Asianet Suvarna News Asianet Suvarna News

Business Ideas : ಸಣ್ಣ ಪ್ರಮಾಣದಲ್ಲಿ ಈ ವ್ಯವಹಾರ ಶುರು ಮಾಡಿ ತಿಂಗಳಿಗೆ ಗಳಿಸಿ 60 ಸಾವಿರ ರೂ.

 ಸ್ವಂತ ಬ್ಯುಸಿನೆಸ್ ಮಾಡಲು ಬಯಸುವವರು ನೀವಾಗಿದ್ದು, ಹೆಚ್ಚಿನ ಹೂಡಿಕೆಯಿಲ್ಲದೆ ಗಳಿಕೆ ಮಾರ್ಗ ಹುಡುಕುತ್ತಿದ್ದರೆ ಈ ವ್ಯವಹಾರ ಬೆಸ್ಟ್. ಪಾರ್ಟಿಗಳಲ್ಲಿ,ಟೀ,ಕಾಫಿ ಸೇರಿದಂತೆ ಜ್ಯೂಸ್ ಸೇವನೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಸಲ್ಪಡುವ ಪೇಪರ್ ಕಪ್ ಕೈತುಂಬ ಲಾಭತರಬಲ್ಲದು. 
 

Start Paper Cup Business In 1 Lakh Rupees earn half lakh per month
Author
Bangalore, First Published Jan 28, 2022, 7:21 PM IST

ಬ್ಯುಸಿನೆಸ್ (Business) ಶುರು ಮಾಡುವಾಗ ಎದುರಾಗುವ ಸವಾಲುಗಳಲ್ಲಿ ಮೊದಲನೇಯದು, ಯಾವ ವ್ಯವಹಾರ ಶುರು ಮಾಡ್ಬೇಕು ಎಂಬುದು. ಕೆಲವೊಮ್ಮೆ ಆಲೋಚನೆ ಮಾಡದೆ ಬ್ಯುಸಿನೆಸ್ ಶುರು ಮಾಡಿ,ಕೈ ಸುಟ್ಟುಕೊಂಡಿರ್ತೇವೆ. ಹೂಡಿಕೆ ಮಾಡಿ ನಷ್ಟ ಅನುಭವಿಸುವ ಬದಲು, ಯಾವ ವ್ಯವಹಾರ ಶುರು ಮಾಡಿದ್ರೆ ಹೆಚ್ಚು ಲಾಭ ಗಳಿಸಬಹುದು ಎಂಬುದನ್ನು ತಿಳಿದುಕೊಂಡು,ರಣಾಂಗಣಕ್ಕೆ ಇಳಿಯುವುದು ಉತ್ತಮ. ಬೆಸ್ಟ್ ಬ್ಯುಸಿನೆಸ್ ಪಟ್ಟಿಯಲ್ಲಿ ಪೇಪರ್ ಕಪ್ ಕೂಡ ಸೇರುತ್ತದೆ. ಪ್ಲಾಸ್ಟಿಕ್ ಯುಗ ಮುಗಿದಿದೆ. ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಯಾವುದೇ ಅಂಗಡಿಯಲ್ಲಿ ಈಗ ಪ್ಲಾಸ್ಟಿಕ್ ಕಪ್ ಸಿಗ್ತಿಲ್ಲ. ಟೀ ಸೇವನೆಗೆ ಸ್ಟೀಲ್ ಲೋಟ ಹಾಗೂ ಪೇಪರ್ ಕಪ್ ಬಳಸುತ್ತಿದ್ದಾರೆ. ಪೇಪರ್ ಕಪ್ ಗೆ ಆಯಸ್ಸಿದೆ. ಹೊಟೇಲ್,ಬೀದಿ ಬದಿ ಟೀ ಅಂಗಡಿ,ಮನೆಗಳಲ್ಲಿಯೂ ಪೇಪರ್ ಕಪ್ ಗೆ ಬೇಡಿಕೆಯಿದೆ. ಪೇಪರ್ ಕಪ್ ತಯಾರಿಕೆ ವ್ಯವಹಾರದ ಮೂಲಕ ನೀವು ತಿಂಗಳಿಗೆ 60 ಸಾವಿರ ರೂಪಾಯಿಗಳವರೆಗೆ ಗಳಿಸಬಹುದು. ಈ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ನಾವು ಇಂದು ನಿಮಗೆ ಹೇಳ್ತೆವೆ.

