ಷೇರು ಮಾರುಕಟ್ಟೆಯಲ್ಲಿನ ಇತ್ತೀಚಿನ ಕುಸಿತದಿಂದ ಅನೇಕ ಹೂಡಿಕೆದಾರರ ಪೋರ್ಟ್ಫೋಲಿಯೊ ಕೆಂಪಾಗಿದೆ. ದುರ್ಬಲ ಷೇರುಗಳ ಮೇಲಿನ ಹೂಡಿಕೆ ಮತ್ತು ಆಲೋಚನೆ ಇಲ್ಲದೆ ಹೂಡಿಕೆ ಮಾಡುವುದು ಇದಕ್ಕೆ ಮುಖ್ಯ ಕಾರಣ. ಪೋರ್ಟ್ಫೋಲಿಯೊವನ್ನು ವೈವಿಧ್ಯಮಯವಾಗಿರಿಸಿ, ಬಲಿಷ್ಠ ಷೇರುಗಳಲ್ಲಿ ಹೂಡಿಕೆ ಮಾಡಿ, ಮತ್ತು ಪೆನ್ ಸ್ಟಾಕ್ ಗಳಿಂದ ದೂರವಿರಿ. ನಷ್ಟವಾಗುತ್ತಿರುವ ಷೇರುಗಳನ್ನು ತಕ್ಷಣ ಮಾರಾಟ ಮಾಡದೆ, ಬೆಲೆ ಹೆಚ್ಚಾಗುವವರೆಗೆ ಕಾಯಿರಿ.

ಹೋಳಿ (Holi) ಯಲ್ಲಿ ಬಣ್ಣದೋಕುಳಿ ಸಾಮಾನ್ಯ. ಬೇರೆ ಬೇರೆ ಬಣ್ಣಗಳನ್ನು ನಾವು ಈ ಸಮಯದಲ್ಲಿ ಕಾಣ್ಬಹುದು. ಆದ್ರೆ ಇಲ್ಲಿ ಮಾತ್ರ ಬರೀ ಒಂದು ಬಣ್ಣ (color) ಕಾಣ್ತಿದೆ. ಅದು ಕೆಂಪು ಬಣ್ಣ. ಅದ್ರ ಬಣ್ಣ ಯಾವಾಗ ಬದಲಾಗುತ್ತೆ ಅಂತ ಜನ ಕಾಯ್ತಿದ್ದಾರೆ. ನಾವು ಹೇಳ್ತಿರೋದು ಹೋಳಿ ಮಾರ್ಕೆಟ್ ಬಗ್ಗೆ ಅಲ್ಲ, ಷೇರು ಮಾರುಕಟ್ಟೆ (stock market) ಬಗ್ಗೆ. ಅನೇಕ ಜನರ ಪೋರ್ಟ್ ಫೋಲಿಯೋ ಕೆಂಪಾಗಿದೆ. ಅದ್ರಲ್ಲೂ ಈ ಪಟ್ಟಿಯಲ್ಲಿ ಹೊಸ ಹೂಡಿಕೆದಾರರ ಸಂಖ್ಯೆ ಹೆಚ್ಚಿದೆ.

ಕಳೆದ ಆರು ತಿಂಗಳಿಂದ ನೀವು ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಾಣ್ತಿದ್ದೀರಿ. ಅನೇಕರ ಪೋರ್ಟ್ ಫೋಲಿಯೋ ಬಣ್ಣ ಕಳೆದುಕೊಂಡಿದೆ. ಕಳೆದ ಆರು ತಿಂಗಳಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇಕಡಾ 15ಕ್ಕಿಂತ ಹೆಚ್ಚು ಇಳಿದಿದೆ. ಅನೇಕ ಪೋರ್ಟ್ ಫೋಲಿಯೋ 30 -40ರಷ್ಟು ಇಳಿದಿದೆ. ಕೆಲ ಹೊಸ ಹೂಡಿಕೆದಾರರ ಪೋರ್ಟ್ ಫೋಲಿಯೋ 50ರಷ್ಟು ಇಳಿಕೆ ಕಂಡಿದೆ. ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡಾಗ ಅದು ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸದ್ಯ ಮೂಲಭೂತವಾಗಿ ಬಲಿಷ್ಠವಾಗಿಲ್ಲದ ಷೇರುಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಇಂಥ ಷೇರುಗಳು ಶೇಕಡಾ 70ರಷ್ಟು ಕುಸಿತ ಕಂಡಿವೆ. 

ಈ ಬ್ಯುಸಿನೆಸ್‌ನಲ್ಲಿ 95% ಸಕ್ಸಸ್ ರೇಟ್; ದಿನಕ್ಕೆ 2 ರಿಂದ 3 ಸಾವಿರ ರೂಪಾಯಿ; ಕಡಿಮೆ ಬಂಡವಾಳ, ಹೆಚ್ಚು ಲಾಭ!

