Asianet Suvarna News Asianet Suvarna News

ಹೆಂಡ್ತಿಗೆ ಇಷ್ಟವಾಗಿರೋ ಸೀರೆ ಇಟ್ಟಿಲ್ಲವೆಂದು ಅಂಗಡಿ ಮಾಲೀಕನಿಗೆ ಥಳಿಸಿ ಬಂದ ಗಂಡ!

ನನ್ನ ಪತ್ನಿಗೆ ಇಷ್ಟವಾಗಿರುವ ಒಂದು ಸೀರೆಯನ್ನೂ ನಿನ್ನ ಅಂಗಡಿಯಲ್ಲಿ ಇಟ್ಟುಕೊಂಡಿಲ್ಲ ಬಟ್ಟೆ ಅಂಗಡಿ ಮಾಲೀಕನಿಗೆ ಥಳಿಸಿದ ಘಟನೆ ಶಿರಸಿಯ ಸಿಪಿ ಬಜಾರ್‌ನಲ್ಲಿ ನಡೆದಿದೆ.

Sirsi husband beat up clothes shop owner because not collection his wife likes saree sat
Author
First Published Feb 26, 2024, 4:02 PM IST

ಕಾರವಾರ, ಉತ್ತರಕನ್ನಡ (ಫೆ.26): ತನ್ನ ಹೆಂಡತಿಗೆ ಬೇಕಾಗಿರುವ ಸೀರೆ ನಿನ್ನ ಅಂಗಡಿಯಲ್ಲಿ ಒಂದೂ ಇಟ್ಟುಕೊಂಡಿಲ್ಲ. ನೀನು ಸೀರೆ ಅಂಗಡಿಯನ್ನು ಇಟ್ಟುಕೊಂಡಿರುವುದೇ ವೇಸ್ಟ್‌ ಎಂಬ ಅರ್ಥದಲ್ಲಿ ಸೀರೆ ಅಂಗಡಿ ಸಿಬ್ಬಂದಿಗೆ ಗ್ರಾಹಕನೊಬ್ಬ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಬಟ್ಟೆ ಖರೀದಿ ವಿಚಾರದಲ್ಲಿ ಅಂಗಡಿಯಲ್ಲಿ ನಡೆದ ಹೊಡೆದಾಟವನ್ನು ಕೇಳಿದರೆ ನಿಮಗೆ ನಗು ಬಾರದೇ ಇರದು. ಕಾರಣ ಸಣ್ಣ ವಿಚಾರಕ್ಕೆ ದೊಡ್ಡ ಮಟ್ಟದ ಹೊಡೆದಾಟವೇ ನಡೆದುಹೋಗಿದ್ದು, ಈಗ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ  ಘಟನೆ ನಡೆದಿದೆ. ಅಂಗಡಿಯೊಳಗೆ ನಡೆದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ; ಪ್ರತಿವರ್ಷ 148 ಮಹಿಳೆಯರ ಮೇಲೆ ಅತ್ಯಾಚಾರ, 2,630 ಮಂದಿಗೆ ಕಿರುಕುಳ

ಮಹಮ್ಮದ್ ಎಂಬಾತ ನಿನ್ನೆ ಸಂಜೆ ವೇಳೆ ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಗೆ ಬಂದು ತನ್ನ ಪತ್ನಿಗೆ ಸೀರೆ ಖರೀದಿಸಿ ತೆಗೆದುಕೊಂಡು ಹೋಗಿದ್ದನು. ಆದರೆ, ಮನೆಯಲ್ಲಿ ಹೆಂಡತಿಗೆ ಹೋಗಿ ಸೀರೆಯನ್ನು ತೋರಿಸಿದಾಗ ಅದು ಆಕೆಗೆ ಇಷ್ಟವಾಗಿರಲಿಲ್ಲ. ಆದ್ದರಿಂದ ಸೀರೆಯನ್ನು ಬದಲಾಯಿಸಿಕೊಂಡು ಬರುವುದಾಗಿ ತಿಳಿಸಿ ಪುನಃ ಅಂಗಡಿಗೆ ಹೋಗಿದ್ದಾನೆ. ಆಗ, ಸೀರೆ ಅಂಗಡಿಯವರು ಪುನಃ ಬಂದು ಮಹಮ್ಮದ್‌ಗೆ ಸೀರೆಯನ್ನು ತೋರಿಸಲು ಮುಂದಾಗಿದ್ದಾರೆ. ಈ ವೇಳೆ ಗ್ರಾಹಕ ತಾನೇ ಸೀರೆಯನ್ನು ಆಯ್ಕೆ ಮಾಡಿಕೊಳ್ಳದೇ ಹೆಂಡತಿಗೆ ಸೀರೆಯ ಫೋಟೋ ಕಳಿಸಿ ಇಷ್ಟವಾಗಿದೆಯೇ ಎಂದು ಪರ್ಮಿಷನ್ ಕೇಳಿ ಸೀರೆ ಆಯ್ಕೆ ಮಾಡಲು ಮುಂದಾಗಿದ್ದನು. 

