Asianet Suvarna News Asianet Suvarna News

ಸೆಪ್ಟೆಂಬರ್ ನಲ್ಲಿ ಒಟ್ಟು 13 ದಿನ ಬ್ಯಾಂಕಿಗೆ ರಜೆ; ಆರ್ ಬಿಐ ಹಾಲಿಡೇ ಕ್ಯಾಲೆಂಡರ್ ಹೀಗಿದೆ

ಪ್ರತಿ ತಿಂಗಳ ಬ್ಯಾಂಕ್ ರಜೆಗೆ ಸಂಬಂಧಿಸಿ ಆರ್ ಬಿಐ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಆರ್ ಬಿಐ ಸೆಪ್ಟೆಂಬರ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದೆ. ಹಾಗಾದ್ರೆ ಸೆಪ್ಟೆಂಬರ್ ನಲ್ಲಿ ಎಷ್ಟು ದಿನ ಬ್ಯಾಂಕಿಗೆ ರಜೆಯಿದೆ? ಇಲ್ಲಿದೆ ಮಾಹಿತಿ.  

September 2022 Bank Holidays Banks to remain shut for 13 days next month check state wise list
Author
Bangalore, First Published Aug 25, 2022, 5:34 PM IST

ನವದೆಹಲಿ (ಆ.25): ಸೆಪ್ಟೆಂಬರ್ ತಿಂಗಳ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸೆಪ್ಟೆಂಬರ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ ನಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕಿಗೆ ರಜೆಯಿದೆ. ಇದರಲ್ಲಿ ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳ ರಜೆಗಳು ಕೂಡ ಸೇರಿವೆ. ಬ್ಯಾಂಕುಗಳಿಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ಹಾಲಿ ಡೇ ಲಿಸ್ಟ್ ಬಿಡುಗಡೆ ಮಾಡುತ್ತದೆ. ಬ್ಯಾಂಕಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆ ಇರೋದಿಲ್ಲ. ಆದ್ರೆ ಬ್ಯಾಂಕಿಗೆ ಹೋಗಿ ಮಾಡುವ ಯಾವುದಾದ್ರೂ ಕೆಲಸವಿದ್ರೆ ಮಾತ್ರ ರಜಾಪಟ್ಟಿ ಗಮನಿಸಿ ಹೋಗೋದು ಉತ್ತಮ. ಅಂದ ಹಾಗೇ ಎಲ್ಲ ಹಬ್ಬಗಳಿಗೆ ನೀಡುವ ರಜೆಗಳು ಎಲ್ಲ ರಾಜ್ಯಗಳು ಅಥವಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಅಥವಾ ಹಬ್ಬಗಳಿಗೆ ಅನುಗುಣವಾಗಿ ಅನ್ವಯಿಸುತ್ತವೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ (Sunday) ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಮುಂದಿನ ತಿಂಗಳು ಬ್ಯಾಂಕಿಗೆ ಹೋಗುವ ಪ್ಲ್ಯಾನ್ ಇರೋರು ತಪ್ಪದೇ ಈ ಹಾಲಿ ಡೇ ಲಿಸ್ಟ್ ನೋಡಿಕೊಂಡು ಹೋಗೋದು ಒಳ್ಳೆಯದು. ಇಲ್ಲವಾದ್ರೆ ನೀವು ಅಂದುಕೊಂಡ ಕೆಲಸ ಆ ದಿನ ಪೂರ್ಣಗೊಳ್ಳದೆ ಇರಬಹುದು. ಇದ್ರಿಂದ ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. 

ಬ್ಯಾಂಕ್ (Bank) ರಜೆಗಳನ್ನು (Holidays)  ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ. 

