Asianet Suvarna News Asianet Suvarna News

ಉದ್ಯೋಗಿಗಳಿಗೆ ಕಾರು ಗಿಫ್ಟ್ ಮಾಡಿದ್ದ ಉದ್ಯಮಿಯಿಂದ ಮುಂಬೈನಲ್ಲಿ 185 ಕೋಟಿಯ ಮನೆ ಖರೀದಿ!

* ಡೋಲಾಕಿಯಾ ಅವರ ಕಂಪನಿಯು ಮುಂಬೈನ ವರ್ಲಿ ಸೀ ಫೇಸ್ ನಲ್ಲಿ 185 ಕೋಟಿ ರೂ. ಮೊತ್ತಕ್ಕೆ ಪನ್ಹಾರ್ ಹೆಸರಿನ ಬಂಗಲೆಯನ್ನು ಖರೀದಿ

* 19,886 ಚದರ ಅಡಿ ವಿಸ್ತೀರ್ಣ ಹೊಂದಿದೆ ಈ ಬಂಗಲೆ

* ಪ್ರತಿ ಚದರ ಅಡಿಗೆ 93,000 ರೂಪಾಯಿ

Surat diamond baron Savji Dholakia buys Rs 185 crore Mumbai building pod
Author
Bangalore, First Published Aug 1, 2021, 3:43 PM IST

ಅಹಮದಾಬಾದ್(ಆ.01): ಸೂರತ್ ಮೂಲದ ವಜ್ರ ವ್ಯಾಪಾರಿ ಘನಶ್ಯಾಮ್ ಭಾಯ್ ಧಂಜಿ ಭಾಯ್ ಡೋಲಾಕಿಯಾ ಅವರ ಕಂಪನಿಯು ಮುಂಬೈನ ವರ್ಲಿ ಸೀ ಫೇಸ್ ನಲ್ಲಿ 185 ಕೋಟಿ ರೂ. ಮೊತ್ತಕ್ಕೆ ಪನ್ಹಾರ್ ಹೆಸರಿನ ಬಂಗಲೆಯನ್ನು ಖರೀದಿಸಿದೆ. ಇದು 19,886 ಚದರ ಅಡಿ ವಿಸ್ತೀರ್ಣ ಹೊಂದಿದೆ. ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಖರೀದಿಸಿದ ಈ ಬಂಗಲೆ ನೆಲ ಮಹಡಿ ಸೇರಿದಂತೆ 6 ಮಹಡಿಗಳನ್ನು ಒಳಗೊಂಡಿದೆ. ಈ ಐಷಾರಾಮಿ ಬಂಗಲೆಯನ್ನು ಜುಲೈ 30 ರಂದು ಖರೀದಿಸಲಾಗಿದೆ.

ಪ್ರತಿ ಚದರ ಅಡಿಗೆ 93,000 ರೂಪಾಯಿ

ಸ್ಥಳೀಯ ಬ್ರೇಕರ್ ಪ್ರಕಾರ, ಬಂಗಲೆಯ ಬೆಲೆ ಪ್ರತಿ ಚದರ ಅಡಿಗೆ 93,000 ರೂ. ಆಸ್ತಿಯನ್ನು ಎಸ್ಸಾರ್ ಗ್ರೂಪ್ ಒಡೆತನದ ಅರ್ಕೆ ಹೋಲ್ಡಿಂಗ್ಸ್ ಲಿಮಿಟೆಡ್ ಮಾರಾಟ ಮಾಡಿದೆ.

ಖರೀದಿಗೆ ಎರಡು ವಹಿವಾಟುಗಳು

185 ಕೋಟಿಗೆ ಎರಡು ಬಾರಿ ವಹಿವಾಟುಗಳು ನಡೆದಿವೆ. ಮೊದಲನೆಯದು 1,349 ಚದರ ಮೀಟರ್ ಭೂಮಿಗೆ 47 ಕೋಟಿ ರೂಪಾಯಿಗೆ ಭೂ ಭೋಗ್ಯದ ನಿಯೋಜನೆ. ಮುದ್ರಾಂಕ ಶುಲ್ಕವನ್ನು ಅದರ ಮೇಲೆ 5 ಶೇಕಡಾ ದರದಲ್ಲಿ ಪಾವತಿಸಲಾಗಿದೆ. ಜಮೀನಿನ ಮೇಲೆ ಸಾಲವಿತ್ತು, ಇದಕ್ಕಾಗಿ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಗೆ 36.5 ಕೋಟಿ ರೂ ಕೊಟ್ಟಿದೆ.

ಉದ್ಯೋಗಿಗಳಿಗೆ ಮರ್ಸಿಡಿಸ್ ಕೊಟ್ಟಿದ್ದ ಡೋಲಾಕಿಯಾ 

ವಜ್ರ ವ್ಯಾಪಾರಿ ಘನಶ್ಯಾಮ್ ಭಾಯಿ ಧನ್ಜಿ ಭಾಯ್ ಡೋಲಾಕಿಯಾ ಅವರ ಕುಟುಂಬವು 2018 ರಲ್ಲಿ ಗಮನ ಸೆಳೆದಿತ್ತು, ಧಂಜಿಭಾಯಿ ಡೋಲಾಕಿಯಾ ಅವರ ಮಗ ಸಾವ್ಜಿ ಡೋಲಾಕಿಯಾ ಅವರು ಮೂವರು ಉದ್ಯೋಗಿಗಳಿಗೆ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014 ರ ಆರಂಭದಲ್ಲಿ ಅವರು ದೀಪಾವಳಿ ಬೋನಸ್‌ನಲ್ಲಿ ತಮ್ಮ ಉದ್ಯೋಗಿಗಳಿಗೆ 500 ಫ್ಲಾಟ್‌ಗಳು, 525 ವಜ್ರದ ಆಭರಣಗಳನ್ನು ನೀಡಿದ್ದರು.

Follow Us:
Download App:
  • android
  • ios