ಆದರೆ, ಸಾಕಷ್ಟು‌ ಹೊತ್ತು ಮತ್ತೆ ಸೀರೆಗೆ ಹುಡುಕಾಡಿದರೂ, ಮೊಹಮ್ಮದ್‌ನ ಹೆಂಡತಿಗೆ ಯಾವುದೇ ಸೀರೆ ಇಷ್ಟ ಆಗಿರಲಿಲ್ಲ. ಆಗ ಹೆಂಡತಿ ಮೇಲಿನ ಕೋಪವನ್ನು ಸೀರೆ ಮಾರಾಟ ಅಂಗಡಿಯವರ ಮೇಲೆ ತೋರಿಸಲು ಮುಂದಾಗಿದ್ದಾನೆ. ನಿಮಗೆ ಅಂಗಡಿಯಲ್ಲಿ ಒಂದು ಒಳ್ಳೆಯ ಸೀರೆ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲವಾ ಅಂತಾ ಅವಾಚ್ಯ ಪದಗಳಿಂದ ಸೀರೆ ಅಂಗಡಿ ಸಿಬ್ಬಂದಿಗೆ ಬೈದಿದ್ದಾನೆ. ಆಗೆ, ಸೀರೆ ಅಂಗಡಿ ಸಿಬ್ಬಂದಿ ನಿನಗೆ ಬಟ್ಟೆ ಬೇಕಾದ್ರೆ ನೋಡು, ಇಲ್ಲವಾದರೆ ಬೇರೆ ಅಂಗಡಿಗೆ ತೆರಳು. ನಿನ್ನ ಹಣ ರಿಟರ್ನ್ ಕೊಡುತ್ತೇವೆ ಎಂದು ಸೀರೆ ಅಂಗಡಿ ಸಿಬ್ಬಂದಿ ಬಲರಾಮ ಹೇಳಿದ್ದಾನೆ.

ಒಂದೇ ದಿನ ಆಪರೇಷನ್‌ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವು, ಇದೆಂಥಾ ಸರ್ಕಾರಿ ಆಸ್ಪತ್ರೆ!

ಆಗ, ಕೋಪಗೊಂಡ ಗ್ರಾಹಕ ಮೊಹಮ್ಮದ್‌ ಆತನ ಜೊತೆಗೆ ಕರೆದುಕೊಂಡು ಬಂದಿದ್ದ ಸರ್ಫರಾಜ್ ಹಾಗೂ ಇತರರ ಸಹಾಯದಿಂದ ಏಕಾಏಕಿ ಸೀರೆ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ, ಆರೋಪಿ‌ ಮಹಮ್ಮದ್ ಜೊತೆಗಿದ್ದವರು ಕೂಡಾ ಅಂಗಡಿ ಸಿಬ್ಬಂದಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಆಗ ಎರಡೂ ಕಡೆಯವರು (ಸೀರೆ ಅಂಗಡಿ ಸಿಬ್ಬಂದಿ ಹಾಗೂ ಖರೀದಿಗೆ ಬಂದಿದ್ದ ಗ್ರಾಹಕರ ಗುಂಪು) ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ಸಂಬಂಧಿಸಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Follow Us:
Download App:
  • android
  • ios