ಸ್ಟಾರ್‌ಬಕ್ಸ್ ಕಾರ್ಪ್ 1,100 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಿ, ಖಾಲಿ ಹುದ್ದೆಗಳನ್ನು ಸ್ಥಗಿತಗೊಳಿಸಿದೆ. ಮಾರಾಟ ಹೆಚ್ಚಿಸಲು ಮತ್ತು ಗ್ರಾಹಕರನ್ನು ಆಕರ್ಷಿಸಲು ಸಿಇಒ ಬ್ರಿಯಾನ್ ನಿಕೋಲ್ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕ್ರಮವು ಕೆಫೆ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಸಣ್ಣ, ಚುರುಕಾದ ತಂಡಗಳನ್ನು ಕಟ್ಟಲು ಕಂಪೆನಿ ಮುಂದಾಗಿದೆ. ಜನವರಿಯಲ್ಲಿ ನಿಕೋಲ್ ಉದ್ಯೋಗಿಗಳಿಗೆ ಪತ್ರ ಬರೆದಿದ್ದು, ಮಾರ್ಚ್‌ನಿಂದ ವಜಾಗೊಳಿಸುವಿಕೆ ಆರಂಭವಾಗಲಿದೆ.

ಸ್ಟಾರ್‌ಬಕ್ಸ್ ಕಾರ್ಪ್ (SBUX) ಕಂಪನಿಯು 1,100 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಮತ್ತು ಖಾಲಿ ಹುದ್ದೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ ನಂತರ ಅದರ ಷೇರುಗಳು 1.30% ಕ್ಕಿಂತ ಹೆಚ್ಚು ಏರಿಕೆ ಕಂಡವು, ಚಿಲ್ಲರೆ ವ್ಯಾಪಾರದ ಕಂಪೆನಿಗಳ ನಿರ್ಧಾರವು ಬಾಲಿಶವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ ವಜಾವು ಕಂಪೆನಿಯ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಮಾರಾಟದ ಮೇಲೆ ಒತ್ತಡ ಹೇರಿರುವ $8 ಲ್ಯಾಟೆಗಳು ಮತ್ತು ದೂರ ಉಳಿದಿರುವ ಗ್ರಾಹಕರನ್ನು ಮತ್ತೆ ಆಕರ್ಷಿಸಲು ಸ್ಟಾರ್‌ಬಕ್ಸ್ ಸಿಇಒ ಬ್ರಿಯಾನ್ ನಿಕೋಲ್ ಪ್ರತಿಜ್ಞೆ ಮಾಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಕಾಫಿ ನೀಡುವ ದೈತ್ಯ ಕಂಪನಿಯು ಇತರ ನೂರಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯೋಜಿಸಿಲ್ಲ ಎಂದು ಸಿಎನ್‌ಬಿಸಿ ಸಿಇಒ ಬ್ರಿಯಾನ್ ನಿಕೋಲ್ ನಿರ್ಧಾರವೇ ಅಂತಿಮ ಎನ್ನಲಾಗಿದೆ. ಈ ಕಡಿತವು ಕೆಫೆಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿ ತಿಳಿಸಿದೆ.

ಝಾರಾ To ಸ್ಟಾರ್‌ಬಕ್ಸ್‌: ಟಾಟಾ ಒಡೆತನದ ದೇಶದ 7 ಐಷಾರಾಮಿ ಬ್ರ್ಯಾಂಡ್‌ಗಳಿವು!

ಸ್ಟಾರ್‌ಬಕ್ಸ್ ತಂಡವನ್ನು ಬಲಿಷ್ಠವಾಗಿ ಕಟ್ಟಲು ಕೆಲಸದಿಂದ ತೆಗೆದು ಹಾಕುತ್ತಿದೆ ಮತ್ತು ಚಿಕ್ಕದಾಗಿ ಹೆಚ್ಚು ಚುರುಕಾದ ತಂಡಗಳನ್ನು, ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುವ ತಂಡವನ್ನು ಕಟ್ಟಲು ಮುಂದಾಗಿದೆ ಎಂದು ಸಿಎನ್‌ಬಿಸಿ ವರದಿ ಸೇರಿಸಲಾಗಿದೆ.

ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು, ಹೊಣೆಗಾರಿಕೆಯನ್ನು ಹೆಚ್ಚಿಸುವುದು, ಸಂಕೀರ್ಣತೆಯನ್ನು ಕಡಿಮೆ ಮಾಡುವುದು ಮತ್ತು ಉತ್ತಮ ಏಕೀಕರಣವನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಎಲ್ಲವೂ ಹೆಚ್ಚು ಗಮನಹರಿಸುವ ಮತ್ತು ನಮ್ಮ ಆದ್ಯತೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಗುರಿಯನ್ನು ಹೊಂದಿದ್ದೇವೆ ಎಂದು ನಿಕೋಲ್ ಉದ್ಯೋಗಿಗಳಿಗೆ ಕಳೆದ ಜನವರಿಯಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಾರ್ಚ್ ತಿಂಗಳಿನಿಂದ ವಜಾಗೊಳಿಸುವಿಕೆ ಆರಂಭವಾಗಲಿದೆಯಂತೆ. 

