ಹಂತ ಹಂತವಾಗಿ SBI ಡೆಬಿಟ್ ಕಾರ್ಡ್ ರದ್ದು!

ಡಿಜಿಟಲ್‌ ಹಣ ಪಾವತಿ ಉತ್ತೇಜಿಸಲು ಎಸ್‌ಬಿಐ ಡೆಬಿಟ್‌ ಕಾರ್ಡ್‌ ರದ್ದು| ಡಿಜಿಟಲ್‌ ಪಾವತಿ ಉತ್ತೇಜಿಸಲು ಹಾಗೂ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಈ ನಿರ್ಧಾರ

State Bank of India Plans to Eliminate Debit Cards From Banking System

ಮುಂಬೈ[ಆ.20]: ಡಿಜಿಟಲ್‌ ಪಾವತಿ ಉತ್ತೇಜಿಸಲು ಹಾಗೂ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಮುಂದಾಗಿರುವ ಬ್ಯಾಂಕಿಂಗ್‌ ದೈತ್ಯ ಡೆಬಿಟ್‌ ಕಾರ್ಡ್‌ ಸೇವೆಯನ್ನು ಹಂತಹಂತವಾಗಿ ಕಡ ಸ್ಥಗಿತಗೊಳಿಸಲು ನಿರ್ಧಾರ ಮಾಡಿದೆ.

ಸೋಮವಾರ ಇಲ್ಲಿ ನಡೆದ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌, ದೇಶದಲ್ಲಿ ಬರೋಬ್ಬರಿ 90 ಕೋಟಿ ಡೆಬಿಟ್‌ ಕಾರ್ಡ್‌ಗಳಿದ್ದು, 3 ಕೋಡಿ ಕ್ರೆಡಿಟ್‌ ಕಾರ್ಡ್‌ಗಳಿವೆ. ಇ- ಪಾವತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ , ಡೆಬಿಟ್‌ ಕಾರ್ಡ್‌ ಸೇವೆಯನ್ನು ಹಂತಹಂತವಾಗಿ ರದ್ದುಗೊಳಿಸಲು ನಿರ್ಧಾರ ಮಾಡಿದ್ದೇವೆ. ಇದು ನಮ್ಮಿಂದ ಸಾಧ್ಯ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಡ್ರಾ ಮಾಡಿದ ಹಣ ಬರದಿದ್ದರೆ ಪರಿಹಾರ: ಆರ್‌ಬಿಐ ನೀತಿ!

ಡಿಜಿಟಲ್‌ ಬ್ಯಾಂಕಿಂಗ್‌ನ ಭಾಗವಾಗಿ ನಾವು ಯೋನೋ ಕ್ಯಾಶ್‌ ಪಾಯಿಂಟ್‌ಗಳನ್ನು ಪರಿಚಯಿಸಿದ್ದು, ಅದರಲ್ಲಿ ಕಾರ್ಡ್‌ ರಹಿತವಾಗಿ ಹಣ ಪಡೆದುಕೊಳ್ಳಬಹುದು ಮತ್ತು ಪಾವತಿ ಮಾಡಬಹದು. ದೇಶಾದ್ಯಂತ ಈಗಾಗಲೇ 68000 ಯೂನೋ ಕ್ಯಾಶ್‌ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ 18 ತಿಂಗಳಲ್ಲಿ 1 ಲಕ್ಷ ಕ್ಯಾಶ್‌ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದರು.

ವರ್ಚುವಲ್‌ ಕೂಪನ್‌ ಹಾಗೂ ಕ್ಯೂರ್‌ ಆರ್‌ ಕೋಡ್‌ ಪಾವತಿ ಕೂಡ ಅಗ್ಗದ ಬ್ಯಾಕಿಂಗ್‌ ಸೇವೆಗಳಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಕಾರ್ಡ್‌ ಬಳಕೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದರು.

Latest Videos
Follow Us:
Download App:
  • android
  • ios