ವ ಹೊಂದಿದೆ.

ಟ್ವಿಟ್ಟರ್‌ನಲ್ಲಿ ಇನ್ನು ಆರ್ಟಿಕಲ್‌ ಓದೋಕು ಕೊಡಬೇಕು ದುಡ್ಡು!

12 ತಿಂಗಳ ಅವಧಿಯಲ್ಲಿ ಇಡ್ಲಿಗಾಗಿ 6 ಲಕ್ಷ ರೂಪಾಯಿ ವೆಚ್ಚ ಮಾಡಿದ ವ್ಯಕ್ತಿ
ಹೆಚ್ಚಿನ ಜನರು ಇಡ್ಲಿ ಆರ್ಡರ್ ಮಾಡಿರುವ ಸಮಯವೆಂದರೆ ಅದು ಬೆಳಗ್ಗೆ 8ರಿಂದ 10ರ ವರೆಗೆ ಎಂದು ಸ್ವಿಗ್ಗಿ ಹೇಳಿದ್ದು, ಹಲವು ನಗರಗಳಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಇಡ್ಲಿ ಆರ್ಡರ್ ಮಾಡಿರುವ ಅನೇಕ ಉದಾಹರಣೆಗಳಿವೆ. ಹೈದರಾಬಾದ್ ನ ವ್ಯಕ್ತಿಯೋರ್ವ 12 ತಿಂಗಳ ಅವಧಿಯಲ್ಲಿ ಇಡ್ಲಿಗಳಿಗಾಗಿ 6 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆಂಬುದು ಮತ್ತೊಂದು ಅಚ್ಚರಿಯ ಅಂಶವಾಗಿದೆ. ಇಡ್ಲಿಯ ಆರ್ಡರ್ ಗಳಿಗೆ ನೆಚ್ಚಿನ ರೆಸ್ಟೋರೆಂಟ್ ಗಳ (Restaurants) ಟಾಪ್ 5 ರ ಪಟ್ಟಿಯಲ್ಲಿ ಬೆಂಗಳೂರು,  ಚೆನ್ನೈಗಳಲ್ಲಿ ಅಡ್ಯಾರ್ ಆನಂದ್ ಭವನ್‌ಗಳಾಗಿವೆ. ಹೈದರಾಬಾದ್ ನಲ್ಲಿ ವರಲಕ್ಷ್ಮಿ ಟಿಫನ್ಸ್, ಉಡುಪೀಸ್ ಉಪಹಾರ್ ಹಾಗೂ ಚೆನ್ನೈ ನಲ್ಲಿ ಸಂಗೀತಾ ವೆಜ್ ರೆಸ್ಟೋರೆಂಟ್ ಗಳಿವೆ ಎಂದು ಸ್ವಿಗ್ಗಿ ಹೇಳಿದೆ. 

ಶಿಷ್ಯೆಯನ್ನೇ ವಿವಾಹವಾಗಿರುವ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್, ಎಷ್ಟು ಕೋಟಿ ಒಡೆಯ ಗೊತ್ತಾ?

ಬೆಂಗಳೂರಿಗರಿಗೆ ರವಾ ಇಡ್ಲಿ ತುಂಬಾ ಇಷ್ಟ
ಇಡ್ಲಿ ಪ್ರಿಯರಿಗೆ ಇಷ್ಟವಾಗುವ ನೆಚ್ಚಿನ ಇಡ್ಲಿಗಳ ಪ್ರಾಂತ್ಯವಾರು ಅಂಕಿ ಅಂಶವನ್ನು ಸ್ವಿಗ್ಗಿ ನೀಡಿದೆ. ಬೆಂಗಳೂರಿಗರು ರವಾ ಇಡ್ಲಿ, ಚೆನ್ನೈನವರು ತುಪ್ಪದ ಪೋಡಿ ಇಡ್ಲಿ, ಹೈದರಾಬಾದಿಗಳು ಕಾರಂ ಪೋಡಿ ತುಪ್ಪದ ಇಡ್ಲಿ, ಮುಂಬೈನವರು ಇಡ್ಲಿ- ವಡಾವನ್ನು ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಗ್ರಾಹಕರು (Customers) ತಮ್ಮ ಇಡ್ಲಿಗಳೊಂದಿಗೆ ಸಾಂಬಾರ್, ತೆಂಗಿನಕಾಯಿ ಚಟ್ನಿ, ಮೆದು ವಡೆ, ಸಾಗು, ತುಪ್ಪ, ಕೆಂಪು ಚಟ್ನಿ, ಜೈನ್ ಸಾಂಬಾರ್, ಚಹಾ, ಕಾಫಿ ಮುಂತಾದ ಇತರ ಭಕ್ಷ್ಯಗಳನ್ನು ಆರ್ಡರ್ ಮಾಡುತ್ತಾರೆ ಎಂದು ಸ್ವಿಗ್ಗಿ ತಿಳಿಸಿದೆ.
 

Follow Us:
Download App:
  • android
  • ios