Cars
ಗೌತಮ್ ಅದಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಾನಿ ಬಳಿ ಹಲವು ಐಷಾರಾಮಿ ಕಾರುಗಳಿವೆ.
ಅದಾನಿ ಕುಟುಂಬದ ಆಸ್ತಿ ಅಂಬಾನಿ ಕುಟುಂಬಕ್ಕಿಂತ ₹1,47,100 ಕೋಟಿ ಹೆಚ್ಚಾಗಿದೆ.
ಗೌತಮ್ ಅದಾನಿ ಅವರ ಕುಟುಂಬದ ಆಸ್ತಿ ₹11.62 ಲಕ್ಷ ಕೋಟಿ. ಕಳೆದ ಒಂದು ವರ್ಷದಲ್ಲಿ ಆಸ್ತಿ ಶೇ.95 ರಷ್ಟು ಹೆಚ್ಚಾಗಿದೆ. ಅಂದರೆ ₹5,65,503 ಕೋಟಿ ಹೆಚ್ಚಾಗಿದೆ.
ಅದಾನಿ ಅವರು ಅಪಾರ ಸಂಪತ್ತಿನ ಜೊತೆಗೆ ಕಾರು ಸಂಗ್ರಹವನ್ನೂ ಹೊಂದಿದ್ದಾರೆ. ಅವರ ಕಾರು ಸಂಗ್ರಹದಲ್ಲಿ Rolls Royce Ghost, BMW 7-Series, Audi Q7, Ferrari California ಸೇರಿವೆ.
Ferrari California ನ ಎಕ್ಸ್ ಶೋ ರೂಂ ಬೆಲೆ ₹3.45 ಕೋಟಿ. ಇದು 4297 ಸಿಸಿ ಎಂಜಿನ್ ಹೊಂದಿದೆ. ಈ ಕಾರು 9.52 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಟಾಪ್ ಸ್ಪೀಡ್ 310 ಕಿ.ಮೀ.
Audi Q7 ನ ಬೆಲೆ ₹97.84 ಲಕ್ಷ. ಇದು 2995 ಸಿಸಿ ಎಂಜಿನ್ ಹೊಂದಿದೆ. ಈ ಕಾರಿನ ಟಾಪ್ ಸ್ಪೀಡ್ 250 ಕಿ.ಮೀ. ಈ ಕಾರು 11.2 ಕಿ.ಮೀ ಮೈಲೇಜ್ ನೀಡುತ್ತದೆ.
BMW 7-Series ನ ಎಕ್ಸ್ ಶೋ ರೂಂ ಬೆಲೆ ₹1.85 ಕೋಟಿ. ಇದು 2993 ಸಿಸಿ ಎಂಜಿನ್ ಹೊಂದಿದೆ. ಈ ಕಾರಿನ ಟಾಪ್ ಸ್ಪೀಡ್ 250 ಕಿ.ಮೀ.
ರೋಲ್ಸ್ ರಾಯ್ಸ್ ಘೋಸ್ಟ್ ಬೆಲೆ ₹7.95 ಕೋಟಿ. ಇದರ ಟಾಪ್ ಸ್ಪೀಡ್ 250 ಕಿ.ಮೀ. ಈ ಕಾರು 6.33 ಕಿ.ಮೀ ಮೈಲೇಜ್ ನೀಡುತ್ತದೆ.