ಸ್ವರಾಜ್ನಿಂದ ಹಗುರ ಟ್ರ್ಯಾಕ್ಟರ್ ಟಾರ್ಗೆಟ್ 630: ಕ್ರಿಕೆಟಿಗ ಧೋನಿ ಕೂಡ ಈ ಕಂಪನಿಯ ಗ್ರಾಹಕ..!
ಸ್ವರಾಜ್ ಟಾರ್ಗೆಟ್ 630 ಮಾದರಿಯ ಲಘು ಟ್ರ್ಯಾಕ್ಟರ್ ಮೊದಲು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಲಭ್ಯವಾಗಲಿದ್ದು, ಎಕ್ಸ್ ಶೋರೂಂ ದರ 5.35 ಲಕ್ಷ ರು. ನಿಂದ ಪ್ರಾರಂಭವಾಗಲಿದೆ. ಈ ಟ್ರ್ಯಾಕ್ಟರ್ ಸುಧಾರಿತ ತಂತ್ರಜ್ಞಾನ ಹೊಂದಿದ್ದು, ಸಿಂಪಡಣೆ, ಅಂತರ ಕೃಷಿ ಕಾರ್ಯಾಚರಣೆಗೆ ಬಳಸಬಹುದಾಗಿದೆ ಮತ್ತು ಬಹುಪಯೋಗಿಯಾಗಿದೆ.

ಗಂಜಿ ಆದಿಶೇಷ
ಮುಂಬೈ(ಜೂ.04): ಮಹೀಂದ್ರಾ ಸಮೂಹದ ಭಾಗವಾಗಿರುವ ಸ್ವರಾಜ್ ಟ್ರ್ಯಾಕ್ಟರ್ಸ್ ಇದೀಗ ‘ಸ್ವರಾಜ್ ಟಾರ್ಗೆಟ್ 630’ ಎಂಬ ಹಗುರವಾದ ಲಘು ಟ್ರ್ಯಾಕ್ಟರ್ ಅನ್ನು ನಗರದ ಸೂಫಿಟಾಲ್ ಹೋಟೆಲ್‌ನಲ್ಲಿ ಶುಕ್ರವಾರ ಬಿಡುಗಡೆ ಮಾಡಿತು. ರೈತರ ಬೇಡಿಕೆಗೆ ಅನುಗುಣವಾದ ಸುಧಾರಿತ ತಂತ್ರಜ್ಞಾನ ಮತ್ತು ಹೊಸ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಸ್ವರಾಜ್ ಟಾರ್ಗೆಟ್ 630 ಮಾದರಿಯ ಲಘು ಟ್ರ್ಯಾಕ್ಟರ್ ಮೊದಲು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಲಭ್ಯವಾಗಲಿದ್ದು, ಎಕ್ಸ್ ಶೋರೂಂ ದರ 5.35 ಲಕ್ಷ ರು. ನಿಂದ ಪ್ರಾರಂಭವಾಗಲಿದೆ. ಈ ಟ್ರ್ಯಾಕ್ಟರ್ ಸುಧಾರಿತ ತಂತ್ರಜ್ಞಾನ ಹೊಂದಿದ್ದು, ಸಿಂಪಡಣೆ, ಅಂತರ ಕೃಷಿ ಕಾರ್ಯಾಚರಣೆಗೆ ಬಳಸಬಹುದಾಗಿದೆ ಮತ್ತು ಬಹುಪಯೋಗಿಯಾಗಿದೆ. ಕಾರಿನ ಮಾದರಿಯ ಅನುಭವವನ್ನು ನೀಡುವ ಇದು, ಆಪರೇಟರ್‌ಗೆ (ಚಾಲಕ) ಕೇವಲ ಬಟನ್ ಸ್ಪರ್ಶದೊಂದಿಗೆ ಬಹು ಉಪಕರಣಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇದರ ಕಡಿಮೆ ಅಗಲದ ಟ್ರ್ಯಾಕ್ ಕಡಿಮೆ ಜಾಗದಲ್ಲೇ ತಿರುಗಬಹುದಾದ ಸಾಮರ್ಥ್ಯ ಹೊಂದಿದ್ದು, ಕಿರಿದಾದ ಸ್ಥಳವನ್ನು ಸಲೀಸಾಗಿ ದಾಟಿ ಹೋಗಲು ಅನುವು ಮಾಡಿಕೊಡುತ್ತದೆ.
