Asianet Suvarna News Asianet Suvarna News

ದುಬಾರಿ ವಸ್ತು ಖರೀದಿಗೆ ಖಾತೆಯಲ್ಲಿ ಹಣವಿಲ್ಲವಾ? ಚಿಂತೆ ಬೇಡ, ಡೆಬಿಟ್ ಕಾರ್ಡ್ ಇದ್ರೆ ಸಾಕು, ಸಿಗುತ್ತೆ ಇಎಂಐ ಸೌಲಭ್ಯ

ಕ್ರೆಡಿಟ್ ಕಾರ್ಡ್ ಇಲ್ಲದವರು ಶಾಪಿಂಗ್ ಗೆ ಹೋದಾಗ ಇನ್ಮುಂದೆ ಖಾತೆಯಲ್ಲಿ ಹಣವಿಲ್ಲ ಎಂದು ಡೆಬಿಟ್ ಕಾರ್ಡ್ ಉಜ್ಜದೆ ವಾಪಾಸ್ ಬರುವ ಅಗತ್ಯವಿಲ್ಲ. ಈಗ ಕೆಲವು ಬ್ಯಾಂಕುಗಳು ಡೆಬಿಟ್ ಕಾರ್ಡ್ ಮೇಲೆ ಕೂಡ ಇಎಂಐ ಸೌಲಭ್ಯ ಕಲ್ಪಿಸುತ್ತಿವೆ. 
 

EMI on debit cards How to check eligibility and how to avail it
Author
Bangalore, First Published Aug 24, 2022, 6:37 PM IST

Business Desk:ನಿಮಗೆ ಹಣದ ತುರ್ತು ಅವಶ್ಯಕತೆಯಿದ್ದಾಗ ಅಥವಾ ಯಾವುದಾದ್ರೂ ದುಬಾರಿ ವಸ್ತು ಖರೀದಿಸಬೇಕಿದ್ರೆ ಕ್ರೆಡಿಟ್ ಕಾರ್ಡ್ ಕೈಯಲ್ಲಿದ್ರೆ ಏನೋ ನೆಮ್ಮದಿ. ಆದರೆ, ಕೆಲವರ ಬಳಿ ಕ್ರಡಿಟ್ ಕಾರ್ಡ್ ಇಲ್ಲ. ನೀವು ಕೂಡ ಅಂಥವರ ಸಾಲಿನಲ್ಲಿದ್ರೆ ಡೋಂಟ್ ವರಿ. ಈಗ ನಿಮ್ಮ ಡೆಬಿಟ್ ಕಾರ್ಡ್ ಮೂಲಕನೇ ಕ್ರೆಡಿಟ್ ಕಾರ್ಡ್ ನಲ್ಲಿ ಮಾಡೋ ಕೆಲಸಗಳನ್ನು ಮಾಡಿ ಮುಗಿಸಬಹುದು. ಹೌದು, ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಗಳ ಮೇಲೆ ಇಎಂಐ ನೀಡಲು ಪ್ರಾರಂಭಿಸಿವೆ. ಡೆಬಿಟ್ ಕಾರ್ಡ್ ಗಳ ಬಳಕೆದಾರರಿಗೆ ಇಎಂಐ ಹಾಗೂ ಕ್ರೆಡಿಟ್ ಎರಡೂ ಸೇವೆಗಳನ್ನು ನೀಡಲಾಗುತ್ತದೆ. ಆದರೆ, ಡೆಬಿಟ್ ಕಾರ್ಡ್ ಇಎಂಐ ಸೌಲಭ್ಯ ಪಡೆಯಲು ನೀವು ಬ್ಯಾಂಕು ನಮೂದಿಸಿರುವ ಆರ್ಹತೆಗಳನ್ನು ಪೂರ್ಣಗೊಳಿಸೋದು ಅಗತ್ಯ. ಇಎಂಐ ಡೆಬಿಟ್ ಕಾರ್ಡ್ ನಿಮಗೆ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ಬ್ಯಾಂಕ್ ನಿರ್ಧರಿಸುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಇಎಂಐ ಆರ್ಡರ್ ಗಳನ್ನು ನೀಡಲು ಗ್ರಾಹಕರ ಖಾತೆಗಳಲ್ಲಿ ಯಾವುದೇ ಕನಿಷ್ಠ ಠೇವಣಿ ಇಡಬೇಕಾದ ಅಗತ್ಯವಿಲ್ಲ. ಆದರೆ, ಪ್ರತಿ ತಿಂಗಳು ಇಎಂಐ ಪಾವತಿಗಳನ್ನು ಮಾಡಲು ಅವರ ಖಾತೆಯಲ್ಲಿ ಸಾಕಷ್ಟು ಹಣವಿರುತ್ತದೆ ಎಂಬುದನ್ನು ಅವರು ದೃಢೀಕರಿಸಬೇಕು. ಡೆಬಿಟ್ ಕಾರ್ಡ್ ಮೇಲೆ ಎಷ್ಟು ಹಣ ಪಡೆದು ಇಎಂಐ ಮೇಲೆ ಪಾವತಿಸಬಹುದು ಎಂಬುದು ಬ್ಯಾಂಕ್ ನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. 

