Asianet Suvarna News Asianet Suvarna News

ಅಡ್ಮಿಷನ್ ನಿರಾಕರಿಸಿದ ಕಾಲೇಜಿನಲ್ಲೇ ಶಿಕ್ಷಕರ ದಿನಾಚರಣೆಗೆ ಉಪನ್ಯಾಸ ನೀಡಿದ್ದ ಗೌತಮ್ ಅದಾನಿ!

ಉದ್ಯಮಿ ಗೌತಮ್ ಅದಾನಿ ಪ್ರತಿಷ್ಠಿತ ಕಾಲೇಜಿನಲ್ಲಿ ಅಡ್ಮಿಷನ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ರಿಜೆಕ್ಟ್ ಆಗಿತ್ತು. ಬಳಿ ಅದಾನಿ ಉದ್ಯಮ ಸಾಮ್ರಾಜ್ಯ, ಯಶಸ್ಸು ನೋಡಿದ ಅದೇ ಕಾಲೇಜು ಶಿಕ್ಷಕರ ದಿನಾಚರಣೆಗೆ ಅದಾನಿಯನ್ನು ಉಪನ್ಯಾಸ ನೀಡುವಂತೆ ಆಹ್ವಾನ ನೀಡಿದ ಘಟನೆಯೊಂದು ಬಹಿರಂಗವಾಗಿದೆ.

Success story Gautam adani delivered lecture after 4 decade where his college admission rejected ckm
Author
First Published Sep 5, 2024, 10:35 PM IST | Last Updated Sep 5, 2024, 10:35 PM IST

ಮುಂಬೈ(ಸೆ.05) ದೇಶದೆಲ್ಲೆಡೆ ಶಿಕ್ಷಕರ ದಿನಾಚರಣೆ ಆಚರಿಸಲಾಗಿದೆ. ಇದೇ ವೇಳೆ ಗೌತಮ್ ಅದಾನಿ ಶಿಕ್ಷಕರ ದಿನಾಚರಣೆಗೆ ಉಪನ್ಯಾಸ ನೀಡಿದ ವಿಶೇಷ ಘಟನೆಯೊಂದು ಬಹಿರಂಗವಾಗಿದೆ. ತನಗೆ ಅಡ್ಮಿಷನ್ ನಿರಾಕರಿಸದ ಕಾಲೇಜಿನಲ್ಲೇ ಗೌತಮ್ ಅದಾನಿ ಉಪನ್ಯಾಸ ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಖುದ್ದು ಅದಾನಿ ಭೇಟಿಯಾಗಿ ಆಹ್ವಾನ ನೀಡಿತ್ತು. ಬಳಿಕ ಅದಾನಿ ಉಪನ್ಯಾಸ ನೀಡಿದ್ದರು. ಆದರೆ ಈ ರೋಚಕ ಘಟನೆ ಹಿಂದೆ ದೈತ್ಯ ಉದ್ಯಮ ಸಾಮ್ರಾಜ್ಯ ಕಟ್ಟಿದ ಕತೆ ಇದೆ.

ಗೌತಮ್ ಅದಾನಿ ತಮ್ಮ 16ನೇ ವಯಸ್ಸಿಗೆ ದುಡಿಮೆ ಆರಂಭಿಸಿದ್ದರು. ಡೈಮಂಡ್ ಸ್ಟೋರ್‌ನಲ್ಲಿ ವೃತ್ತಿ ಆರಂಭಿಸಿದ್ದ ಗೌತಮ್ ಅದಾನಿ, 1977ರ ಅಸುಪಾಸಿನಲ್ಲಿ  ಮುಂಬೈನ ಸಿಟಿ ಜೈಹಿಂದ್ ಕಾಲೇಜಿನಲ್ಲಿ ಅಡ್ಮಿಷನ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.  ಇದೇ ಕಾಲೇಜಿನಲ್ಲಿ ಗೌತಮ್ ಅದಾನಿ ಸಹೋದರ ಪದವಿ ಪಡೆದಿದ್ದರು. ಹೀಗಾಗಿ ಗೌತಮ್ ಅದಾನಿ ಕೂಡ ಪದವಿಗಾಗಿ ಈ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿದ್ದರು. 16ನೇ ವಯಸ್ಸಿಗೆ ಕೆಲಸ ಮಾಡುತ್ತಿದ್ದ ಅದಾನಿ ಪದವಿ ಪೂರೈಸಲು ನಿರ್ಧರಿಸಿದ್ದರು.

ಹಲವರ ನಡುಗಿಸಿದ ಗೌತಮ್ ಅದಾನಿ ನಿರ್ಧಾರ, 8,388 ಕೋಟಿ ರೂಗೆ 3 ಕಂಪನಿ ಖರೀದಿಗೆ ತಯಾರಿ!