ಈ ರಾಜ್ಯದ ಸರ್ಕಾರಿ ನೌಕರರಿಗೆ ಮುಂಗಡ ವೇತನ ಸೌಲಭ್ಯ; ಜೂ.1ರಿಂದಲೇ ಜಾರಿ
87 ಎನ್‌ಎಂ ಟಾರ್ಕ್ ಹೊಂದಿರುವ ಇದರ ಡಿಐ ಎಂಜಿನ್ ಅತ್ಯಂತ ಕೆಸರು ಪ್ರದೇಶದಲ್ಲಿಯೂ 800 ಲೀಟರ್‌ವರೆಗೆ ಟ್ರೈಲ್ಡ್ ಸ್ಪ್ರೇಯರ್‌ಗಳನ್ನು ಸುಲಭವಾಗಿ ಎಳೆಯುತ್ತದೆ. ಕಾರಿನ ಮಾದರಿಯಲ್ಲಿ ಆರಾಮದಾಯಕ ಗೇರ್ ಶಿಫ್ಟಿಂಗ್‌ಗಾಗಿ ಸಿಂಕ್ ಶಿಫ್ಟ್‌ಟ್ರಾನ್ಸ್‌ಮಿಷನ್ ಅಳವಡಿಸಿದ್ದು, ಉತ್ತಮ ಗ್ರೌಂಡ್ ಕ್ಲಿಯರೆನ್ಸ್‌ಗಾಗಿ ಸಂಪೂರ್ಣವಾಗಿ ಸೀಲ್ ಮಾಡಲಾದ 4 ಡಬ್ಲ್ಯೂಡಿ ಆಕ್ಸಲ್ ಇದೆ. ಇದು ಮಣ್ಣು ಆ್ಯಕ್ಸಲ್‌ಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.
ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಕೃಷಿ ಉಪಕರಣ ವಲಯದ ಅಧ್ಯಕ್ಷ ಹೇಮಂತ್ ಸಿಕ್ಕಾ ಮಾತನಾಡಿ, ಭಾರತೀಯ ಕೃಷಿಯಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ತೋಟಗಾರಿಕೆ ಯಾಂತ್ರೀಕರಣವನ್ನು ಈ ಟ್ರ್ಯಾಕ್ಟರ್ ಸುಗಮಗೊಳಿಸಲಿದೆ ಎಂದು ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಪ್ರವೇಶಿಸುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ಸದ್ಯಕ್ಕೆ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಉತ್ಪಾದನೆ ಮಾಡುತ್ತಿಲ್ಲ. ಕೃಷಿ ಕ್ಷೇತ್ರಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲು ಇನ್ನಷ್ಟುಸಮಯ ಬೇಕಾಗುತ್ತದೆ ಎಂದರು.
ಸ್ವರಾಜ್ ವಿಭಾಗದ ಸಿಇಒ ಹರೀಶ್ ಚವಾಣ್ ಮಾತನಾಡಿ, ಸ್ವರಾಜ್ ಟ್ರ್ಯಾಕ್ಟರ್ ಅತ್ಯಧಿಕ ಶಕ್ತಿ ಮತ್ತು ವಿಶ್ವಾಸಾರ್ಹತೆಗೆ ಹೆಸರು ವಾಸಿಯಾಗಿವೆ. ಈ ಹೊಸ ಶ್ರೇಣಿಯೊಂದಿಗೆ, ಆಧುನಿಕ ಕೃಷಿ ಪದ್ಧತಿಗಳು ಮತ್ತು ಅಧಿಕ ಮೌಲ್ಯದ ಬೆಳೆಗಳ ಮೂಲಕ ಕೃಷಿ ಉತ್ಪಾದಕತೆಯಲ್ಲಿ ತಮ್ಮ ಗುರಿಗಳನ್ನು ಸಾಧಿಸಲು ರೈತರಿಗೆ ನೆರವಾಗುವ ತಂತ್ರಜ್ಞಾವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮಾರಾಟ ವಿಭಾಗದ ಮುಖ್ಯಸ್ಥ ರಾಜೀವ್ ರಿಲೇನ್ ಮತ್ತು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರು ಸ್ವರಾಜ್ ಟ್ರ್ಯಾಕ್ಟರ್ ಬಗ್ಗೆ ಮಾತನಾಡಿದರು. ಈ ವೇಳೆ ಸಂಸ್ಥೆಯ ಸಿಬ್ಬಂದಿ ಇದ್ದರು.
ಕ್ರಿಕೆಟಿಗ ಧೋನಿ ಕೂಡ ಟ್ರ್ಯಾಕ್ಟರ್ ಗ್ರಾಹಕ
ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ಮಹೀಂದ್ರಾ ಕಂಪನಿಯ ಗ್ರಾಹಕರಾಗಿದ್ದಾರೆ. ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧೋನಿ, ಕೋವಿಡ್ ವೇಳೆ ಬಹಳಷ್ಟುಸಮಯವನ್ನು ನಾನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೆ. ಈ ವೇಳೆ ಕೃಷಿ ಚಟುವಟಿಕೆಗೆ ಶಕ್ತಿಶಾಲಿಯಾದ ಟ್ರ್ಯಾಕ್ಟರ್ ಅವಶ್ಯಕತೆ ಇದೆ ಎಂದು ಮನಗಂಡೆ. ಇದೀಗ ಸ್ವರಾಜ್ ಬಿಡುಗಡೆ ಮಾಡಿರುವ ಟ್ರ್ಯಾಕ್ಟರ್ ರೈತರಿಗೆ ಅನುಕೂಲಕಾರಿಯಾಗಿದೆ ಎಂದರು. ಇವರನ್ನು ಸ್ವರಾಜ್ ಟ್ರ್ಯಾಕ್ಟರ್‌ನ ರಾಯಭಾರಿಯಾಗಿ ನೇಮಿಸಲು ಸಂಸ್ಥೆ ನಿರ್ಧರಿಸಿದೆ.