ಇಎಂಐ ಆರ್ಹತೆ ಚೆಕ್ ಮಾಡೋದು ಹೇಗೆ?
ಡೆಬಿಟ್ ಕಾರ್ಡ್ ಮೇಲೆ ಇಎಂಐ ಸೌಲಭ್ಯ ಪಡೆಯುವ ಆರ್ಹತೆ ನಿಮಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ನೀವು ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿ. ಇಲ್ಲವೇ ಎಸ್ ಎಂಎಸ್ (SMS) ಕಳುಹಿಸುವ ಮೂಲಕ ಕೂಡ ಈ ಬಗ್ಗೆ ಮಾಹಿತಿ ಪಡೆಯಬಹುದು. ಇನ್ನು ಬ್ಯಾಂಕಿನ ಕಸ್ಟಮರ್ ಕೇರ್ (Customer care) ಎಕ್ಸಿಕ್ಯುಟಿವ್ ಅವರನ್ನು ಸಂಪರ್ಕಿಸಿ ಕೂಡ ಈ ಬಗ್ಗೆ ವಿಚಾರಿಸಬಹುದು. ಇ-ಕಾಮರ್ಸ್ (e-commerce) ವೆಬ್ ಸೈಟ್ ಮೂಲಕ ಕೂಡ ಮಾಹಿತಿ ಚೆಕ್ ಮಾಡಬಹುದು.

287ರೂ. ಪಿಜ್ಜಾ ಆರ್ಡರ್ ರದ್ದುಗೊಳಿಸಿದ ಝೊಮ್ಯಾಟೊಗೆ ಬಿತ್ತು 10,000ರೂ. ದಂಡ!

ಖರೀದಿಯನ್ನು ಇಎಂಐಗೆ ಮಾರ್ಪಾಡು ಮಾಡೋದು ಹೇಗೆ?
ನಿಮ್ಮ ಉತ್ಪನ್ನವನ್ನು ಖರೀದಿಸಿ. ಅಂಗಡಿಯ ಸಹಾಯಕರಿಗೆ ನಿಮ್ಮ ಡೆಬಿಟ್ ಕಾರ್ಡ್ (Debit card) ಅನ್ನು ಇಎಂಐ ಸ್ವೈಪ್ ಮಾಡಲು ಹೇಳಿ. ಆನ್ ಲೈನ್ ನಲ್ಲಿ ಖರೀದಿ ಮಾಡುವಾಗ ಕೂಡ ನಿಮಗೆ ಈ ಆಯ್ಕೆ ಸಿಗುತ್ತದೆ. ಎಷ್ಟು ಅವಧಿಗೆ ಇಎಂಐ ಪಡೆಯಬೇಕು ಎಂದು ಬಯಸಿದ್ದೀರಿ ಅದನ್ನು ಕೂಡ ನಮೂದಿಸಿ. ಆ ಬಳಿಕ ಶುಲ್ಕ ಸ್ಲಿಪ್ ಗೆ ಸಹಿ ಮಾಡಿ.ಒಮ್ಮೆ ಬ್ಯಾಂಕ್ (Bank) ನಿಮ್ಮ ಮನವಿ ಪುರಸ್ಕರಿಸಿದ್ರೆ, ವಹಿವಾಟಿನ ಹಣವನ್ನು ಹಿಂತಿರುಗಿಸಲಾಗುತ್ತದೆ ಹಾಗೂ ತಾತ್ಕಾಲಿಕ ಇಎಂಐ ಕಂತುಗಳ ಖಾತೆಯನ್ನು ನೀವು ಆಯ್ಕೆ ಮಾಡಿರುವ ಅವಧಿ ಆಧಾರದಲ್ಲಿ ಸೃಷ್ಟಿಸಲಾಗುತ್ತದೆ. ಒಂದು ವೇಳೆ ನೀವು ಅನುಮತಿ ನೀಡಿರುವ ಮಿತಿಗಿಂತ ಹೆಚ್ಚಿನ ಮೊತ್ತದ ಹಣವನ್ನು ನಮೂದಿಸಿದ್ರೆ ಆಗ ನಿಮ್ಮ ಇಎಂಐ (EMI) ಮನವಿಯನ್ನು ತಿರಸ್ಕರಿಸಲಾಗುತ್ತದೆ. 

Provident Fraud: 1000 ಕೋಟಿ ರೂ. ಪಿಎಫ್‌ ಹಗರಣ ಬೆಳಕಿಗೆ: ಹಲವು ಮುಚ್ಚಿದ ಕಂಪನಿ ನೌಕರರ ಪಿಎಫ್‌ ಕ್ಲೇಮ್‌

ಕ್ರೆಡಿಟ್ (Credit) ಹೊಂದಿರದ ಗ್ರಾಹಕರಿಗೆ (Customers) ತುರ್ತು ಸಂದರ್ಭಗಳಲ್ಲಿ ಡೆಬಿಟ್ ಕಾರ್ಡ್ ಮೇಲೆ ಇಎಂಐ (EMI) ಪಡೆಯುವ ಸೌಲಭ್ಯ ಖಂಡಿತಾ ವರದಾನವಾಗಲಿದೆ. ಆದರೆ, ಇಎಂಐ ಪಾವತಿಯನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮಾಡೋದು ಅಗತ್ಯ ಇಲ್ಲವಾದ್ರೆ ಆ ಮೊತ್ತದ ಮೇಲೆ ಬಡ್ಡಿ (Interest) ಬೀಳುತ್ತದೆ. ಇದ್ರಿಂದ ಹೊರೆ ಹೆಚ್ಚುತ್ತ ಹೋಗಬಹುದು. ಹಾಗಾಗಿ ಇಎಂಐ (EMI) ಪಡೆಯುವ ಸೌಲಭ್ಯ ಇದೆಯೆಂದು ಎಲ್ಲ ಕಡೆ ಬಳಸಬೇಡಿ. ಬದಲಿಗೆ ನಿಮಗೆ ಅತ್ಯಗತ್ಯವಾಗಿದ್ರೆ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಿ. 

Follow Us:
Download App:
  • android
  • ios