ಆದರೆ ಸಿಟಿ ಕಾಲೇಜು ಗೌತಮ್ ಅದಾನಿ ಅಡ್ಮಿಷನ್ ನೀಡಲು ನಿರಾಕರಿಸಿತ್ತು. ಕಾಲೇಜಿನಲ್ಲಿ ಅಡ್ಮಿಷನ್ ಸಿಗದೆ ಕಾರಣ ಅದಾನಿ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಬದಲಾಗಿ ಅದಾನಿ ಸಂಪೂರ್ಣವಾಗಿ ವೃತ್ತಿಯಲ್ಲಿ ತೊಡಗಿಕೊಂಡರು. 2 ವರ್ಷ ಮುಂಬೈನ ಡೈಮಂಡ್ ಕಂಪನಿಯಲ್ಲಿ ಕೆಲಸ ಮಾಡಿದ ಗೌತಮ್ ಅದಾನಿ ಬಳಿಕ ತವರಿಗೆ ಮರಳಿದ್ದರು. ಗುಜರಾತ್‌ನಲ್ಲಿ ಸಹೋದರ ಆರಂಬಿಸಿದ ಪ್ಯಾಕಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಆರಂಭಿಸಿದರು. 

1998ರಲ್ಲಿ ಗೌತಮ್ ಅದಾನಿ ಟ್ರೇಡಿಂಗ್ ಇನ್ ಕಮೋಡಿಟಿಸ್ ಆರಂಭಿಸಿದರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಬಂದರು, ಅದಿರು, ವಿದ್ಯುತ್, ಗ್ಯಾಸ್, ಮರು ನವೀಕರಣ ಇಂಧನ, ಸಿಮೆಂಟ್, ರಿಯಲ್ ಎಸ್ಟೇಟ್, ಡೇಟಾ ಸೆಂಟರ್, ಮಾಧ್ಯಮ ರಂಗ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಅದಾನಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. 

ಅದಾನಿ ವಿಶ್ವದ ಹಾಗೂ ಭಾರತದ ಶ್ರೀಮಂತ ಉದ್ಯಮಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಈ ವೇಳೆ ಮುಂಬೈನ ಸಿಟಿ ಕಾಲೇಜು ಇದೇ ಗೌತಮ್ ಅದಾನಿಯನ್ನು ಶಿಕ್ಷಕರ ದಿನಾಚರಣೆಗೆ ಉಪನ್ಯಾಸ ನೀಡಲು ಆಹ್ವಾನ ನೀಡಿತ್ತು. 4 ದಶಕಗಳ ಬಳಿಕ ಯಾವ ಕಾಲೇಜು ಗೌತಮ್ ಅದಾನಿ ಅಡ್ಮಿಷನ್ ನಿರಾಕರಿಸಿತ್ತೋ, ಅದೇ ಕಾಲೇಜು ಗೌತಮ್ ಅದಾನಿಯನ್ನು ಉಪನ್ಯಾಸ ನೀಡಲು ಆಹ್ವಾನಿಸಿತ್ತು.

ಶ್ರೀಮಂತ ಉದ್ಯಮಿ ಅದಾನಿ ಬಳಿ ಇರುವ ಐಷಾರಾಮಿ ಕಾರುಗಳೆಷ್ಟು? ಇಲ್ಲಿದೆ ಲಿಸ್ಟ್!

ಕಾರ್ಯಕ್ರಮದಲ್ಲಿ ಗೌತಮ್ ಆದಾನಿಯನ್ನು ಜೈ ಹಿಂದ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘಟದ ಅಧ್ಯಕ್ಷ ವಿಕ್ರಮ ನಂಕಿನಿ ಸ್ವಾಗತಿಸಿದ್ದರು. ಈ ವೇಳೆ ಅದಾನಿಗೆ ಅಡ್ಮಿಷನ್ ನಿರಾಕರಿಸಿದ ವಿಚಾರ ಬೆಳಕಿಗೆ ತಂದಿದ್ದರು. ಇಷ್ಟೇ ಅಲ್ಲ ಇದು ಅಡ್ಮಿಷನ್ ನಿರಾಕರಿಸಿದ್ದು ಅದೃಷ್ಠವೋ, ದುರಾದೃಷ್ಠವೋ ಗೊತ್ತಿಲ್ಲ. ಆದರೆ ನಿರಾಕರಿಸಿದ ಕಾರಣ ಅದಾನಿ ಸಂಪೂರ್ಣ ಅವಧಿಗೆ ವೃತ್ತಿಯಲ್ಲಿ ತೊಡಗಿಕೊಂಡರು. ಇದರಿಂದ ಇಂದು ಶ್ರೀಮಂತ ಉದ್ಯಮಿಯಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ್ದಾರೆ ಎಂದಿದ್ದರು.


 

Latest Videos
Follow Us:
Download App:
  • android
  • ios