ಕಡಿತವು ಕಂಪನಿಯ ಒಡೆತನದ ಶಾಪ್‌ಗಳಿಗೆ ಸಂಬಂಧಿಸಿ ಹೊರಗಡೆ ಕೆಲಸ ಮಾಡುವ 16,000 ಉದ್ಯೋಗಿಗಳಲ್ಲಿ ಸುಮಾರು 7% ರಷ್ಟು ಪರಿಣಾಮ ಬೀರುತ್ತದೆ. ಶಾಪ್‌ ನ ಒಳಗಡೆ ಕೆಲಸ ಮಾಡುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಕಾರ್ಪೊರೇಟ್ ಉದ್ಯೋಗಗಳನ್ನು ಮಾತ್ರ ಕಡಿತಗೊಳಿಸಲು ಯೋಜಿಸಲಾಗಿದೆ ಎಂದು ಸ್ಟಾರ್‌ಬಕ್ಸ್ ಜನವರಿಯಲ್ಲಿ ಸೂಚಿಸಿತ್ತು.

ಬುಕ್‌ ಮಾಡಿದ ಕೇವಲ 13 ನಿಮಿಷದಲ್ಲಿ ಲಕ್ಷ ಬೆಲೆ ಬಾಳುವ ಲ್ಯಾಪ್‌ಟಾಪ್ ಡೆಲಿವರಿ ಪಡೆದ ಬೆಂಗಳೂರು ಟೆಕ್ಕಿ!

ಸ್ಟಾರ್‌ಬಕ್ಸ್ ಪ್ರತಿ ಷೇರಿಗೆ $0.69 ಗಳಿಕೆಸಿದೆ. ಇದು ಅದರ ಇತ್ತೀಚಿನ ಗಳಿಕೆಯಲ್ಲಿ $0.67 ರ ಒಮ್ಮತದ ಅಂದಾಜುಗಳನ್ನು ಮೀರಿಸಿದೆ. ಅದರ ಮೊದಲ ತ್ರೈಮಾಸಿಕ ಆದಾಯವು $9.4 ಬಿಲಿಯನ್ ಆಗಿದ್ದು, ಒಮ್ಮತದ ಅಂದಾಜು $9.31 ಬಿಲಿಯನ್ ಆಗಿದೆ. ಸ್ಥಿರ ಕರೆನ್ಸಿ ಆಧಾರದ ಮೇಲೆ ಸೇರಿದಂತೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ $9.4 ಬಿಲಿಯನ್‌ನ ಏಕೀಕೃತ ನಿವ್ವಳ ಆದಾಯವು ಸ್ಥಿರವಾಗಿದೆ.

ಕಳೆದ ವರ್ಷ ಚಿಪಾಟ್ಲ್ ಮೆಕ್ಸಿಕನ್ ಗ್ರಿಲ್‌ನಿಂದ ಕಂಪನಿಗೆ ಸೇರಿದ ಅದರ ಸಿಇಒ ಬ್ರಿಯಾನ್ ನಿಕೋಲ್ ಅವರ ನೇತೃತ್ವದಲ್ಲಿ ಸ್ಟಾರ್‌ಬಕ್ಸ್‌ನ ಆಡಳಿತ ಮಂಡಳಿಯು "ಬ್ಯಾಕ್ ಟು ಸ್ಟಾರ್‌ಬಕ್ಸ್" ಎಂಬ ಕಾರ್ಯತಂತ್ರದ ಕೂಲಂಕುಷ ಪರೀಕ್ಷೆಯನ್ನು ಪ್ರಾರಂಭಿಸಿತು. ನಿಕೋಲ್ ಸ್ಟಾರ್‌ಬಕ್ಸ್‌ನಲ್ಲಿ ನಾಯಕತ್ವವನ್ನು ಮರುಸಂಘಟಿಸುತ್ತಿದ್ದು, ಟ್ಯಾಕೋ ಬೆಲ್‌ನ ಕೆಲವು ಮಾಜಿ ಕಾರ್ಯನಿರ್ವಾಹಕರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಸ್ಟಾರ್‌ಬಕ್ಸ್ ಷೇರುಗಳು ವರ್ಷದಿಂದ ಇಲ್ಲಿಯವರೆಗೆ 24% ರಷ್ಟು ಏರಿಕೆಯಾಗಿದೆ.