ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡ್ತಿದ್ದೀರಾ? ಸಾವರಿನ್ ಗೋಲ್ಡ್ ಬಾಂಡ್ ಅಥವಾ ಚಿನ್ನದ ಇಟಿಎಫ್, ಯಾವುದು ಉತ್ತಮ?

ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸೋರಿಗೆ ಸಾವರಿನ್ ಗೋಲ್ಡ್ ಬಾಂಡ್  ಅಥವಾ ಚಿನ್ನದ ಇಟಿಎಫ್ ಇವುಗಳಲ್ಲಿ ಯಾವುದರ ಮೇಲೆ ಹೂಡಿಕೆ ಮಾಡೋದು ಎಂಬ ಗೊಂದಲ ಸದಾ ಕಾಡುತ್ತದೆ. ಇವೆರಡರ ನಡುವಿನ ವ್ಯತ್ಯಾಸವೇನು? ಹೂಡಿಕೆಗೆ ಯಾವುದು ಸೂಕ್ತ? ಇಲ್ಲಿದೆ ಮಾಹಿತಿ. 
 

Sovereign Gold Bonds Vs Gold ETFs Know Which is a Better Investment Option

Business Desk: ಭಾರತೀಯರು ಇಂದಿಗೂ ಹೂಡಿಕೆಗೆ ಚಿನ್ನವನ್ನು ನೆಚ್ಚಿಕೊಂಡಿದ್ದಾರೆ. ಚಿನ್ನದ ಮೇಲೆ ಹೂಡಿದ ಹಣ ಎಂದಿಗೂ ಸುರಕ್ಷಿತ ಎಂಬ ಭಾವನೆಯೇ ಇದಕ್ಕೆ ಕಾರಣ. ಆದರೆ, ತಂತ್ರಜ್ಞಾನ ಮುಂದುವರಿದಂತೆ ಚಿನ್ನದ ಮೇಲಿನ ಹೂಡಿಕೆಯ ವಿಧಾನದಲ್ಲಿ ಬದಲಾವಣೆಗಳಾಗಿವೆ. ಭೌತಿಕ ರೂಪದಲ್ಲಿ ಚಿನ್ನ ಖರೀದಿಸುವ ಟ್ರೆಂಡ್ ಇಂದಿಗೂ ಮುಂದುವರಿದಿದ್ದು, ಅದರ ಜೊತೆಗೆ ಡಿಜಿಟಲ್ ಗೋಲ್ಡ್ ಮೇಲೆ ಹೂಡಿಕೆ ಮಾಡಲು ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಕಾರಣ ಡಿಜಿಟಲ್ ಚಿನ್ನವನ್ನು ಭೌತಿಕ ರೂಪದ ಚಿನ್ನದಂತೆ ಜೋಪಾನದಿಂದ ಸಂರಕ್ಷಿಸಬೇಕಾದ ಅಗತ್ಯವಿಲ್ಲ. ಹೂಡಿಕೆಯ ಸಮಯ ಹಾಗೂ ಪ್ರಯೋಜನಗಳನ್ನು ಆಧರಿಸಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸೋರು ಆರ್ ಬಿಐ ಬಿಡುಗಡೆ ಮಾಡುವ ಸಾವರಿನ್ ಗೋಲ್ಡ್ ಬಾಂಡ್ ಗಳು ಅಥವಾ ಮ್ಯೂಚುವಲ್ ಫಂಡ್  ಹೌಸ್ ಗಳು ವಿತರಿಸುವ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ಸ್ ನಲ್ಲಿ (ಇಟಿಎಫ್ ಗಳು) ಹೂಡಿಕೆ ಮಾಡಬಹುದು. ಇವೆರಡರಲ್ಲಿ ಹೂಡಿಕೆಗೆ ಯಾವುದು ಹೆಚ್ಚು ಸೂಕ್ತ? ಎರಡರ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ.

ಏನಿದು ಸಾವರಿನ್ ಗೋಲ್ಡ್ ಬಾಂಡ್? 
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ  ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ (Invest)ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ ಚಿನ್ನದ ಗಟ್ಟಿ, ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡೋ ಬದಲು ಭೌತಿಕ ಸ್ವರೂಪದಲ್ಲಿರದ ಚಿನ್ನದ ಮೇಲೆ ಹೂಡಿಕೆ ಮಾಡೋದು. ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸೋ ಜೊತೆಗೆ ಸ್ವ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯವಾಗಿ ಬದಲಾಯಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ  2015ರ ನವೆಂಬರ್​ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. 

ಪ್ಯಾನ್ ಕಾರ್ಡ್ ಬಳಕೆದಾರರೇ ಗಮನಿಸಿ, ಈ ತಪ್ಪುಗಳನ್ನು ಮಾಡಿದ್ರೆ 10 ಸಾವಿರ ರೂ. ದಂಡ ಖಚಿತ!