ಸರ್ಕಾರಿ ಉದ್ಯೋಗಿಗಳೇ ಗಮನಿಸಿ, 7ನೇ ವೇತನ ಆಯೋಗದಡಿಯಲ್ಲಿ ದೊರೆತ ಸಂಬಳ ಬಾಕಿಗಿದೆ ತೆರಿಗೆ ಪರಿಹಾರ

ಸೆಪ್ಟೆಂಬರ್ ತಿಂಗಳ ರಜಾಪಟ್ಟಿ ಹೀಗಿದೆ:
ಸೆಪ್ಟೆಂಬರ್ 1: ಗಣೇಶ ಚತುರ್ಥಿ ಹಬ್ಬದ ಎರಡನೇ ದಿನದ ಆಚರಣೆ ಹಿನ್ನೆಲೆಯಲ್ಲಿ ಪಣಜಿಯಲ್ಲಿ (Panaji) ಬ್ಯಾಂಕಿಗೆ ರಜೆ
ಸೆಪ್ಟೆಂಬರ್ 4: ಭಾನುವಾರ
ಸೆಪ್ಟೆಂಬರ್ 6: ಕರ್ಮ ಪೂಜೆ (Karma Pooje) ಆಚರಣೆ ಹಿನ್ನೆಲೆಯಲ್ಲಿ ರಾಂಚಿಯಲ್ಲಿ (Ranchi) ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 7: ಮೊದಲ ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೊಚ್ಚಿ (Kochi) ಹಾಗೂ ತಿರುವನಂತಪುರಂನಲ್ಲಿ (Thiruvananthapuram) ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 8: ತಿರುಓಣಂ ಹಿನ್ನೆಲೆಯಲ್ಲಿ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 9: ಇಂದ್ರಜಾತ್ರ ಹಿನ್ನೆಲೆಯಲ್ಲಿ ಗ್ಯಾಂಗ್ಟಕ್ ನಲ್ಲಿ  ಬ್ಯಾಂಕುಗಳಿಗೆ ರಜೆ.
ಸೆಪ್ಟೆಂಬರ್ 10: ಶ್ರೀನಾರಾಯಣ ಗುರು ಜಯಂತಿ ಹಿನ್ನೆಲೆಯಲ್ಲಿ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕುಗಳಿಗೆ ರಜೆ. ಎರಡನೇ ಶನಿವಾರವಾದ ಕಾರಣ ದೇಶದ ಇತರ ಭಾಗಗಳಲ್ಲೂ ರಜೆ.
ಸೆಪ್ಟೆಂಬರ್ 11: ಭಾನುವಾರ
ಸೆಪ್ಟೆಂಬರ್ 18: ಭಾನುವಾರ

ದುಬಾರಿ ವಸ್ತು ಖರೀದಿಗೆ ಖಾತೆಯಲ್ಲಿ ಹಣವಿಲ್ಲವಾ? ಚಿಂತೆ ಬೇಡ, ಡೆಬಿಟ್ ಕಾರ್ಡ್ ಇದ್ರೆ ಸಾಕು, ಸಿಗುತ್ತೆ ಇಎಂಐ ಸೌಲಭ್ಯ

ಸೆಪ್ಟೆಂಬರ್ 21: ಶ್ರೀನಾರಾಯಣ ಗುರು ಸಮಾಧಿ ದಿನದ ಹಿನ್ನೆಲೆಯಲ್ಲಿ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ರಜೆ
ಸೆಪ್ಟೆಂಬರ್ 24: ನಾಲ್ಕನೇ ಶನಿವಾರ
ಸೆಪ್ಟೆಂಬರ್ 25: ಭಾನುವಾರ
ಸೆಪ್ಟೆಂಬರ್ 26: ನವರಾತ್ರಿ ಸ್ಥಾಪನ ಹಿನ್ನೆಲೆಯಲ್ಲಿ ಇಂಫಾಲ್ ಹಾಗೂ ಜೈಪುರದಲ್ಲಿ ಬ್ಯಾಂಕುಗಳಿಗೆ ರಜೆ.

Follow Us:
Download App:
  • android
  • ios