Asianet Suvarna News Asianet Suvarna News

ಷೇರು ಮಾರುಕಟ್ಟೆಗೆ ಕಷ್ಟ: ಒಂದೇ ದಿನ ಎಷ್ಟೊಂದು ನಷ್ಟ?

ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ! ಬರೋಬ್ಬರಿ 2.72 ಲಕ್ಷ ಕೋಟಿ ರೂ. ನಷ್ಟ ದಾಖಲೆ! ದಿಡೀರ್ ಕುಸಿತಕ್ಕೆ ಕಂಗಾಲಾದ ಹೂಡಿಕೆದಾರರು! ಕಚ್ಚಾ ತೈಲ ಮತ್ತು ವಣಿಜ್ಯ ಸಮರ ಕುಸಿತಕ್ಕೆ ಕಾರಣ 

Stock investors lose Rs 2.72 lakh cr in two days of market fall
Author
Bengaluru, First Published Sep 19, 2018, 2:33 PM IST

ಮುಂಬೈ(ಸೆ.19): ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಸತತ ಎರಡನೇ ದಿನವೂ ಕುಸಿತ ದಾಖಲಾಗಿದ್ದು ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ  2.72 ಲಕ್ಷ ಕೋಟಿ ರೂ.ಗಳಷ್ಟು  ನಷ್ಟವಾಗಿದೆ.

ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ಇ ಸೂಚ್ಯಂಕ ಸುಮಾರು 800 ಅಂಕಗಳ ಕುಸಿತ ದಾಖಲಿಸಿದೆ. ಸೋಮವಾರ 505  ಪಾಯಿಂಟ್ ಕುಸಿತ ಕಂಡು 37,585.51ಕ್ಕೆ ತಲುಪಿದ್ದ ಸೂಚ್ಯಂಕ ಮಂಗಳವಾರ ಸಹ 295 ಪಾಯಿಂಟ್ ಕುಸಿತದೊಡನೆ 37,290  ಗೆ ತಲುಪಿದೆ.

ಷೇರುಗಳ ತೀವ್ರ ಕುಸಿತದಿಂದಾಗಿ, ಬಿಎಸ್ಇ ಪಟ್ಟಿಯಲ್ಲಿರುವ ಕಂಪನಿಗಳ ಮಾರುಕಟ್ಟೆಯ ಬಂಡವಾಳ ರೂ 2,72,549.15 ಕೋಟಿಯಿಂದ  1,53,64,470 ಕೋಟಿ ರೂ.ಗೆ ಇಳಿದಿದೆ.

ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ವಾಣಿಜ್ಯ ಸಮರಗಳ ಕಾರಣ ಷೇರು ವಹಿವಾಟಿನಲ್ಲಿ ತಲ್ಲಣ ಸೃಷ್ಟಿಯಾಗಿದೆ. ಯುಎಸ್ ಮತ್ತು ಚೀನಾ ನಡುವಿನ ವ್ಯವಹಾರ ಸುಂಕದ ಕ್ಕಟ್ಟಿನಿಂದಾಗಿ ಮತ್ತು ರೂಪಾಯಿ ಮೌಲ್ಯ ಇಳಿಕೆ ಈ ಎಲ್ಲವೂ ಹೂಡಿಕೆದಾರರ ಭಾವನೆಗಳ ಮೇಲೆ ಪ್ರಭಾವ ಬೀರಿದೆ.

ಎಸ್ ಬಿಐ , ಟಾಟಾ ಮೋಟಾರ್ಸ್, ಬಜಾಜ್ ಆಟೋ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿ 24 ಷೇರುಗಳು ಭಾರೀ ಕುಸಿತ ದಾಖಲಿಸಿದೆ. ಇಂದಿನ ವಹಿವಾಟಿನಲ್ಲಿ ಬಿಎಸ್ಇದಲ್ಲಿ 1,805 ಷೇರುಗಳು ಕುಸಿತ ದಾಖಲಿಸಿದರೆ 881 ಷೇರುಗಳು ಏರುಗತಿ ಕಂಡಿದೆ.

Follow Us:
Download App:
  • android
  • ios