ವಿಶೇಷ ಪೇಪರ್ ನಿಂದ ಪೇಪರ್ ಕಪ್ (Paper Cup) ತಯಾರಿಸಲಾಗುತ್ತದೆ. ವಿವಿಧ ಗಾತ್ರದಲ್ಲಿ ಪೇಪರ್ ಕಪ್ ತಯಾರಿಸಲಾಗುತ್ತದೆ. ಇದು ಪರಿಸರ (Environment)ಸ್ನೇಹಿಯಾಗಿದೆ. ಹಾಗಾಗಿ ಇದರ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ. ಈ ವ್ಯವಹಾರವನ್ನು ಸಣ್ಣ ರೀತಿಯಲ್ಲಿ ಪ್ರಾರಂಭಿಸಲು ಬಯಸಿದರೆ, ಒಂದರಿಂದ ಒಂದುವರೆ ಲಕ್ಷ ರೂಪಾಯಿಗಳಲ್ಲಿ ಈ ವ್ಯವಹಾರ ಪ್ರಾರಂಭಿಸಬಹುದು. ಇದಕ್ಕೆ ಸಾಕಷ್ಟು ರೀತಿಯ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಚಿಕ್ಕ ಯಂತ್ರಗಳು ಒಂದೇ ಗಾತ್ರದ ಕಪ್‌ಗಳನ್ನು ಉತ್ಪಾದಿಸಿದರೆ, ದೊಡ್ಡ ಯಂತ್ರಗಳು ಎಲ್ಲಾ ಗಾತ್ರದ ಗ್ಲಾಸ್‌ಗಳು/ಕಪ್‌ಗಳನ್ನು ಉತ್ಪಾದಿಸುತ್ತವೆ. 1 ರಿಂದ 2 ಲಕ್ಷ ರೂಪಾಯಿಗೆ ಯಂತ್ರಗಳಲ್ಲಿ ಒಂದು ಗಾತ್ರದ ಕಪ್ ತಯಾರಿಸಬಹುದು.  

ಉದ್ಯಮ ಪ್ರಾರಂಭಿಸಲು ಅಗತ್ಯತೆಗಳು: ಯಂತ್ರೋಪಕರಣಗಳು, ಪೇಪರ್ ಕಪ್ ಫ್ರೇಮಿಂಗ್ ಯಂತ್ರ ಖರೀದಿಗೆ 5 ಲಕ್ಷ ರೂಪಾಯಿ ವೆಚ್ಚ ಬರಲಿದೆ. ಕಚೇರಿ ಉಪಕರಣಗಳಿಗೆ ಸುಮಾರು 50 ಸಾವಿರ ವೆಚ್ಚವಾಗುತ್ತದೆ. ರಾ ಮೆಟೀರಿಯಲ್ ಕಪ್ ಮಾಡಲು, ನಿಮಗೆ 90 ಕೆಜಿಯಷ್ಟು ಬರುವ ಪೇಪರ್ ರೀಲ್ ಅಗತ್ಯವಿದೆ. ಇದರೊಂದಿಗೆ, ನಿಮಗೆ ರೂ 78 ಕೆಜಿಗೆ ಖರೀದಿಸಬಹುದಾದ ಬಾಟಮ್ ರೀಲ್ ಅಗತ್ಯವಿದೆ. 

ಯಂತ್ರ ಎಲ್ಲಿ ಸಿಗುತ್ತದೆ: ದೆಹಲಿ, ಹೈದರಾಬಾದ್, ಆಗ್ರಾ ಮತ್ತು ಅಹಮದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಪೇಪರ್ ಕಪ್ ತಯಾರಿಸುವ ಯಂತ್ರ ಲಭ್ಯವಿದೆ. ಅಂತಹ ಯಂತ್ರಗಳನ್ನು ತಯಾರಿಸಲು ಎಂಜಿನಿಯರಿಂಗ್ ಕೆಲಸ ಮಾಡುವ ಕಂಪನಿಗಳು. ಇದಲ್ಲದೆ, ಇಂಡಿಯಾ ಮಾರ್ಟ್ ಮತ್ತು ಅಲಿಬಾಬಾ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳುವ ಮೂಲಕ ನೀವು ಈ ಯಂತ್ರಗಳ ಮಾರಾಟಗಾರರನ್ನು ನೇರವಾಗಿ ಸಂಪರ್ಕಿಸಬಹುದು. ಪೇಪರ್ ಕಪ್‌ಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸಹ ಇಲ್ಲಿಂದ ಪಡೆಯಬಹುದು.

