ನವದೆಹಲಿ(ನ.29): ಫಾರ್ಮಾ ಕಂಪನಿಗಳ ಮಾಫಿಯಾ ದೇಶದ ವೈದ್ಯಕೀಯ ಕ್ಷೇತ್ರವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ತಮ್ಮ ಕಂಪನಿಯ ಔಷಧಿಗಳ ಮಾರಾಟಕ್ಕೆ ಕೆಲವು ಫಾರ್ಮಾ ಕಂಪನಿಗಳು ವೈದ್ಯರಿಗೆ ಲಂಚ ನೀಡುವುದು ಸಾಮಾನ್ಯ ಸಂಗತಿ. ವಿದೇಶ ಯಾತ್ರೆ, ಗೃಹೋಪಯೋಗಿ ವಸ್ತುಗಳು, ಕಾರು, ಮನೆ ಹೀಗೆ ತಮ್ಮದೇ ಕಂಪನಿಯ ಔಷಧಿಗಳನ್ನು ರೋಗಿಗಳಿಗೆ ಬರೆದು ಕೊಡಲು ವೈದ್ಯರಿಗೆ ಲಂಚ ನೀಡಲಾಗುತ್ತದೆ.

ಆದರೆ ಕೆಲವು ಪಾರ್ಮಾ ಕಂಪನಿಗಳ ವೈದ್ಯಕೀಯ ಪ್ರತಿನಿಧಿಗಳು ಹೇಳುವಂತೆ, ತಮ್ಮ ಔಷಧಿಗಳ ಮಾರಾಟಕ್ಕೆ ಕೆಲವು ಫಾರ್ಮಾ ಕಂಪನಿಗಳು ವೈದ್ಯರಿಗೆ ಮಹಿಳೆಯರನ್ನು ಪೂರೈಸುತ್ತಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.


ಸಪೋರ್ಟ್ ಫಾರ್ ಅಡ್ವೋಕಸಿ ಆ್ಯಂಡ್ ಟ್ರೇನಿಂಗ್ ಟು ಹೆಲ್ತ್ ಇನಿಶಿಯೇಟಿವ್ಸ್(SATHI) ಸಂಸ್ಥೆಯ ವರದಿ ಪ್ರಕಾರ, ಕೆಲವು ಫಾರ್ಂಆ ಕಂಪನಿಗಳು ಲಂಚದ ರೂಪದಲ್ಲಿ ವೈದ್ಯರಿಗೆ ಮಹಿಳೆಯರನ್ನು ಪೂರೈಸುತ್ತಾರೆ ಎನ್ನಲಾಗಿದೆ.

ಸುಮಾರು 50 ವೈದ್ಯಕೀಯ ಪ್ರತಿನಿಧಿ(MR)ಗಳನ್ನು ಸಂದರ್ಶನಕ್ಕೆ ಒಳಪಡಿಸಿದಾಗ, ತಮ್ಮ ಕಂಪನಿ ವೈದ್ಯರಿಗೆ ಲಂಚದ ರೂಪದಲ್ಲಿ ಮಹಿಳೆಯರನ್ನು ಪೂರೈಸುತ್ತಾರೆ ಎಂಬ ಆಘಾತಕಾರಿ ಅಂಶ ಹೊರಗೆಡವಿದ್ದಾರೆ ಎನ್ನಲಾಗಿದೆ.