ಅಕ್ಷಯ ತೃತೀಯಕ್ಕೆ ಚಿನ್ನವನ್ನೇ ಏಕೆ ಖರೀದಿಸಬೇಕು? ಈ 5 ಯೋಜನೆಗಳಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಗಳಿಸಿ
ಅಕ್ಷಯ ತೃತೀಯ ಚಿನ್ನ ಖರೀದಿಗೆ ಶುಭದಿನ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ದಿನ ಚಿನ್ನದ ಬದಲು ಇತರ ಪರ್ಯಾಯ ಆಯ್ಕೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಬಂಪರ್ ರಿಟರ್ನ್ಸ್ ಗಳಿಸಬಹುದು. ಹಾಗಾದ್ರೆ ಚಿನ್ನದ ಬದಲು ಯಾವುದರಲ್ಲಿ ಹೂಡಿಕೆ ಮಾಡಬಹುದು?
Business Desk: ಇಂದು ಅಕ್ಷಯ ತೃತೀಯ. ಬಂಗಾರದ ಖರೀದಿಗೆ ಇದು ಶುಭದಿನ ಎಂಬ ನಂಬಿಕೆಯನ್ನು ಭಾರತೀಯರು ತಲಾತಲಾಂತರಗಳಿಂದ ಬೆಳೆಸಿಕೊಂಡು ಬಂದಿದ್ದಾರೆ. ಇನ್ನು ಚಿನ್ನವನ್ನು ಹೂಡಿಕೆಯ ಸಾಧವನ್ನಾಗಿ ಕೂಡ ಪರಿಗಣಿಸಲಾಗುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡಿದ ಹಣ ಸುರಕ್ಷಿತ ಎಂಬ ಭಾವನೆ ಇದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಕಳೆದ ಒಂದೆರಡು ವರ್ಷಗಳಿಂದ ಚಿನ್ನದ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡುತ್ತಿದೆ. ಹೀಗಾಗಿ ಚಿನ್ನ ಹೂಡಿಕೆದಾರರ ನೆಚ್ಚಿನ ಆಯ್ಕೆಗಳಲ್ಲೊಂದಾಗಿದೆ. ಆದರೆ, ಚಿನ್ನವನ್ನು ಹೊರತುಪಡಿಸಿ ಉತ್ತಮ ರಿಟರ್ನ್ಸ್ ನೀಡುವ ಇತರ ಹೂಡಿಕೆ ಆಯ್ಕೆಗಳು ಕೂಡ ಇವೆ. ಹಣವನ್ನು ಒಂದೇ ಕಡೆ ಹೂಡಿಕೆ ಮಾಡುವ ಬದಲು ಬೇರೆ ಬೇರೆ ಕಡೆಗಳಲ್ಲಿ ತೊಡಗಿಸೋದು ಉತ್ತಮ. ಇದರಿಂದ ಸುರಕ್ಷತೆ ಜೊತೆಗೆ ರಿಟರ್ನ್ಸ್ ಕೂಡ ಹೆಚ್ಚುತ್ತದೆ. ಹಾಗಾದ್ರೆ ಚಿನ್ನವನ್ನು ಹೊರತುಪಡಿಸಿ ಅಕ್ಷಯ ತೃತೀಯದಂದು ಹೂಡಿಕೆದಾರರಿಗೆ ಹೂಡಿಕೆ ಮಾಡಲು ಇರುವ ಇತರ ಅತ್ಯುತ್ತಮ ಆಯ್ಕೆಗಳು ಯಾವುವು? ಇಲ್ಲಿದೆ ಮಾಹಿತಿ.
1. ಸರ್ಕಾರಿ ಬಾಂಡ್ ಗಳು: ಸರ್ಕಾರದ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಇದು ಹೂಡಿಕೆದಾರರಿಗೆ ಸ್ಥಿರವಾದ ಆದಾಯವನ್ನು ಕೂಡ ನೀಡುತ್ತದೆ. ಹೀಗಾಗಿ ಚಿನ್ನದ ಬದಲಿ ಹೂಡಿಕೆ ಮಾರ್ಗಗಳನ್ನು ಹುಡುಕುತ್ತಿರೋರು ಸರ್ಕಾರಿ ಬಾಂಡ್ ಗಳನ್ನು ಪರಿಗಣಿಸಬಹುದು. ಉದಾಹರಣೆಗೆ ಟ್ರೆಷರ್ ಬಾಂಡ್ ಗಳು ನಿಶ್ಚಿತ ರಿಟರ್ನ್ಸ್ ನೀಡುತ್ತವೆ. ಹಾಗೆಯೇ ಹಣದುಬ್ಬರ ಹಾಗೂ ಮಾರುಕಟ್ಟೆ ಅನಿಶ್ಚಿತತೆಯಿಂದ ರಕ್ಷಣೆ ನೀಡುತ್ತವೆ ಎನ್ನುತ್ತಾರೆ ತಜ್ಞರು.
