ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕವಾಗಿದ್ದು, ಈಗಾಗಲೇ 4 ಕೋಟಿಗೂ ಅಧಿಕ ಜನ ರಿಟರ್ನ್ಸ್‌ ಸಲ್ಲಿಸಿರುವುದರಿಂದ ಡೆಡ್‌ಲೈನ್‌ ವಿಸ್ತರಣೆಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. 

ದೇಶದ ಬೆಳವಣಿಗೆ, ಅಭಿವೃದ್ಧಿಗೆ ಉದ್ಯೋಗಿಗಳು, ಉದ್ಯಮಿಗಳು ತೆರಿಗೆ ಕಟ್ಟೋದು ಅವಶ್ಯಕವಾಗಿದೆ. ಇದೇ ರೀತಿ, 2022-23ರ ಮೌಲ್ಯಮಾಪನ ವರ್ಷ ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ 31 ಡೆಡ್‌ಲೈನ್‌ ಆಗಿದೆ. ಆದರೆ ಅನೇಕ ತೆರಿಗೆದಾರರು ಹಾಗೂ ವೈಯಕ್ತಿಕ ತೆರಿಗೆದಾರರು ಮಾತ್ರ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿ ಎಂದು ಹಲವು ದಿನಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಅಭಿಯಾನ ನಡೆಸುತ್ತಿದ್ದಾರೆ. 

ವೇತನದಾರ ಉದ್ಯೋಗಿಗಳಿಗೆ ಹಾಗೂ ಹಿಂದೂ ಅವಿಭಜಿತ ಕುಟುಂಬಗಳಿಗೆ (Hindu Undivided Families ) ಆಡಿಟ್‌ ಅಗತ್ಯವಿಲ್ಲದ ಅಕೌಂಟ್‌ಗಳಿಗೆ ಜುಲೈ 31, 2022 ಐಟಿಆರ್‌ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಡೆಡ್‌ಲೈನ್‌ ಅನ್ನು ವಿಸ್ತರಿಸಿ ಎಂದು ಟ್ವಿಟ್ಟರ್‌ನಲ್ಲಿ “#Extend_Due_Date_ Immediately” ಕಲೆದ ಕೆಲವು ದಿನಗಳಿಂದ ಅಭಿಯಾನ ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಇದನ್ನು ವಿಸ್ತರಣೆ ಮಾಡುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ. 

ಆದಾಯ ತೆರಿಗೆ ಪಾವತಿಯಲ್ಲಿ ಅಕ್ಷಯ್ ಕುಮಾರ್‌ಗೆ ಅಗ್ರಸ್ಥಾನ, ಸನ್ಮಾನ್ ಪ್ರಮಾಣಪತ್ರ ಗೌರವ ಪಡೆದ ನಟ!

ಆದರೆ, ಜುಲೈ 31 ರೊಳಗೆ ಬಹುತೇಕ ತೆರಿಗೆದಾರರು ರಿಟರ್ನ್ಸ್‌ ಸಲ್ಲಿಕೆ ಮಾಡುವುದರಿಂದ ಡೆಡ್‌ಲೈನ್‌ (Deadline) ವಿಸ್ತರಣೆಯ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿಕೆ ನೀಡಿತ್ತು. ಅಲ್ಲದೆ, ಐಟಿಆರ್‌ ಫೈಲ್‌ ಮಾಡಿರುವವರ ಇತ್ತೀಚಿನ ಡೇಟಾವನ್ನು ನೋಡಿದರೆ ಕೇಂದ್ರ ಸರ್ಕಾರ ಹೇಳಿರುವುದು ಸರಿ ಎನಿಸುತ್ತದೆ.

ಜುಲೈ 28, 2022 ರವರೆಗೆ 4 ಕೋಟಿ 9 ಲಕ್ಷಕ್ಕೂ ಹೆಚ್ಚು ಮಂದಿ ಐಟಿಆರ್‌ ಅನ್ನು ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ಜುಲೈ 27ರವರೆಗಿನ ಡೇಟಾವನ್ನು ನೋಡಿದರೆ 3 ಕೋಟಿ 73 ಲಕ್ಷಕ್ಕೂ ಅಧಿಕ ಜನ ಐಟಿಆರ್‌ ಸಲ್ಲಿಸಿದ್ದರು. ಅಂದರೆ, ಜುಲೈ 28ರಂದು 36 ಲಕ್ಷಕ್ಕೂ ಅಧಿಕ ಜನ ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ರೀತಿ, ಜುಲೈ 26ರವರೆಗೆ 3.4 ಕೋಟಿಗೂ ಅಧಿಕ ತೆರಿಗೆದಾರರು ಅರ್ಜಿ ಸಲ್ಲಿಸಿದ್ದರು ಎಂದು ತೆರಿಗೆ ಇಲಾಖೆಯ ಡೇಟಾ ಹೇಳುತ್ತದೆ.

