ಚಿನ್ನದ ಬೆಲೆ ಇಳಿಕೆಯಾಗಿದ್ದು, ಖರೀದಿಗೆ ಸುವರ್ಣಾವಕಾಶವಿದೆ. ತಜ್ಞರು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚುತ್ತಿದ್ದು, ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ರಾಬರ್ಟ್ ಕಿಯೋಸಾಕಿ ಬೆಳ್ಳಿಯನ್ನು ದುಬಾರಿ ಹೂಡಿಕೆ ಎಂದು ಕರೆದಿದ್ದಾರೆ.
ಸತತ ಆರು ದಿನಗಳಿಂದ ಚಿನ್ನದ ಬೆಲೆ (Gold price)ಯಲ್ಲಿ ಇಳಿಕೆ ಕಂಡು ಬರ್ತಿದೆ. ಷೇರು ಮಾರುಕಟ್ಟೆ (Stock market), ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗ್ತಿದೆ. ಬೇಡಿಕೆ ಕಡಿಮೆ ಆಗಿರುವ ಕಾರಣ ಚಿನ್ನದ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ. ಚಿನ್ನಾಭರಣ ಖರೀದಿಗೆ ಇದು ಸುವರ್ಣಾವಕಾಶವಾಗಿದೆ. ಬೆಲೆ ಇಳಿಕೆ ಆಗಿರುವ ಕಾರಣ ಚಿನ್ನ ಖರೀದಿ ಮಾಡ್ಬಹುದು ಎನ್ನುತ್ತಿರುವ ತಜ್ಞರು, ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಿ ಮೇಲೆ ಹೂಡಿಕೆ ಮಾಡಿ ಎನ್ನುವ ಸಲಹೆ ನೀಡಿದ್ದಾರೆ. ಬೆಳ್ಳಿ (silver) ವಿಷ್ಯದಲ್ಲಿ ತಜ್ಞರು ಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಇಳಿಯೋ ಬದಲು ಏರಿಕೆಯಾಗುವ ಸಾಧ್ಯತೆ ಇದೆಯಂತೆ.
ಬೆಳ್ಳಿ ಮೇಲೆ ಹೂಡಿಕೆ ಏಕೆ? : ಭಾರತದಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದೇ ನಂಬಲಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಚಿನ್ನದ ಮೇಲೆ ಹೂಡಿಕೆ ಮಾಡ್ತಾರೆ. ಇಲ್ಲವೆ ಚಿನ್ನದ ಆಭರಣಗಳನ್ನು ಖರೀದಿ ಮಾಡಿಟ್ಟುಕೊಳ್ತಾರೆ. ಆದ್ರೆ ಬೆಳ್ಳಿ ವಿಷ್ಯದಲ್ಲಿ ಜನರು ದ್ವಂದ್ವ ಅಭಿಪ್ರಾಯ ಹೊಂದಿದ್ದಾರೆ. ಬೆಳ್ಳಿಯನ್ನು ಆಭರಣದ ಜೊತೆಗೆ ಕೈಗಾರಿಕೆಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳ್ಳಿಯ ಕೈಗಾರಿಕಾ ಬಳಕೆ ನಿರಂತರವಾಗಿ ಹೆಚ್ಚುತ್ತಿದೆ. ಹಾಗಾಗಿ, ತಜ್ಞರು ಬೆಳ್ಳಿ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಎಲೆಕ್ಟ್ರಾನಿಕ್ಸ್, ಸೌರ ಫಲಕಗಳು, ವಿದ್ಯುತ್ ವಾಹನಗಳು ಮತ್ತು ಅರೆವಾಹಕಗಳು ಸೇರಿದಂತೆ ಕೈಗಾರಿಕೆಗೆ ಬಳಸುವ ಬೆಳ್ಳಿ ಬೇಡಿಕೆ ಶೇಕಡಾ 50 ಕ್ಕಿಂತ ಹೆಚ್ಚಿದೆ.
ಟಾಪ್ 10 ಅತಿದೊಡ್ಡ ವಜ್ರದ ಗಣಿಗಳು: ಭಾರತದಲ್ಲಿ ಎಷ್ಟಿವೆ?