ಸೆನ್ಸೆಕ್ಸ್ 1062 ಅಂಕ ಕುಸಿತ: ಹೂಡಿಕೆದಾರರಿಗೆ ಒಂದೇ ದಿನ 7.33 ಲಕ್ಷ ಕೋಟಿ ನಷ್ಟ
2.ಷೇರು ಮಾರುಕಟ್ಟೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಕೂಡ ಅಕ್ಷಯ ತೃತೀಯವನ್ನು ಶುಭದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಹೂಡಿಕೆ ಮಾಡಿದ್ರ ಅದೃಷ್ಟದ ಜೊತೆಗೆ ಸಂಪತ್ತು ಕೂಡ ಹೆಚ್ಚುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಹೀಗಾಗಿ ಹೂಡಿಕೆ ಪ್ರಾರಂಭಿಸಲು ಅಕ್ಷಯ ತೃತೀಯದ ದಿನವನ್ನು ಶುಭದಿನ ಎಂದು ಭಾವಿಸಲಾಗುತ್ತದೆ.
3. ಇಂಡೆಕ್ಸ್ ಫಂಡ್ಸ್ : ಇದು ಒಂದು ವಿಧದ ಮ್ಯೂಚುವಲ್ ಫಂಡ್ ಅಥವಾ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಆಗಿದೆ. ಇದು ನಿರ್ದಿಷ್ಟ ಮಾರುಕಟ್ಟೆ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಈ ಫಂಡ್ ನಿರ್ವಹಣಾ ಶುಲ್ಕ ತುಂಬಾ ಕಡಿಮೆ ಇದೆ. ಇನ್ನು ಈ ಫಂಡ್ ಗಳು ಉತ್ತಮ ರಿಟರ್ನ್ಸ್ ಅನ್ನು ಕೂಡ ನೀಡುತ್ತವೆ.
4.ಕಮೋಡಿಟಿಸ್: ಕಮೋಡಿಟಿಸ್ ಹೂಡಿಕೆ ವಿಚಾರಕ್ಕೆ ಬಂದರೆ ಜಾಗತಿಕವಾಗಿ ಚಿನ್ನದ ಮೇಲಿನ ಹೂಡಿಕೆಯನ್ನೇ ಪರಿಗಣಿಸುತ್ತಾರೆ. ಇದರ ಹೊರತಾಗಿ ಇತರ ಆಸ್ತಿಗಳಾದ ತೈಲ ಅಥವಾ ಕೃಷಿ ಉತ್ಪನ್ನಗಳ ಮೇಲೆ ಹೂಡಿಕೆ ಮಾಡುವ ಮೂಲಕ ಹೆಚ್ಚುವರಿ ಲಾಭ ಗಳಿಸಬಹುದು. ಆದರೆ, ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಗಮನಿಸಿ ಹೂಡಿಕೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಹೂಡಿಕೆ ತಜ್ಞರು.
ಅಕ್ಷಯ ತೃತೀಯಗೆ ಜ್ಯುವೆಲ್ಲರಿಗಳಿಂದ ಭರ್ಜರಿ ಆಫರ್: ಬಾಲರಾಮ ಉಡುಗೊರೆ..!
5.ರಿಯಲ್ ಎಸ್ಟೇಟ್: ಚಿನ್ನ ಬಿಟ್ಟರೆ ಭಾರತೀಯರು ರಿಯಲ್ ಎಸ್ಟೇಟ್ ಹೂಡಿಕೆಯನ್ನು ಉತ್ತಮ ಆಯ್ಕೆ ಎಂದೇ ಪರಿಗಣಿಸುತ್ತ ಬಂದಿದ್ದಾರೆ. ಹೂಡಿಕೆ ಮಾಡಿದ ಹಣದಿಂದ ಹೆಚ್ಚಿನ ರಿಟರ್ನ್ಸ್ ಗಳಿಸಬೇಕೆಂಬ ಬಯಕೆ ಹೊಂದಿರೋರು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಮೇಲಿನ ಹೂಡಿಕೆಗಿಂತ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡೋದ್ರಿಂದ ಸಾಕಷ್ಟು ಪ್ರಯೋಜನಗಳಿವೆ. ಕಟ್ಟಡ ಅಥವಾ ಸ್ಥಳದಿಂದ ಬಾಡಿಗೆ ಪಡೆಯಬಹುದು. ಇನ್ನು ವರ್ಷದಿಂದ ವರ್ಷಕ್ಕೆ ಭೂಮಿಯ ಬೆಲೆಯಲ್ಲಿ ಹೆಚ್ಚಳವಾಗುತ್ತ ಹೋಗುತ್ತದೆ. ಅಲ್ಲದೆ, ಹಣದುಬ್ಬರ ಹೆಚ್ಚಳವಾದಂತೆ ಆಸ್ತಿ ಬೆಲೆಯಲ್ಲಿ ಕೂಡ ಏರಿಎಕಯಾಗುತ್ತದೆ. ಅದೇರೀತಿ ಪ್ರತಿವರ್ಷ ಬಾಡಿಗೆಯನ್ನು ಕೂಡ ನಿಗದಿತ ಪ್ರಮಾಣದಲ್ಲಿ ಹೆಚ್ಚಿಸಬಹುದು. ಸೂಕ್ತ ಸ್ಥಳದಲ್ಲಿ , ಮಾರುಕಟ್ಟೆ ಸ್ಥಿತಿಗತಿಗಳನ್ನು ಗಮನಿಸಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ಗಳಿಸಬಹುದು.