‘ಸ್ವರಾಜ್ ಟಾರ್ಗೆಟ್ 630’ ಟ್ರ್ಯಾಕ್ಟರ್ ಅನ್ನು ಮುಂಬೈನ ಸೂಫಿಟಾಲ್ ಹೋಟೆಲ್‌ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದೆ. ಈ ವೇಳೆ ಗ್ರೂಪ್‌ನ ಹೇಮಂತ್ ಸಿಕ್ಕಾ, ಹರೀಶ್ ಚವಾಣ್, ರಾಜೀವ್ ರಿಲೇನ್, ರಾಜೇಶ್ ಜೆಜುರಿಕರ್ ಹಾಗೂ ಸಿಬ್ಬಂದಿ ಇದ್ದರು.
ವೈಶಿಷ್ಟ್ಯವೇನು?
1.ಟ್ರ್ಯಾಕ್ಟರ್‌ಗೆ 6 ವರ್ಷಗಳ ಕಾಲ ವಾರಂಟಿ
2. .5.35 ಲಕ್ಷ ಎಕ್ಸ್ ಶೋ ರೂಂ ದರ
3. 980 ಕೇಜಿ ಭಾರ ಎತ್ತುವ ಸಾಮರ್ಥ್ಯ
4. ರೇಡಿಯೇಟರ್ ದೊಡ್ಡದಾಗಿದ್ದು ಹೆಚ್ಚು ಬಿಸಿಯಾಗಲ್ಲ
5. ನಯವಾದ ಗೇರ್‌ಶಿಫ್‌್ಟಗಾಗಿ ಸಿಂಕ್ರೊಮೆಶ್ ಗೇರ್‌ಬಾಕ್ಸ್
ಪುಟ್ಟ ಉತ್ತರಾಧಿಕಾರಿಣಿ ಆಗಮನದ ಖುಷಿಯಲ್ಲಿ ಅಂಬಾನಿ ಕುಟುಂಬ; ಆಕಾಶ್, ಶ್ಲೋಕಾ ದಂಪತಿ ಮಗಳ ಹೆಸರೇನು?
ಡ್ಯುಯಲ್ ಪಿಟಿಒ 540 ಮತ್ತು 540 ಇ ಎಕಾನಮಿ ಪಿಟಿಒ ಆಲ್ಬರ್‌ನೇಟರ್‌ಗಳು ಮತ್ತು ವಾಟರ್ ಪಂಪ್‌ಗಳಂತಹ ಹಗುರವಾದ ಉಪಕರಣಗಳನ್ನು ಬಳಸುವಾಗ ಇಂಧನ ಉಳಿತಾಯಕ್ಕೆ ಅನುವು ಮಾಡಿಕೊಡುತ್ತದೆ. ಸ್ವರಾಜ್ ಟಾರ್ಗೆಟ್ 625ನ್ನು ಶೀಘ್ರದಲ್ಲೇ ಸಂಸ್ಥೆ ಪರಿಚಯಿಸಲಿದೆ.
ಸ್ಪ್ರೇ ಸೇವರ್ ಸ್ವಿಚ್ ತಂತ್ರಜ್ಞಾನವು ಪಿಟಿಒ ಆನ್ ಮತ್ತು ಆಫ್ ಅನ್ನು ನಿಯಂತ್ರಿಸಲಿದ್ದು, ತಿರುವುಗಳಲ್ಲಿ ದುಬಾರಿ ಸ್ಪ್ರೇಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಜತೆಗೆ 24 ಎಚ್‌ಪಿ ಸಾಮರ್ಥ್ಯ ಹೊಂದಿದೆ. ಸ್ವರಾಜ್ ಸಂಸ್ಥೆಯ ಉತ್ಪನ್ನಗಳ ಪಟ್ಟಿಗೆ ಈ ಹೊಸ ಸೇರ್ಪಡೆಯು ಕೃಷಿಯನ್ನು ಪರಿವರ್ತಿಸುವುದು, ಜೀವನವನ್ನು ಶ್ರೀಮಂತಗೊಳಿಸುವುದು ಮತ್ತು ನಮ್ಮನ್ನು ಭವಿಷ್ಯಕ್ಕೆ ಸನ್ನದ್ಧಗೊಳಿಸುವುದು ಎಂಬ ಕೃಷಿ ಉಪಕರಣ ವಲಯದ ಉದ್ದೇಶಕ್ಕೆ ಅನುಗುಣವಾಗಿದೆ.