ಸಾವರಿನ್ ಗೋಲ್ಡ್ ಬಾಂಡ್ ಪ್ರಯೋಜನಗಳೇನು? 
ಸುದೀರ್ಘಾವಧಿ ಹಾಗೂ ತೆರಿಗೆ ಪ್ರಯೋಜನಗಳನ್ನು ಬಯಸೋರು ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ (SGBs) ಹೂಡಿಕೆ ಮಾಡಬಹುದು. ಈ ಬಾಂಡ್ ಗಳಿಗೆ ಕೇಂದ್ರ ಸರ್ಕಾರದ ಬೆಂಬಲವಿದೆ. ಹೀಗಾಗಿ ಧೈರ್ಯವಾಗಿ ಈ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಈ ಬಾಂಡ್ ಗಳಿಗೆ ಪ್ರಸ್ತುತ ವಾರ್ಷಿಕ ಶೇ.2.5ರಷ್ಟು ಬಡ್ಡಿ ಇದೆ. ಸಾವರಿನ್ ಗೋಲ್ಡ್ ಬಾಂಡ್ ಖರೀದಿ ಸಮಯದಲ್ಲಿ ಯಾವ ದರವಿತ್ತೋ ಅದಕ್ಕೆ ಅನುಸಾರವಾಗಿ ರಿಟರ್ನ್ಸ್ ದೊರೆಯುತ್ತದೆ. ಈ ಬಾಂಡ್ ಗಳು ಎಂಟು ವರ್ಷಗಳ ಅವಧಿಯದ್ದಾಗಿರುತ್ತವೆ. ಐದು ವರ್ಷಗಳ ಬಳಿಕ ಈ ಬಾಂಡ್‌ ಮರಳಿಸಲು ಅವಕಾಶವಿದೆ. ಪ್ರಸ್ತುತ ಆರ್ ಬಿಐ  ಸಾವರಿನ್ ಗೋಲ್ಡ್ ಬಾಂಡ್  2022-23ನೇ ಸಾಲಿನ  ಮೂರನೇ ಸರಣಿಯ ಚಂದಾದಾರಿಕೆಯನ್ನು ಪ್ರಾರಂಭಿಸಿದೆ. ಡಿಸೆಂಬರ್ 19ರಿಂದ ಡಿಸೆಂಬರ್ 23 ರ ತನಕ ಐದು ದಿನಗಳ ಕಾಲ ಚಂದಾದಾರಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ನೀವು ಕೂಡ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಬಯಸಿದರೆ ಇದು ಸೂಕ್ತ ಸಮಯ. ಈ ಸರಣಿಯ ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,409 ರೂ. ನಿಗದಿಪಡಿಸಲಾಗಿದೆ. 

ತಾಜ್ ಮಹಲ್ ಗೂ ತಟ್ಟಿದ ತೆರಿಗೆ ಬಿಸಿ; ಆಸ್ತಿ, ನೀರಿನ ತೆರಿಗೆ ಪಾವತಿಗೆ 15 ದಿನಗಳ ಗಡುವು

ಗೋಲ್ಡ್ ಇಟಿಎಫ್
ಮ್ಯೂಚುವಲ್ ಫಂಡ್ ಹೌಸ್ ಗಳ ಮೂಲಕ ಖರೀದಿಸುವ ಗೋಲ್ಡ್ ಇಟಿಎಫ್ ಗಳು (Gold ETFs) ಭೌತಿಕ ಚಿನ್ನ ಖರೀದಿಯನ್ನೇ ಹೋಲುತ್ತವೆ. ಇವು ಭೌತಿಕ ರೂಪದಲ್ಲಿ ಚಿನ್ನ ಇಲ್ಲದಿದ್ದರೂ ಬುಲಿಯನ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸುತ್ತವೆ. ಹೀಗಾಗಿ ಗೋಲ್ಡ್ ಇಟಿಎಫ್ ಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಇವು ಹೆಚ್ಚು ಪಾರದರ್ಶಕವಾಗಿರುವ ಕಾರಣ ಹೂಡಿಕೆ ಮಾಡಲು ಭಯಪಡಬೇಕಾಗಿಲ್ಲ. ಇನ್ನು ಇಟಿಎಫ್ ಗಳನ್ನು ಖರೀದಿಸಿದ 2.5 ವರ್ಷಗಳೊಳಗೆ ಮಾರಾಟ ಮಾಡಿದ್ರೆ ಆದಾಯ ತೆರಿಗೆ ಅಥವಾ ಎಸ್ ಟಿಸಿಜಿ ಪಾವತಿಸಬೇಕು. ಈ ಅವಧಿ ಬಳಿಕ ಮಾರಾಟ ಮಾಡಿದರೆ ದೀರ್ಘಾವಧಿ ಬಂಡಾವಳದಿಂದ ಗಳಿಸಿದ ಆದಾಯಕ್ಕೆ ತೆರಿಗೆ ಅಥವಾ ಎಲ್ಟಿಸಿಜಿ  (LTCG) ಪಾವತಿಸಬೇಕಾಗುತ್ತದೆ. 

Latest Videos
Follow Us:
Download App:
  • android
  • ios