ಪೋರ್ಟ್ ಫೋಲಿಯೋ ಕೆಂಪಾಗಲು ಕಾರಣ? : ನಿಮ್ಮ ಪೋರ್ಟ್ ಫೋಲಿಯೋ ಬಣ್ಣ ಕೆಂಪಾಗಲು ಕಾರಣ ಏನು ಅಂತ ನಿಮ್ಮನ್ನು ಕೇಳಿದ್ರೆ, ಎಲ್ಲ ಷೇರುಗಳು ಇಳಿದಿವೆ, ಹಾಗಾಗಿ ನಾವು ನಷ್ಟದಲ್ಲಿದ್ದೇವೆ ಅಂತ ಹೇಳ್ತೀರಿ. ಇದು ಸರಿಯಾದ ಉತ್ತರ ಆದ್ರೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅದಕ್ಕೆ ಕಾರಣ ಚಿಲ್ಲರೆ ಹೂಡಿಕೆದಾರರು ಬಲಿಷ್ಠವಿಲ್ಲದ ಷೇರಿನ ಮೇಲೆ ಹೂಡಿಕೆ ಮಾಡುವುದಾಗಿದೆ. ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಾಗ ಬಹುತೇಕ ಎಲ್ಲ ಷೇರುಗಳು ಏರುತ್ತವೆ. ಆಸೆಗೆ ಚಿಲ್ಲರೆ ಹೂಡಿಕೆದಾರರು ಸಣ್ಣ ಷೇರಿನ ಮೇಲೆ ಹಣ ಹೂಡಿಕೆ ಮಾಡುತ್ತಾರೆ. ಆದ್ರೆ ಮಾರುಕಟ್ಟೆ ಕುಸಿದಾಗ ಅವುಗಳ ಪರಿಸ್ಥಿತಿ ಹೀನಾಯವಾಗುತ್ತದೆ. 

ಪೋರ್ಟ್ ಫೋಲಿಯೋ ಬಣ್ಣ ಬದಲಾಗಲು ಇನ್ನೊಂದು ಕಾರಣ, ನೀವು ಆಲೋಚನೆ ಮಾಡದೆ ಹೂಡಿಕೆ ಮಾಡುವುದಾಗಿದೆ. ಕಡಿಮೆ ಬೆಲೆಗೆ ಷೇರು ಸಿಗ್ತಿದೆ ಎನ್ನುವ ಕಾರಣಕ್ಕೆ ಅನೇಕರು ಪೂರ್ವಾಪರ ಆಲೋಚನೆ ಮಾಡದೆ ಷೇರುಗಳನ್ನು ಖರೀದಿ ಮಾಡ್ತಾರೆ. ಷೇರು ಪೇಟೆಯಲ್ಲಿ ಇಳಿಕೆಯಾದಾಗ ಅದ್ರ ಪ್ರಭಾವ ಇವುಗಳ ಮೇಲೆ ಬೇಗ ಕಾಣಿಸಿಕೊಳ್ಳುತ್ತದೆ. ಏರಿಕೆಯಾದಾಗ್ಲೂ ಇವು ನಿಧಾನಗತಿಯಲ್ಲಿ ಏರುತ್ತವೆ. ಅಲ್ಲದೆ ದೊಡ್ಡ ಹೂಡಿಕೆದಾರರು ಇದ್ರಿಂದ ಸದಾ ದೂರವಿರ್ತಾರೆ. ಕಂಪನಿ ಬಗ್ಗೆ ಸ್ಪಷ್ಟತೆ ಇರದ ಕಾರಣ ಹಾಗೂ ಕಂಪನಿ ಬಲಿಷ್ಠವಾಗಿರದ ಕಾರಣ ಅನೇಕರು ಈ ಷೇರುಗಳನ್ನು ಖರೀದಿ ಮಾಡುವುದಿಲ್ಲ. ಆದ್ರೆ ಹೊಸ ಹೂಡಿಕೆದಾರರು ಇಂಥ ಷೇರುಗಳನ್ನು ಹೆಚ್ಚಿನ ಮಟ್ಟದಲ್ಲಿ ಖರೀದಿ ಮಾಡ್ತಾರೆ. ಇದ್ರ ಬೆಲೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ಇಂಥ ಷೇರು ಖರೀದಿ ಮಾಡುವ ಹೂಡಿಕೆದಾರರು ನಂತ್ರ ತೊಂದರೆಗೆ ಸಿಲುಕ್ತಾರೆ. 

