ಐಟಿ ವಲಯಕ್ಕೆ ಸಿದ್ದರಾಮಯ್ಯ ಕೃಪಾಕಟಾಕ್ಷ: ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ರಚನೆ
ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ, ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ, ನವೋದ್ಯಮಿಗಳಿಗೆ ವಿಶ್ವದರ್ಜೆಯ ಪರಿಪೋಷಣ ಕೇಂದ್ರ, ಹೆಲ್ತ್-ಟೆಕ್, ಮೆಡ್-ಟೆಕ್ ಎಕ್ಸಲೆನ್ಸ್ ಸೆಂಟರ್, ವೈರ್‌ಲೆಸ್ ಟೆಕ್ನಾಲಜಿ ಪ್ರೋತ್ಸಾಹಕ್ಕೆ ಬಜೆಟ್‌ನಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.
ಬೆಂಗಳೂರು (ಜು.08): ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ, ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ, ನವೋದ್ಯಮಿಗಳಿಗೆ ವಿಶ್ವದರ್ಜೆಯ ಪರಿಪೋಷಣ ಕೇಂದ್ರ, ಹೆಲ್ತ್-ಟೆಕ್, ಮೆಡ್-ಟೆಕ್ ಎಕ್ಸಲೆನ್ಸ್ ಸೆಂಟರ್, ವೈರ್‌ಲೆಸ್ ಟೆಕ್ನಾಲಜಿ ಪ್ರೋತ್ಸಾಹಕ್ಕೆ ಬಜೆಟ್‌ನಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಐಟಿ ಕ್ಷೇತ್ರದ ಅಭಿವೃದ್ಧಿಗೆ ಪ್ರಸಕ್ತ ಬಜೆಟ್ ವಿಶೇಷ ಕೊಡುಗೆ ನೀಡಿದೆ. ಬೆಂಗಳೂರಿನ ಕಾಡುಗೋಡಿಯಲ್ಲಿ 100 ಎಕರೆ ಪ್ರದೇಶದಲ್ಲಿ ಟೆಕ್ನಾಲಜಿ ಇನ್ನೋವೇಶನ್ ಪಾರ್ಕ್ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ. ಇಲ್ಲಿ ತಾಂತ್ರಿಕ ಸಂಶೋಧನಾ ಸಂಸ್ಥೆ ಸ್ಥಾಪನೆ ಜತೆ ಸೆಮಿಕಂಡಕ್ಟರ್ ಸಂಶೋಧನೆ, ಅಭಿವೃದ್ಧಿ, ಪರೀಕ್ಷೆ, ವಿನ್ಯಾಸದ ಸಂಬಂಧ ಸೌಲಭ್ಯ ಒದಗಿಸುತ್ತೇವೆ.
ನವೋದ್ಯಮಿಗಳಿಗೆ .50 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆಯ ಪರಿಪೋಷಣ ಕೇಂದ್ರ ಸ್ಥಾಪಿಸಲಾಗುವುದು. ಈ ವರ್ಷ ಇದಕ್ಕೆ . 10 ಕೋಟಿ ನೀಡುವುದಾಗಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ ಕರ್ನಾಟಕ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನೀತಿ ಅನುಷ್ಠಾನಕ್ಕೆ ‘ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ’(ಕೆಎಸ್‌ಆರ್‌ಎಫ್) ರಚಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಂಶೋಧನೆ ಮತ್ತು ನಾವೀನ್ಯತೆ ವಿಚಾರದಲ್ಲಿ ಉದ್ಯಮ, ವಿಶ್ವವಿದ್ಯಾನಿಲಯ, ಸಂಶೋಧನಾ ಸಂಸ್ಥೆ ಮತ್ತು ಸರ್ಕಾರಗಳ ನಡುವೆ ಸಮನ್ವಯಕ್ಕಾಗಿ ‘ಇ-ಪ್ಲಾಟ್‌ಫಾಮ್‌ರ್’ ರಚನೆ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗಿದೆ.
