75ರೂ. ವಿಶೇಷ ನಾಣ್ಯ ಖರೀದಿಸಬೇಕಾ? ಎಲ್ಲಿ ಸಿಗುತ್ತೆ ಗೊತ್ತಿಲ್ವ? ಇಲ್ಲಿದೆ ಮಾಹಿತಿ

ನೂತನ ಸಂಸತ್‌ ಭವನ ಉದ್ಘಾಟನೆಯ ಸವಿನೆನಪಿಗಾಗಿ ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ 75ರೂ. ವಿಶೇಷ ನಾಣ್ಯ ಬಿಡುಗಡೆ ಮಾಡಿದ್ದಾರೆ. ಈ ನಾಣ್ಯ ಎಲ್ಲಿ ಸಿಗುತ್ತದೆ? ಯಾರು ಖರೀದಿಸಬಹುದು? ಇಲ್ಲಿದೆ ಮಾಹಿತಿ.

Special Rs 75 Coin How Can You Buy It where it available anu

Business Desk:ನೂತನ ಸಂಸತ್‌ ಭವನ ಉದ್ಘಾಟನೆಯ ಸವಿನೆನಪಿಗಾಗಿ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ 75 ರೂಪಾಯಿ ಮುಖಬೆಲೆಯ ವಿಶೇಷ ಸ್ಮರಣಾರ್ಥ ನಾಣ್ಯ ಬಿಡುಗಡೆಗೊಳಿಸಿದ್ದರು.  ಹಣಕಾಸು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಆರ್ಥಿಕ ವ್ಯವಹಾರಗಳ ಇಲಾಖೆಯ ಗಜೆಟೆಡ್ ಅಧಿಸೂಚನೆ ಅನ್ವಯ ಈ ನಾಣ್ಯದ ತೂಕ 34.65ರಿಂದ 35.35 ಗ್ರಾಂ ಇದ್ದು, ಭಾರತದ ಲಾಂಛನ ಅಶೋಕ ಚಕ್ರದ ಮುದ್ರೆ ಇರಲಿದೆ. ಇದರ ಕೆಳಗೆ ದೇವನಾಗರಿಯಲ್ಲಿ ಭಾರತ ಹಾಗೂ ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಮುದ್ರಿಸಲಾಗಿದೆ. ಇದರ ಕೆಳಗೆ ರುಪಾಯಿ ಚಿಹ್ನೆ ಅದರ ಪಕ್ಕದಲ್ಲಿ 75 ಎಂದು ಬರೆಯಲಾಗಿದೆ. ಈ ನಾಣ್ಯದ ವಿನ್ಯಾಸ ಸಂವಿಧಾನದ ಮೊದಲ ಶೆಡ್ಯೂಲ್ ನಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇದೆ. ಇನ್ನು ಈ ನಾಣ್ಯವನ್ನು ಶೇ.50ರಷ್ಟು ಬೆಳ್ಳಿ, ಶೇ.40ರಷ್ಟು ತಾಮ್ರ. ಶೇ.5ರಷ್ಟು ನಿಕ್ಕಲ್‌ ಹಾಗೂ ಶೇ.5ರಷ್ಟು ಝಿಂಕ್‌ ಮಿಶ್ರಣದಿಂದ ತಯಾರಿಸಲಾಗಿದೆ. ಈ ನಾಣ್ಯದ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಕುತೂಹಲವಿದೆ. ಹಾಗಾದ್ರೆ ಈ ನಾಣ್ಯವನ್ನು ಎಲ್ಲಿ, ಹೇಗೆ ಪಡೆಯೋದು? ಇದು ಇತರ ನಾಣ್ಯಗಳಂತೆ ಚಲಾವಣೆಗೆ ಬರುತ್ತದೆಯಾ? ಈ ಕುರಿತ ಮಾಹಿತಿ ಇಲ್ಲಿದೆ. 

ಈ ನಾಣ್ಯ ಚಲಾವಣೆಗೆ ಬರುತ್ತಾ?
ಈ ನಾಣ್ಯ ವಿಶೇಷ ನಾಣ್ಯವಾಗಿದ್ದು, ಸಾಮಾನ್ಯ ಚಲಾವಣೆಯಲ್ಲಿ ಇರುವುದಿಲ್ಲ. ಈ ನಾಣ್ಯವನ್ನು ವಹಿವಾಟುಗಳಿಗೆ ಬಳಸಲು ಸಾಧ್ಯವಿಲ್ಲ. 1964ರಿಂದ ಹಿಡಿದು ಇಲ್ಲಿಯ ತನಕ ಇಂಥ 150 ಸ್ಮರಣಾರ್ಥ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಸಂಸತ್ ಭವನ ಉದ್ಘಾಟನೆ, 75 ರೂಪಾಯಿ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ!

