ಸೆನ್ಸೆಕ್ಸ್ ಗೂಳಿ ಹೂಂಕಾರಕ್ಕೆ ಹೂಡಿಕೆದಾರರ ಕುಣಿತ36 ರ ಗಡಿ ದಾಟಿ ಮುನ್ನುಗ್ಗಿದ ಸೆನ್ಸೆಕ್ಸ್ ಸೂಚ್ಯಂಕಐಟಿ, ಗ್ಯಾಸ್, ಪಬ್ಲಿಕ್ ಸೆಕ್ಟರ್ ಷೇರುಗಳಲ್ಲಿ ಹೆಚ್ಚಳನಿಫ್ಟಿ ಕೂಡ 10,900 ಅಂಶಗಳಿಗೆ ಏರಿಕೆ
ಮುಂಬೈ(ಜು.10): ಜಾಗತಿಕ ವ್ಯಾಪಾರ ಯುದ್ಧದ ಹಿನ್ನೆಲೆಯಲ್ಲಿ ಕುಸಿತದ ಹಾದಿ ಹಿಡಿದಿದ್ದ ಸೆನ್ಸೆಕ್ಸ್ ಚೇತರಿಕೆ ಕಾಣುವ ಲಕ್ಷಣ ಗೋಚರವಾಗಿದೆ. 36 ಸಾವಿರದಿಂದ ಕೆಳಗಿಳಿದಿದ್ದ ಸೆನ್ಸೆಕ್ಸ್ ಮತ್ತೆ 36 ರ ಗಡಿ ದಾಟಿ ಮುನ್ನುಗ್ಗುತ್ತಿರುವುದೇ ಇದಕ್ಕೆ ಸಾಕ್ಷಿ.
ಇಂದು ಷೇರುಪೇಟೆ ರಿಂಗ್ ಬಾರಿಸುತ್ತಿದ್ದಂತೆ 200 ಅಂಕಗಳ ಏರಿಕೆ ದಾಖಲಿಸುವ ಮೂಲಕ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 36,138 ಅಂಕಗಳಿಗೆ ಏರಿಕೆಯಾಯಿತು. ಪ್ರಮುಖ 30 ಷೇರುಗಳ ಇಂಡೆಕ್ಸ್ 238 ಅಂಶಗಳಷ್ಟು ಏರಿಕೆ ದಾಖಲಿಸಿತು. ಐಟಿ, ಇಂಧನ, ಗ್ಯಾಸ್, ಟೆಕ್, ಆಟೋ, ಪಬ್ಲಿಕ್ ಸೆಕ್ಟರ್ ಷೇರುಗಳಲ್ಲಿ ಹೆಚ್ಚಳ ಕಂಡುಬಂದವು.
ಇನ್ನು ರಾಷ್ಟ್ರೀಯ ಷೇರು ಪೇಟೆ ನಿಫ್ಟಿ 10,900 ಅಂಶಗಳಿಗೆ ಏರಿಕೆ ದಾಖಲಿಸಿತು. ಇಂದು 61.85 ಅಂಕ ಏರಿಕೆ ಕಾಣುವ ಮೂಲಕ 10,914 ಅಂಕಗಳಿಗೆ ತಲುಪಿತು. ಯೆಸ್ ಬ್ಯಾಂಕ್, ಆರ್ಐಎಲ್, ಅದಾನಿ ಪೋರ್ಟ್ಸ್, ಹೆಚ್ಡಿಎಫ್ಸಿ, ಬಜಾಜ್ ಆಟೋ, ಭಾರ್ತಿ ಏರ್ಟೆಲ್, ಟಾಟಾಸ್ಟೀಲ್, ಇನ್ಫೋಸಿಸ್ ಷೇರುಗಳ ಬೆಲೆ ಸರಿ ಸುಮಾರು 1.72 ರಷ್ಟು ಏರಿಕೆ ಕಂಡವು.