ನೀವು ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ 10,000ರೂ. ತೆರಿಗೆ ಉಳಿಸಬಹುದು, ಹೇಗೆ ? ಇಲ್ಲಿದೆ ಮಾಹಿತಿ

ಹೀಗೆ, ಕಳೆದ 3 ದಿನಗಳ ಡೇಟಾ ನೋಡಿದರೆ ಪ್ರತಿದಿನ ಅಂದಾಜು 33 ಲಕ್ಷ ಜನರು ಐಟಿಆರ್‌ ಅನ್ನು ಸಲ್ಲಿಕೆ ಮಾಡಿದ್ದಾರೆ. ಇದೇ ರೀತಿ ಟ್ರೆಂಡ್‌ ಮುಂದುವರಿದಲ್ಲಿ ಜುಲೈ 31ರೊಳಗೆ ಹೊಸದಾಗಿ ಸುಮಾರು 1 ಕೋಟಿ ಜನರು ಐಟಿಆರ್‌ ಸಲ್ಲಿಕೆ ಮಾಡಲಿದ್ದಾರೆ ಎಂದು ಅಂದಾಜು ಮಾಡಬಹುದು. ಐಟಿಆರ್‌ ಸಲ್ಲಿಕೆಗೆ ಡೆಡ್‌ಲೈನ್‌ ಸಮೀಪಿಸುತ್ತಿದ್ದಂತೆ ಹೆಚ್ಚು ಜನ ರಿಟರ್ನ್ಸ್‌ ಸಲ್ಲಿಕೆ ಮಾಡುತ್ತಿದ್ದಾರೆ ಈ ಹಿನ್ನೆಲೆ ಜುಲೈ 31 ರೊಳಗೆ ಐಟಿಆರ್‌ ಫೈಲ್‌ ಮಾಡುವವರ ಸಂಖ್ಯೆ ಅಂದರೆ ಅಂತಿಮ ಕೌಂಟ್‌ ಇನ್ನೂ ಹೆಚ್ಚಾಗಲಿದೆ ಎಂದು ಹೇಳಬಹುದು. ಡೆಡ್‌ಲೈನ್‌ ಮುಗಿಯುವುದರೊಳಗೆ 5 ಕೋಟಿಗೂ ಹೆಚ್ಚು ಮಂದಿ ಐಟಿಆರ್‌ ಸಲ್ಲಿಕೆ ಮಾಡಬಹುದು.

2021 - 22 ರ ಮೌಲ್ಯಮಾಪನ ವರ್ಷದಲ್ಲಿ ಸುಮಾರು 6.63 ಕೋಟಿ ಜನರು ಐಟಿಆರ್‌ ಸಲ್ಲಿಕೆ ಮಾಡಿದ್ದರು. ಆದರೆ, ಆ ವೇಳೆ ಆಡಿಟ್‌ ಮಾಡಬೇಕಾದ ಅಗತ್ಯವಿರುವ ತೆರಿಗೆದಾರರು ಸಹ ಅರ್ಜಿ ಸಲ್ಲಿಸಿದ್ದರು. ಆದರೆ, ಈ ವರ್ಷ ಆಡಿಟ್‌ ಮಾಡಬೇಕಾದ ಅಗತ್ಯವಿರುವ ತೆರಿಗೆದಾರರಿಗೆ ಅಕ್ಟೋಬರ್ 31, 2022 ಅಂತಿಮ ದಿನಾಂಕವಾಗಿದೆ. ಈ ಹಿನ್ನೆಲೆ ಜುಲೈ 31 ರೊಳಗೆ 5 ಕೋಟಿಗೂ ಅಧಿಕ ತೆರಿಗೆದಾರರು ಅರ್ಜಿ ಸಲ್ಲಿಸಿದರೆ, ಆಡಿಟ್‌ ಅಗತ್ಯವಿರುವ ಹಾಗೂ ಅಗತ್ಯ ಇಲ್ಲದಿರುವವರ ಸಂಖ್ಯೆ (audited + non-audited) ಎರಡೂ ಸೇರಿ ಈ ವರ್ಷ ಸಹ 6 ಕೋಟಿಯನ್ನು ದಾಟಲಿದೆ ಎಂದು ಅಂದಾಜಿಸಬಹುದು. 

ಈ ಹಿನ್ನೆಲೆ ಐಟಿಆರ್‌ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸುವ ಅಗತ್ಯತೆ ಇಲ್ಲ ಎಂದು ಹೇಳಬಹುದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನ ವಿಫಲವಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ನೀವಿನ್ನೂ ಐಟಿಆರ್‌ ಅರ್ಜಿ ಸಲ್ಲಿಸದಿದ್ದರೆ ದಂಡವನ್ನು ತಪ್ಪಿಸಿಕೊಳ್ಳಲು ಜುಲೈ 31 ರೊಳಗೆ ಸಲ್ಲಿಕೆ ಮಾಡಿ.