ಪಿಎಂ ಕಿಸಾನ್ ಯೋಜನೆ ಅಂದ್ರೆ ಏನು? ಯಾರು ಉಪಯೋಗ ಪಡೆಯಬಹುದು? ಹೇಗೆ ರಿಜಿಸ್ಟರ್

ಪೋರ್ಟ್ ಫೋಲಿಯೋ ಬಣ್ಣ ಹಸಿರಾಗಬೇಕು ಅಂದ್ರೆ ಏನು ಮಾಡಬೇಕು? : 
• ಮೊದಲು ನಿಮ್ಮ ಯಾವ ಷೇರು ದುರ್ಬಲವಾಗಿದೆ, ಯಾವುದು ಬಲವಾಗಿದೆ ಎಂಬುದನ್ನು ಪಟ್ಟಿ ಮಾಡಿ. ನಂತ್ರ ಯಾವುದ್ರಲ್ಲಿ ಹೆಚ್ಚು ನಷ್ಟವಾಗಿದೆ ಎಂಬುದನ್ನು ಪಟ್ಟಿ ಮಾಡಿ. ನಷ್ಟವಾಗ್ತಿದೆ ಎಂಬ ಷೇರುಗಳನ್ನು ತಕ್ಷಣ ಮಾರಾಟ ಮಾಡಬೇಡಿ. ಷೇರು ಮಾರುಕಟ್ಟೆ ಸ್ಥಿತಿ ಇದೇ ರೀತಿ ಇರೋದಿಲ್ಲ. ಹಾಗಾಗಿ ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಬೇಕು. ನಿಮ್ಮ ಷೇರಿನ ಬೆಲೆ ಹೆಚ್ಚಾಗುತ್ತಿದ್ದಂತೆ ಅದನ್ನು ಮಾರಾಟ ಮಾಡಿ. ಅದ್ರಲ್ಲಿ ಬಂದ ಹಣವನ್ನು ಮತ್ತೆ ಅದೇ ಷೇರು ಖರೀದಿಗೆ ಬಳಸಬೇಡಿ. ಬಲವಾಗಿರುವ ಷೇರು ಖರೀದಿಗೆ ಬಳಸಿ.
• ಪೋರ್ಟ್‌ಫೋಲಿಯೊ ವೈವಿಧ್ಯಮಯವಾಗಿರಬೇಕು, ಅಂದರೆ, ಅದು ಬ್ಲೂ ಚಿಪ್ ಕಂಪನಿಗಳು, ಮಿಡ್‌ಕ್ಯಾಪ್‌ಗಳು ಮತ್ತು ಸ್ಮಾಲ್‌ಕ್ಯಾಪ್‌ಗಳನ್ನು ಒಳಗೊಂಡಿರಬೇಕು. ಹೊಸ ಹೂಡಿಕೆದಾರರು ಹೆಚ್ಚಾಗಿ ಲಾರ್ಜ್ ಕ್ಯಾಪ್‌ಗಳಲ್ಲಿ ಹೂಡಿಕೆ ಮಾಡಬೇಕು. ಉದಾಹರಣೆಗೆ, ಶೇ. 50 ರಿಂದ 60 ರಷ್ಟು ಹೂಡಿಕೆಯನ್ನು ಲಾರ್ಜ್ ಕ್ಯಾಪ್‌ನಲ್ಲಿ, ಶೇ. 30 ರಷ್ಟು ಹೂಡಿಕೆಯನ್ನು ಮಿಡ್ ಕ್ಯಾಪ್‌ನಲ್ಲಿ ಮತ್ತು ಉಳಿದ ಶೇ. 20 ರಷ್ಟು ಹೂಡಿಕೆಯನ್ನು ಸ್ಮಾಲ್ ಕ್ಯಾಪ್ ನಲ್ಲಿ ಮಾಡಬೇಕು. 
• ಪೆನ್ ಸ್ಟಾಕ್ ಗಳಿಂದ ದೂರ ಇರಿ. ಬೇಗ ಹಣ ಮಾಡಬಹುದು ಅಂತ ಇದ್ರಲ್ಲಿ ನಂಬಲಾಗುತ್ತದೆ. ಆದ್ರೆ ಅದು ಸುಳ್ಳು. ಅನೇಕ ಬಾರಿ ಷೇರುದಾರರು ಇದ್ರಲ್ಲು ಹೂಡಿಕೆ ಮಾಡಿ ಬಂಡವಾಳವನ್ನೂ ಕಳೆದುಕೊಳ್ತಾರೆ. ಹಾಗಾಗಿ 10- 20 ರೂಪಾಯಿ ಷೇರು ಖರೀದಿಗೆ ಕೈ ಹಾಕಬೇಡಿ.