Karnataka Budget 2023: ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗಕ್ಕೆ ಭರ್ಜರಿ ಕೊಡುಗೆ ನೀಡಿದ ಸಿದ್ದರಾಮಯ್ಯ
ಸಾಮಾನ್ಯರು ರಚಿಸಿದ ತಳಹಂತದ ನಾವೀನ್ಯತೆ ಗುರುತಿಸಿ, ವಾಣಿಜ್ಯೀಕರಣಕ್ಕೆ ಬೆಂಬಲ ನೀಡುವ ಯೋಜನೆಗೆ .5 ಕೋಟಿ ನೀಡುವುದಾಗಿ ಹೇಳಿದ್ದಾರೆ. ಇನ್ನು ಸ್ಟಾರ್ಟ್‌ಅಪ್‌ಗಳ ಸಮಸ್ಯೆ ಪರಿಹಾರ, ವಿಶೇಷ ಒತ್ತು ನೀಡಲು ‘ಪ್ರೊಪೆಲ್’ ಯೋಜನೆಯನ್ನು .5ಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ. ಈ ವರ್ಷ .1 ಕೋಟಿ ಅನುದಾನ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ. ಸ್ಟಾರ್ಟ್‌ಅಪ್‌ಗೆ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್, ಮಾರ್ಕೆಟ್ ಅಸೆಸ್ ಪ್ರೋಗ್ರಾಂಗೆ .3 ಕೋಟಿ ಒದಗಿಸಲಾಗುವುದು. ಈ ವರ್ಷವೇ .1 ಕೋಟಿ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ: ನ್ಯೂ ಏಜ್ ಇನ್‌ಕ್ಯೂಬೇಶನ್ ನೆಟ್‌ವರ್ಕ್ ಕೇಂದ್ರ ಬೆಂಬಲಿಸಲು .4 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ವರ್ಗಾವಣೆ ಸಂಸ್ಥೆ ಸೃಜಿಸುತ್ತೇವೆ. ಈ ವರ್ಷ .2 ಕೋಟಿ ಅನುದಾನ ನಿಗದಿಸಿದ್ದಾರೆ. ಹೆಲ್ತ್-ಟೆಕ್ ಮತ್ತು ಮೆಡ್-ಟೆಕ್‌ನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರವನ್ನು .50 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಈ ವರ್ಷ .10 ಕೋಟಿ ಅನುದಾನ ನೀಡುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಜೈವಿಕ-ಬ್ಯಾಂಕ್ ಸ್ಥಾಪನೆಗೆ .5 ಕೋಟಿ ವೆಚ್ಚ, ಈ ವರ್ಷ .2 ಕೋಟಿ ಅನುದಾನ ನಿಗದಿ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವೈರ್‌ಲೆಸ್ ವೈರ್ ಟೆಕ್ನಾಲಜೀಸ್ ಇನ್ ಕರ್ನಾಟಕ’ .25 ಕೋಟಿ ವೆಚ್ಚದಲ್ಲಿ ಸ್ಥಾಪನೆ. ಇದಕ್ಕಾಗಿ ಈ ವರ್ಷ .5ಕೋಟಿ ಅನುದಾನ ನೀಡಲಾಗುವುದು. ‘ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡಿಸೈನ್ ಕೇಂದ್ರ’ವನ್ನು .20 ಕೋಟಿ ಯೋಜನಾ ವೆಚ್ಚದಲ್ಲಿ ಸ್ಥಾಪನೆ, ಇದಕ್ಕಾಗಿ ಈ ವರ್ಷ .8 ಕೋಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
Karnataka Budget 2023: ಬಿಜೆಪಿ ಸರ್ಕಾರವನ್ನು ದ್ವೇಷಿಸುವ ರಿವರ್ಸ್‌ಗೇರ್ ಬಜೆಟ್: ಬೊಮ್ಮಾಯಿ
ಐಟಿ ಇಂಡಸ್ಟ್ರಿಗೆ ಪ್ರೋತ್ಸಾಹ: ಬಜೆಟ್‌ನಲ್ಲಿ ಐಟಿ ಇಂಡಸ್ಟ್ರಿಗೆ ಸಿದ್ದರಾಮಯ್ಯ ನೀಡಿರುವ ಕೊಡುಗೆ ಸ್ವಾಗತಾರ್ಹ. ಹೊಸ ಪರಿಕಲ್ಪನೆಯ ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆಗೆ ಮುಂದಾಗಿರುವುದು ಅಲ್ಲದೆ ತಳಮಟ್ಟದ ಸಂಶೋಧನೆಗಳಿಗೂ ಪ್ರಾಶಸ್ತ್ಯ ನೀಡಿರುವುದು ಒಳ್ಳೆಯ ವಿಚಾರ. ಇವೆಲ್ಲವೂ ವ್ಯವಸ್ಥಿತವಾಗಿ ಅನುಷ್ಠಾನಗೊಂಡರೆ ಐಟಿ ಇಂಡಸ್ಟ್ರಿ ಹಾಗೂ ಸಂಶೋಧನಾ ಪ್ರವೃತ್ತಿಗೆ ಪ್ರೋತ್ಸಾಹ ದೊರೆಯುವುದರಲ್ಲಿ ಸಂಶಯವಿಲ್ಲ. ಉಳಿದಂತೆ ಈ ಹಿಂದೆಯೇ ಕೇಂದ್ರ ಸರ್ಕಾರ ಇಎಸ್‌ಎಂಡಿ ಕ್ಲಸ್ಟರ್ ಘೋಷಿಸಿದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದ ಅನುದಾನ ಬೇಕಿತ್ತು. ಜೊತೆಗೆ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ ಐಟಿ ಸ್ಥಾಪನೆಗೆ ಒತ್ತು ನೀಡಬೇಕಿತ್ತು.
- ಜಗದೀಶ್ ಹಿರೇಮಠ, ಉದ್ಯಮಿ, ಏಬಲ್ ಡಿಸೈನ್ ಆ್ಯಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೈ.ಲಿ