ದುಬಾರಿ ಹೂಡಿಕೆ ಬೆಳ್ಳಿ : ಅಮೆರಿಕದ ಉದ್ಯಮಿ ಮತ್ತು ಪ್ರಸಿದ್ಧ ಪುಸ್ತಕ ರಿಚ್ ಡ್ಯಾಡ್ ಪೂರ್ ಡ್ಯಾಡ್ನ ಲೇಖಕ ರಾಬರ್ಟ್ ಕಿಯೋಸಾಕಿ, ಬೆಳ್ಳಿಯನ್ನು ಅತ್ಯಂತ ದುಬಾರಿ ಹೂಡಿಕೆ ಎಂದಿದ್ದಾರೆ. 2025 ರಲ್ಲಿ ಬೆಳ್ಳಿಯ ಬೆಲೆ ದ್ವಿಗುಣಗೊಳ್ಳಲಿದೆ. ಪ್ರತಿ ಔನ್ಸ್ಗೆ 70 ಡಾಲರ್ ತಲುಪಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಬೆಳ್ಳಿ , ಚಿನ್ನ ಅಥವಾ ಬಿಟ್ಕಾಯಿನ್ಗಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ಕಿಯೋಸಾಕಿ ಹೇಳಿದ್ದಾರೆ. ಚಿನ್ನ ಮತ್ತು ಬಿಟ್ಕಾಯಿನ್ಗಳ ಪೂರೈಕೆ ಕಡಿಮೆಯಾಗುವುದಿಲ್ಲ, ಆದರೆ ಬೆಳ್ಳಿಯ ಪೂರೈಕೆ ಕಡಿಮೆಯಾಗುತ್ತಿದೆ. ಆದ್ದರಿಂದ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ ಎಂದು ಕಿಯೋಸಾಕಿ ಹೇಳಿದ್ದಾರೆ.
ಹೂಡಿಕೆದಾರ ಜಿಮ್ ರೋಜರ್ಸ್ ಅಭಿಪ್ರಾಯವೂ ಇದೇ ಆಗಿದೆ. ಬೆಳ್ಳಿ ಬೆಲೆ ವೇಗವಾಗಿ ಏರುತ್ತದೆ ಎಂದು ಅವರು ನಂಬಿದ್ದಾರೆ. ಮುಂದಿನ 10 ರಿಂದ 15 ವರ್ಷಗಳಲ್ಲಿ ಆಸ್ತಿ ಬೆಲೆ ಏರಿಕೆ ಆಗ್ಬೇಕು ಅಂದ್ರೆ ಅದು ಬೆಳ್ಳಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬೆಳ್ಳಿ ಇನ್ನೂ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ ಸುಮಾರು ಶೇಕಡಾ 40 ರಷ್ಟು ಕಡಿಮೆ ವಹಿವಾಟು ನಡೆಸುತ್ತಿದೆ ಎಂದು ರೋಜರ್ಸ್ ಹೇಳಿದ್ದಾರೆ. ಈಗಾಗಲೇ ದಾಖಲೆಯ ಮಟ್ಟದಲ್ಲಿರುವುದರಿಂದ ಚಿನ್ನಕ್ಕಿಂತ ಬೆಳ್ಳಿ ಹೆಚ್ಚು ಆಕರ್ಷಕ ಖರೀದಿಯಾಗಿದೆ ಎಂದಿದ್ದಾರೆ.
ಹೋಮ್ ಲೋನ್ ಪಡೆದವರಿಗೆ ಸುಗ್ಗಿ, ಶೇ. 8ಕ್ಕಿಂತ ಕೆಳಗಿಳಿಯಲಿದೆ ಬಡ್ಡಿ!
ಭಾರತದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 94,000 ರೂಪಾಯಿ ಇದೆ. ಕಳೆದ ಶುಕ್ರವಾರ ಇದು 99,000 ರೂಪಾಯಿಗೆ ಲಭ್ಯವಿತ್ತು. ಕೆಲ ದಿನಗಳ ಹಿಂದೆ ಬೆಳ್ಳಿ ಪ್ರತಿ ಕಿಲೋಗ್ರಾಂಗೆ 1 ಲಕ್ಷ ರೂಪಾಯಿ ಗಡಿ ದಾಡಿತ್ತು. ಸದ್ಯ ಬೆಳ್ಳಿ ಬೆಲೆ ಇಳಿದಿದ್ದು, ಕುಸಿತವು ಹೂಡಿಕೆಗೆ ಉತ್ತಮ ಅವಕಾಶವಾಗಿದೆ. ಬೆಳ್ಳಿಯನ್ನು ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದ್ದು, ನಿಶ್ಚಿತವಾಗಿಯೂ ಬೆಳ್ಳಿ ಬೆಲೆ ಏರಲಿದೆ.
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವನ್ನು ಅವಲಂಬಿಸಿದೆ. 10 ಗ್ರಾಂ ಬೆಳ್ಳಿ ಬೆಲೆ 939 ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ಬೆಲೆ 9,390 ರೂಪಾಯಿ ಹಾಗೂ 1000 ಗ್ರಾಂ ಬೆಲೆ 93,900 ರೂಪಾಯಿ ಇದೆ.