ನಾಣ್ಯದ ಸ್ವರೂಪ ಹೀಗಿದೆ
75 ರೂಪಾಯಿ ವಿಶೇಷ ನಾಣ್ಯದಲ್ಲಿ ಸಿಂಹಗಳನ್ನು ಹೊಂದಿರುವ ಆಶೋಕ ಚಕ್ರದ ಮುದ್ರೆ, ಅದರ ಕೆಳಗೆ ಸತ್ಯಮೇವ ಜಯತೆ ಅನ್ನೋ ವಾಕ್ಯವೂ ಇರಲಿದೆ. ಇನ್ನು ನಾಣ್ಯದ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಭಾರತ ಎಂದು ಬರೆದಿದ್ದರೆ, ನಾಣ್ಯದ ಬಲಭಾಗದಲ್ಲಿ ಇಂಗ್ಲೀಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ. ಇನ್ನು ರೂಪಾಯಿ 75 ಎಂದು ಬರೆಯಲಾಗಿದೆ. ನಾಣ್ಯದ ಹಿಂಭಾಗದಲ್ಲಿ ಸಂಸತ್ ಭವನ ಹಾಗೂ ದೇವನಾಗರಿ ಲಿಪಿಯಲ್ಲಿ ಸಂಸದ್ ಸಂಕುಲ್ ಎಂದು ಬರೆಯಲಾಗಿದೆ. ನಾಣ್ಯದ ಕೆಳಭಾಗದಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಎಂದು ಬರೆಯಲಾಗಿದೆ.

75ರೂ. ನಾಣ್ಯ ಖರೀದಿಸೋದು ಹೇಗೆ?
ಈ ನಾಣ್ಯವನ್ನು ಯಾರು ಬೇಕಾದರೂ ಖರೀದಿಸಬಹುದು. ಈ ನಾಣ್ಯಗಳು ಸೀಮಿತ ಅವಧಿಗೆ ದೊರೆಯುತ್ತವೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಗಳನ್ನು ಬಳಸಿಕೊಂಡು  www.indiagovtmint.in ಸರ್ಕಾರಿ ವೆಬ್ ಸೈಟ್ ನಿಂದ ಈ ನಾಣ್ಯವನ್ನು ಖರೀದಿಸಬಹುದು. ಈ ನಾಣ್ಯಗಳ ಬುಕ್ಕಿಂಗ್ ಅನ್ನು 3-6 ತಿಂಗಳು ಮೊದಲೇ ಪ್ರಾರಂಭಿಸುತ್ತಾರೆ. ಈ ನಾಣ್ಯದ ಖರೀದಿಗೆ ನಗದು ಹಾಗೂ ಚೆಕ್ ಸ್ವೀಕರಿಸೋದಿಲ್ಲ. ಇನ್ನು ನೀವು 10ಕ್ಕಿಂತ ಹೆಚ್ಚು ನಾಣ್ಯಗಳನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದರೆ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯ.

2000 ರೂ. ನೋಟು ಹಿಂಪಡೆಯುವಿಕೆ ಬಳಿಕ ಎಸ್‌ಬಿಐನಲ್ಲಿ ಜಮೆಯಾಯ್ತು 14 ಸಾವಿರ ಕೋಟಿ, 3,000 ಕೋಟಿ ರೂ. ಬದಲಾವಣೆ

75ರೂ. ಈ ವಿಶೇಷ ನಾಣ್ಯವನ್ನು ಮುಂಬೈ, ಕೋಲ್ಕತ್ತ, ಹೈದರಾಬಾದ್ ಮತ್ತು ನೋಯ್ಡಾದಲ್ಲಿರುವ ಸರ್ಕಾರಿ ನೋಟು ಮುದ್ರಣಾಲಯಗಳಲ್ಲಿ ಟಂಕಿಸುತ್ತಾರೆ. ನೇರವಾಗಿ ಈ ಕೇಂದ್ರಗಳಿಗೆ ತೆರಳಿ ಕೂಡ ನಾಣ್ಯಗಳನ್ನು ಪಡೆಯಬಹುದು. ಈ ವಿಶೇಷ ನಾಣ್ಯಗಳನ್ನು ಸಾಮಾನ್ಯವಾಗಿ ನಾಣ್ಯ ಸಂಗ್ರಹಿಸುವ ಹವ್ಯಾಸವುಳ್ಳವರು ಸಂಗ್ರಹಿಸುತ್ತಾರೆ.

20,000 ಕೋಟಿ ರೂ. ವೆಚ್ಚದ ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿ ಹೊಸ ಸಂಸತ್‌ ಭವನ ನಿರ್ಮಾಣಗೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ನಿರ್ಮಾಣದ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡಿವೆ. ಹಳೆಯ ಸಂಸತ್‌ ಭವನದ ಪಕ್ಕದಲ್ಲೇ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಆಕರ್ಷಕ ವಾಸ್ತುವಿನ್ಯಾಸದ ಹೊಸ ಭವನ ನಿರ್ಮಾಣಗೊಂಡಿದೆ. ಇದರಲ್ಲಿ 888 ಸಂಸದರು ಆಸೀನರಾಗಬಹುದಾದ ಲೋಕಸಭೆ ಹಾಗೂ 300 ಆಸನಗಳ ರಾಜ್ಯಸಭೆ ಸಭಾಂಗಣಗಳಿವೆ. 
 

Latest Videos
Follow Us:
Download App:
  • android
  • ios