LIC Pension Plan:ಈ ಪಾಲಿಸಿಯ ಒಂದು ಪ್ರೀಮಿಯಂ ಪಾವತಿಸಿದ್ರೆ ಸಿಗುತ್ತೆ ಮಾಸಿಕ 12 ಸಾವಿರ ರೂ. ಪಿಂಚಣಿ!

ಯಂತ್ರೋಪಕರಣಗಳ ಖರೀದಿ ಎಲ್ಲಿ ? : ದೆಹಲಿ, ಹೈದರಾಬಾದ್, ಆಗ್ರಾ, ಅಹಮದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಪೇಪರ್ ಕಪ್ ತಯಾರಿಸುವ ಯಂತ್ರ ಲಭ್ಯವಿದೆ. ಇಂಡಿಯಾ ಮಾರ್ಟ್ ಮತ್ತು ಅಲಿಬಾಬಾ ವೆಬ್‌ಸೈಟ್‌ನಲ್ಲಿಯೂ ನೀವು ಯಂತ್ರೋಪಕರಣಗಳನ್ನು ಖರೀದಿ ಮಾಡಬಹುದು.  ಪೇಪರ್ ಕಪ್‌ಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸಹ ಇಲ್ಲಿಂದ ಪಡೆಯಬಹುದು.

ನೋಂದಣಿ ಹೇಗೆ? :  ಸಣ್ಣ ಪ್ರಮಾಣದಲ್ಲಿ ಪೇಪರ್ ಕಪ್‌ಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬಯಸಿದರೆ, ಮನೆಯಲ್ಲಿ ಸಣ್ಣ ಯಂತ್ರವನ್ನು ಸ್ಥಾಪಿಸುವ ಮೂಲಕ ಪ್ರಾರಂಭಿಸಬಹುದು. ದೊಡ್ಡ ಪ್ರಮಾಣದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನೀವು ಎಂಎಸ್ಎಂಇ ಅಥವಾ ಉದ್ಯೋಗ್ ಆಧಾರ್ ನೋಂದಣಿ ಅಡಿಯಲ್ಲಿ ನಿಮ್ಮ ವ್ಯಾಪಾರವನ್ನು ನೋಂದಾಯಿಸಿಕೊಳ್ಳಬೇಕು. ಇದರೊಂದಿಗೆ, ಟ್ರೇಡ್ ಲೈಸೆನ್ಸ್, ಸಂಸ್ಥೆಯ ಚಾಲ್ತಿ ಖಾತೆ, ಪಾನ್ ಕಾರ್ಡ್ ಇತ್ಯಾದಿಗಳು ಸಹ ಅಗತ್ಯವಿರುತ್ತದೆ. ಉದ್ಯೋಗ್ ಆಧಾರ್ ನೋಂದಣಿಯನ್ನು ಹೊಂದಿದ್ದರೆ  ಮುದ್ರಾ ಸಾಲವನ್ನು ಸಹ ಪಡೆಯಬಹುದು.  

Koppal: ಕಚ್ಚಾ ಕೂದಲು ರಫ್ತಿಗೆ ನಿರ್ಬಂಧ: ಜಗತ್ತಿಗೆ ಭಾರತದ್ದೇ ಸಿಂಹಪಾಲು..!

ಗಳಿಕೆ : ಒಂದು ನಿಮಿಷದಲ್ಲಿ ಸುಮಾರು 50 ಕಪ್‌ಗಳನ್ನು ತಯಾರಿಸುತ್ತದೆ. ಕಾರ್ಖಾನೆಯು ದಿನಕ್ಕೆ 2 ಶಿಫ್ಟ್‌ಗಳಲ್ಲಿ 26 ಕೆಲಸದ ದಿನಗಳವರೆಗೆ ಕೆಲಸ ಮಾಡಿದರೆ, ಒಂದು ತಿಂಗಳಲ್ಲಿ 15,60,000 ಕಪ್‌ಗಳು ಇಲ್ಲಿ ತಯಾರಾಗುತ್ತವೆ. ನೀವು ಅದನ್ನು 30 ಪೈಸೆಗೆ ಮಾರಾಟ ಮಾಡಿದರೂ ಸುಮಾರು 4,68,000 ಆದಾಯ ಸಿಗುತ್ತದೆ. ಇದರಲ್ಲಿ ವೆಚ್ಚ ಕಡಿತಗೊಳಿಸಿದ್ರೆ 60 ಸಾವಿರ ರೂಪಾಯಿ ಲಾಭವಾಗಲಿದೆ. 

Follow Us:
Download App:
  • android
  • ios