Asianet Suvarna News Asianet Suvarna News

ಮಕಾಡೆ ಮಲಗಿದ ಸೆನ್ಸೆಕ್ಸ್: ನಿಮಗೂ ಕಾದಿದೆ ಶಾಕ್!

ದಾಖಲೆ ಕುಸಿತ ಕಂಡ ಮುಂಬೈ ಷೇರು ಮಾರುಕಟ್ಟೆ! ದೇಶಿಯ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ! ಯೆಸ್ ಬ್ಯಾಂಕ್ ನಿರ್ದೇಶಕ ರಾಣಾ ಕಪೂರ್ ವಜಾ!  ದಾಖಲೆ ಕುಸಿತ ಕಂಡ ಯೆಸ್ ಬ್ಯಾಂಕ್ ಷೇರುಗಳು 

Sensex swings nearly 1,500 points
Author
Bengaluru, First Published Sep 21, 2018, 6:10 PM IST

ಮುಂಬೈ(ಸೆ.21): ಷೇರು ಮಾರುಕಟ್ಟೆ ವ್ಯವಹಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಇಂದು ಬೆಳಗ್ಗೆ 300 ಅಂಕ ಏರಿಕೆ ಕಂಡು ಹುಮ್ಮಸ್ಸು ಮೂಡಿಸಿದ್ದ ಮುಂಬೈ ಷೇರು ಸೂಚ್ಯಂಕ, ಮಧ್ಯಾಹ್ನದ ವೇಳೆ ದಿಢೀರ್​ ಕುಸಿತ ಕಂಡು ತಲ್ಲಣ ಸೃಷ್ಟಿಸಿತು.

ಒಂದು ಹಂತದಲ್ಲಿ 1100 ಅಂಕಗಳ ಕುಸಿತ ಕಂಡು, ಸೆನ್ಸೆಕ್ಸ್​ 35,993 ಅಂಶಗಳಿಗೆ ಇಳಿಕೆ ಕಂಡಿತ್ತು. ಬಳಿಕ 600 ಅಂಕ ಚೇತರಿಸಿಕೊಂಡು 36600 ಕ್ಕೆ ಬಂದು ತಲುಪಿತು.  

ಯೆಸ್​ ಬ್ಯಾಂಕ್ ನಿರ್ದೇಶಕ ಹಾಗೂ ಸಿಇಒ ರಾಣಾ ಕಪೂರ್ ಅವರನ್ನು ಸ್ಥಾನದಿಂದ ಕೆಳಗಿಳಿಸುವಂತೆ ಆರ್ ಬಿಐ ಸೂಚಿಸಿದ ಬೆನ್ನಲ್ಲೇ, ಯಶ್ ಬ್ಯಾಂಕ್ ಷೇರುಗಳು ಒಂದೇ ದಿನ ಶೇ.34ರಷ್ಟು ಕುಸಿತ ಕಂಡಿದೆ. ಇಂದು ಶೇ. 34ರಷ್ಟು ನಷ್ಟ ಅನುಭವಿಸುವ ಮೂಲಕ ಯೆಸ್​ ಬ್ಯಾಂಕ್​ ಹೂಡಿಕೆದಾರರಿಗೆ ಬಿಗ್​ ಶಾಕ್​ ನೀಡಿದೆ. 

ಇನ್ನು ಪಿಎನ್​ಬಿ, ಫೆಡರಲ್​ ಬ್ಯಾಂಕ್​​, ಬ್ಯಾಂಕ್​ ಆಫ್​ ಬರೋಡಾ, ಕೊಟಕ್​ ಬ್ಯಾಂಕ್​, ಎಸ್​​ಬಿಐ ಷೇರುಗಳು ಶೇ. 7.44 ರಷ್ಟು ಕುಸಿತ ಕಂಡವು. ಡಿಎಚ್​ಎಲ್​ಎಫ್​ ಷೇರುಗಳ ಇಂಟರ್​ ಡೇ ಟ್ರೇಡಿಂಗ್​ನಲ್ಲಿ ಶೇ. 50ರಷ್ಟು ಕುಸಿತ ಕಂಡಿವೆ.

Follow Us:
Download App:
  • android
  • ios